# BP News Karnataka > BP News Karnataka ## Posts - [ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ](https://bisiloorapost.com/cbse-10th-class-results-announced/): ನವದೆಹಲಿ, ಏ.15: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 2026ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಸುಮಾರು 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ನಿರೀಕ್ಷೆಗೆ ತೆರೆಬಿದ್ದಿದೆ. ಫೆಬ್ರವರಿ 17ರಿಂದ ಮಾರ್ಚ್ 11ರವರೆಗೆ ನಡೆದಿದ್ದ ಪರೀಕ್ಷೆಗಳ ಫಲಿತಾಂಶಗಳು ಇದೀಗ ಲಭ್ಯವಾಗಿದ್ದು, ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣಗಳಾದ results.cbse.nic.in ಹಾಗೂ cbse.gov.in ಗೆ ಭೇಟಿ ನೀಡಿ ಮುಖ್ಯ ಪುಟದಲ್ಲಿ ಕಾಣುವ 10ನೇ ತರಗತಿ ಫಲಿತಾಂಶ ಸಂಬಂಧಿತ ಕೊಂಡಿಯನ್ನು ಆಯ್ಕೆ ಮಾಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶ ವೀಕ್ಷಿಸಲು ಪ್ರವೇಶ ಸಂಖ್ಯೆ, ಶಾಲಾ ಸಂಖ್ಯೆ ಹಾಗೂ ಪ್ರವೇಶ ಪತ್ರ ಗುರುತು ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿದೆ. ಇದಲ್ಲದೆ, DigiLocker ಮೂಲಕವೂ ಅಂಕಪಟ್ಟಿಗಳು ಲಭ್ಯವಿದ್ದು, ವಿದ್ಯಾರ್ಥಿಗಳು ‘ಅಪಾರ್ ಗುರುತು ಸಂಖ್ಯೆ(APAAR ID) ಅಥವಾ ಶಾಲೆಯಿಂದ ನೀಡಲಾದ ಆರು ಅಂಕಿಗಳ ಭದ್ರತಾ ಸಂಕೇತವನ್ನು ಬಳಸಿಕೊಂಡು […] - [ರಾಗಿ ಮುದ್ದೆ ಗುಣಗಾನ ಮಾಡಿದ ಪ್ರಧಾನಿ ಮೋದಿ; ಯುವಕರಿಗೆ ಮುದ್ದೆ ಸೇವನೆಗೆ ಕರೆ](https://bisiloorapost.com/pm-narendra-modi-praises-ragi-mudde-urges-youth-to-include-it-in-their-diet/): ಮಂಡ್ಯ, ಏ.15: ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದು ಶಕ್ತಿಯ ಮೂಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ರಾಗಿ ಮುದ್ದೆಯನ್ನು ಪ್ರಸಿದ್ಧಗೊಳಿಸಿರುವುದನ್ನು ಉಲ್ಲೇಖಿಸಿದ ಮೋದಿ, ಯುವಕರು ರಾಗಿ ಮುದ್ದೆ ಸೇರಿದಂತೆ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕು ಎಂದು ಕರೆ ನೀಡಿದರು. ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಸಂಸ್ಕೃತಿ ಹಾಗೂ ಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕರ್ನಾಟಕಕ್ಕೆ ಬರುವುದು ಸದಾ ಸಂತೋಷ ತಂದೀತು. ಇಲ್ಲಿಗೆ ಬಂದಾಗ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಮತ್ತಷ್ಟು ವಿಶೇಷಗೊಳಿಸಿದೆ ಎಂದು ಮೋದಿ ಹೇಳಿದರು. ಕರ್ನಾಟಕದ ಮಣ್ಣಿನ ವೈಶಿಷ್ಟ್ಯವನ್ನು ಬಣ್ಣಿಸಿದ ಅವರು, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ ಎಂದರು. ಇಲ್ಲಿ ಆಧ್ಯಾತ್ಮಿಕ ಆಳವೂ ಇದೆ, ತಂತ್ರಜ್ಞಾನದ ಶಕ್ತಿಯೂ ಇದೆ. ಆದಿಚುಂಚನಗಿರಿ […] - [ಕೇವಲ ಇಪ್ಪತ್ತು ರೂಪಾಯಿ ವೆಚ್ಚದಲ್ಲಿ ಹೃದಯಾಘಾತದ ಅಪಾಯ ಕಡಿಮೆ ಮಾಡಬಹುದು!](https://bisiloorapost.com/heart-attack-risk-can-be-reduced-with-just-20/): ತುರ್ತು ಸಂದರ್ಭಕ್ಕೆ ಸರಳ ಮಾರ್ಗದರ್ಶನ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಕೈಗೊಳ್ಳುವ ಪ್ರಾಥಮಿಕ ಕ್ರಮಗಳು ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ವಯೋವೃದ್ಧರು, ರಕ್ತದೊತ್ತಡ (ಬಿ.ಪಿ), ಸಕ್ಕರೆ ಕಾಯಿಲೆ ಅಥವಾ ಕೊಲೆಸ್ಟರಾಲ್ ಸಮಸ್ಯೆ ಹೊಂದಿರುವವರು ಎದೆನೋವು ಅನುಭವಿಸಿದಾಗ, ಆಸ್ಪತ್ರೆಗೆ ತಲುಪುವವರೆಗೂ ಸಮಯ ಗಳಿಸುವುದು ಅತ್ಯಂತ ಮುಖ್ಯ ಎಂದು ವೈದ್ಯ ತಜ್ಞರಾದ ಡಾ. ಮಹೇಂದ್ರಕುಮಾರ್ ಸಲಹೆ ನೀಡಿದ್ದಾರೆ. ತುರ್ತು ಸಂದರ್ಭದಲ್ಲಿ ವೈದ್ಯರು ತಕ್ಷಣ ಲಭ್ಯವಿಲ್ಲದಿದ್ದರೆ, ಕೆಲ ಸಾಮಾನ್ಯ ಔಷಧಿಗಳನ್ನು ಬಳಸುವುದರಿಂದ ಹೃದಯಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದಾಗಿದೆ. ಇದು ಹೃದಯಾಘಾತ (Myocardial Infarction) ತೀವ್ರತೆಯನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ ಹಾಗೂ ಮುಂದಿನ ಚಿಕಿತ್ಸೆಗಾಗಿ ವೈದ್ಯರಿಗೆ ಅಗತ್ಯ ಸಮಯವನ್ನು ಒದಗಿಸುತ್ತದೆ. ತುರ್ತು ಸಂದರ್ಭದಲ್ಲಿ jotಬೇಕಾದ ಮಾತ್ರೆಗಳು: ಮಾತ್ರೆಗಳನ್ನು ತೆಗೆದುಕೊಳ್ಳುವ ವಿಧಾನ: ಮುಖ್ಯ ಸೂಚನೆಗಳು: ಈ ಸಂದರ್ಭಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬಾರದು: ವೈದ್ಯಕೀಯ ಸಲಹೆ ಅವಶ್ಯ:ಈ ವಿಧಾನವನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ದೃಢೀಕರಿಸಿಕೊಳ್ಳುವುದು ಅತ್ಯಂತ ಮುಖ್ಯ. […] - [ಬಳ್ಳಾರಿ: ಅಂಬೇಡ್ಕರ್ ಜಯಂತಿ ಆಚರಣೆ; ವೃದ್ಧಾಶ್ರಮದಲ್ಲಿ ಸೇವಾ ಕಾರ್ಯಕ್ರಮ](https://bisiloorapost.com/ballari-ambedkar-jayanti-celebrated-service-activities-at-old-age-home/): ಬಳ್ಳಾರಿ, ಏ.14: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ಬಳ್ಳಾರಿ ನಗರದಲ್ಲಿ ಜಿಲ್ಲಾ ಅಂಬೇಡ್ಕರ್ ಸೇನೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಹೆಗಡೆ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಅಂಬೇಡ್ಕರ್ ಭವನದ ಆವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಜಯಂತಿಯ ಪ್ರಯುಕ್ತ ಬಳ್ಳಾರಿಯ ಗಾಂಧಿನಗರದಲ್ಲಿರುವ ಸೂರ್ಯ ನಿವಾಸ್ ವೃದ್ಧಾಶ್ರಮದಲ್ಲಿ ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶಿವಕುಮಾರ್ ಹೆಗಡೆ ಅವರು, “ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ; ಅವರು ಎಲ್ಲಾ ಜನಾಂಗಗಳ ನಾಯಕರಾಗಿದ್ದಾರೆ. ಅವರು ರಚಿಸಿದ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಗಳು ದೊರೆತಿವೆ. ಅದಕ್ಕಾಗಿ ಅವರ ಜಯಂತಿಯನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ,” ಎಂದು ಹೇಳಿದರು.ಅಂಬೇಡ್ಕರ್ ಸೇನೆಯ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಹೋರಾಟಗಳನ್ನು ಮುಂದುವರಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ […] - [ಬಿಹಾರದ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಸಾಮ್ರಾಟ್ ಚೌಧರಿ ನಾಳೆ ಅಧಿಕಾರ ಸ್ವೀಕಾರ](https://bisiloorapost.com/nitish-kumar-resigns-as-bihar-cm-samrat-choudhary-to-assume-office-tomorrow/): ಪಾಟ್ನಾ, ಏ.14: ಬಿಹಾರದಲ್ಲಿ ದಶಕಗಳ ಕಾಲ ರಾಜಕೀಯವನ್ನು ಮುನ್ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಹೊಸ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದೆ. ನಿತೀಶ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಮ್ರಾಟ್ ಚೌಧರಿಯನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಅವರು ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ್ದ ನಿತೀಶ್ ಕುಮಾರ್ ಅವರು ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದ ಬಳಿಕ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಅವರು, ಮುಂದಿನ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ರಾಜೀನಾಮೆಗೂ ಮುನ್ನ […] - [ಮೇ 29ರಿಂದ ಶಾಲೆಗಳು ಆರಂಭ: 2026-27ರ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ](https://bisiloorapost.com/schools-to-reopen-from-may-29-academic-calendar-for-202627-released/): ಬೆಂಗಳೂರು, ಏ.14: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗಾಗಿ 2026-27ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಯನ್ನು ನಿಗದಿಪಡಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಒಟ್ಟು ಕಾರ್ಯದಿನಗಳು, ರಜಾದಿನಗಳು ಹಾಗೂ ಶೈಕ್ಷಣಿಕ ಚಟುವಟಿಕೆ ಅವಧಿಗಳನ್ನು ಪರಿಗಣಿಸಿ ಕಾರ್ಯಸೂಚಿ ರೂಪಿಸಲಾಗಿದೆ. ಈ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇ 29ರಿಂದ ಹೊಸ ಶೈಕ್ಷಣಿಕ ವರ್ಷ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ರಂದು ಆರಂಭವಾಗಲಿದೆ. ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದ್ದು, ದಸರಾ ರಜೆ ಅಕ್ಟೋಬರ್ 3ರಿಂದ 21ರವರೆಗೆ ಇರಲಿದೆ. ಎರಡನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್ 10ರವರೆಗೆ ಮುಂದುವರಿಯಲಿದೆ. ಒಟ್ಟು 365 ದಿನಗಳಲ್ಲಿ 119 ರಜಾದಿನಗಳು ಹಾಗೂ 245 ಕರ್ತವ್ಯದ ದಿನಗಳನ್ನು […] - [ಐಪಿಎಲ್ ಪಂದ್ಯಗಳಿಗೆ ವಿಶೇಷ ಸಂಚಾರ ಸೌಲಭ್ಯ: ಮೆಟ್ರೋ ಅವಧಿ ವಿಸ್ತರಣೆ, ಬಿಎಂಟಿಸಿ ವಿಶೇಷ ಬಸ್‌ಗಳು](https://bisiloorapost.com/special-transport-arrangements-for-ipl-matches-metro-timings-extended-in-bengaluru/): ಬೆಂಗಳೂರು, ಏ.14: ಐಪಿಎಲ್ 2026 ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಮತ್ತು ಬಿಎಂಟಿಸಿ ವಿಶೇಷ ಸಂಚಾರ ವ್ಯವಸ್ಥೆಗಳನ್ನು ಕಲ್ಪಿಸಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಏಪ್ರಿಲ್ 15 ಮತ್ತು 24ರಂದು ನಡೆಯಲಿರುವ ನೈಟ್ ಪಂದ್ಯಗಳ ಹಿನ್ನೆಲೆ ಮೆಟ್ರೋ ಸೇವೆಯ ಅವಧಿಯನ್ನು ವಿಸ್ತರಿಸಿದೆ. ಆ ದಿನಗಳಲ್ಲಿ ಅಂತಿಮ ರೈಲು ಸೇವೆಗಳು ಮುಂದಿನ ದಿನ ಬೆಳಗಿನ 2 ಗಂಟೆಯವರೆಗೆ ಲಭ್ಯವಿರಲಿವೆ. ನಾಡಪ್ರಭು ಕೆಂಪೇಗೌಡ (ಮಜೆಸ್ಟಿಕ್) ನಿಲ್ದಾಣದಿಂದ ಎಲ್ಲಾ ದಿಕ್ಕುಗಳಿಗೆ ರಾತ್ರಿ 1.30ರವರೆಗೆ ರೈಲುಗಳು ಸಂಚರಿಸಲಿವೆ. ಆದರೆ, ಏಪ್ರಿಲ್ 18ರಂದು ಮಧ್ಯಾಹ್ನ ಪಂದ್ಯ ಇರುವುದರಿಂದ ಆ ದಿನ ಸಾಮಾನ್ಯ ವೇಳಾಪಟ್ಟಿಯೇ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಐಪಿಎಲ್ ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ಡಿಜಿಟಲ್ ಟಿಕೆಟ್‌ನಲ್ಲಿರುವ ಕ್ಯೂಆರ್ ಕೋಡ್ ಮೂಲಕ ಎರಡು ದಿಕ್ಕಿನ ಮೆಟ್ರೋ ಪ್ರಯಾಣ ಸೌಲಭ್ಯವನ್ನು ನೀಡಲಾಗುತ್ತಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶಿಸಲು ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ. ಇದರ ಜೊತೆಗೆ, ವಿವಿಧ […] - [ಕದಿರೇನಹಳ್ಳಿಯಲ್ಲಿ ಭೀಮೋತ್ಸವ; ಕೆಆರ್‌ಎಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ](https://bisiloorapost.com/bheemotsava-in-kadirenahalli-ambedkar-jayanti-celebrated-by-krs/): ಬೆಂಗಳೂರು, ಏ.14: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ನಗರದ ಕದಿರೇನಹಳ್ಳಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ವತಿಯಿಂದ ವೈಭವದ ‘ಭೀಮೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೈಕ್ ರ್ಯಾಲಿಗೆ ಚಾಲನೆ ಕದಿರೇನಹಳ್ಳಿ ಪಾರ್ಕ್‌ನಿಂದ ಆರಂಭವಾದ ಬೈಕ್ ರ್ಯಾಲಿಗೆ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಚಾಲನೆ ನೀಡಿದರು. ಸಾರಕ್ಕಿ, ಜಯನಗರ, ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿ ಹಾಗೂ ಯಾರಬ್ ನಗರ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಂಚರಿಸಿದ ರ್ಯಾಲಿ ಬಳಿಕ ಕಾರ್ಯಕ್ರಮದ ವೇದಿಕೆಯನ್ನು ತಲುಪಿತು. ಕದಿರೇನಹಳ್ಳಿಯ ಅಂಬೇಡ್ಕರ್ ಪ್ರತಿಮೆಗೆ ಪಕ್ಷದ ರಾಜ್ಯಾಧ್ಯಕ್ಷರಾದ ದೀಪಕ್ ಸಿ.ಎನ್. ಹಾಗೂ ರಾಜ್ಯ ಎಸ್.ಸಿ/ಎಸ್.ಟಿ ಘಟಕದ ಅಧ್ಯಕ್ಷರಾದ ಪ.ಯ. ಗಣೇಶ್ ಅವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ವಿಶೇಷ ಚೇತನರಿಗೆ ವೀಲ್‌ಚೇರ್‌ಗಳನ್ನು ವಿತರಿಸಲಾಯಿತು. ಜೊತೆಗೆ 50ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ […] - [ಸರ್ಕಾರಿ ಸಭೆಗಳಲ್ಲಿ ಪೌಷ್ಟಿಕ ಆಹಾರಕ್ಕೆ ಆದ್ಯತೆ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ](https://bisiloorapost.com/priority-to-nutritious-food-in-government-meetings-guidelines-issued-by-health-department/): ಬೆಂಗಳೂರು, ಏ.14: ಸರ್ಕಾರಿ ಸಭೆ ಹಾಗೂ ಸಮಾರಂಭಗಳಲ್ಲಿ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸಿರಿಧಾನ್ಯ ಆಧಾರಿತ ಲಘು ಉಪಾಹಾರ, ಹಣ್ಣು–ತರಕಾರಿ ಸಲಾಡ್‌ಗಳು ಹಾಗೂ ಕಡಿಮೆ ಕೊಬ್ಬು–ಕಡಿಮೆ ಸಕ್ಕರೆ ಪದಾರ್ಥಗಳನ್ನು ನೀಡಲು ಶಿಫಾರಸು ಮಾಡಲಾಗಿದೆ. ಸಂಸ್ಕರಿಸಿದ, ಹುರಿದ ಹಾಗೂ ಹೆಚ್ಚಿನ ಸಕ್ಕರೆಯ ಪದಾರ್ಥಗಳನ್ನು ತಪ್ಪಿಸಲು ಇಲಾಖೆ ಸೂಚಿಸಿದ್ದು, ಸರ್ಕಾರಿ ಕಚೇರಿಗಳಲ್ಲಿ ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಉತ್ತಮ ಆಹಾರ ಪದ್ಧತಿಗಳನ್ನು ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ನೀಡಲಾಗುವ ಆಹಾರವು ಪೌಷ್ಟಿಕಾಂಶದ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ವಿಚಾರವನ್ನು ಇಲಾಖೆ ಗಮನಕ್ಕೆ ತಂದಿದೆ. ಆಂತರಿಕ ಸಭೆಗಳಲ್ಲಿ ಸಿರಿಧಾನ್ಯ ತಿಂಡಿಗಳು, ಹೆಚ್ಚಿನ ಫೈಬರ್ ಹೊಂದಿದ ಆಹಾರ ಹಾಗೂ ಅಜಿನೊಮೊಟೋ ರಹಿತ ಪದಾರ್ಥಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ. ತಾಜಾ ಹಣ್ಣುಗಳು, ತರಕಾರಿ ಸಲಾಡ್‌ಗಳು, ಮೊಳಕೆಕಾಳುಗಳು ಮತ್ತು ಉಪ್ಪುರಹಿತ ಬೀಜಗಳನ್ನು ನೀಡಲು ಪ್ರೋತ್ಸಾಹಿಸಲಾಗಿದೆ. ಪಾನೀಯಗಳಲ್ಲಿ ಗ್ರೀನ್ ಟೀ, ಕಡಿಮೆ ಕೊಬ್ಬಿನ ಮಜ್ಜಿಗೆ ಹಾಗೂ ಫಿಲ್ಟರ್ ಮಾಡಿದ ನೀರಿಗೆ ಆದ್ಯತೆ […] - [ಬೀದಿ ವ್ಯಾಪಾರಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ: ಇಂದು ಧರಣಿ ಸತ್ಯಾಗ್ರಹ](https://bisiloorapost.com/demand-to-resolve-street-vendors-issues-protest-held-today/): ಸಿಂಧನೂರು, ಏ.13: ನಗರದ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ ಇಂದು ಸರಕಾರಿ ಹಣ್ಣಿನ ತೋಟದ ಮುಂದೆ ವ್ಯಾಪಾರಿಗಳು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ನಗರದ ವ್ಯಾಪಾರಿಗಳಿಗೆ ಪುಟ್‌ಪಾತ್ ಮೇಲೆ ಪುನಃ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೂ ಮೊದಲು 03-01-2026 ರಂದು ಮುಖ್ಯಮಂತ್ರಿಗಳ ಭೇಟಿ ವೇಳೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದರೂ, ಶಾಸಕ ಬಾದರ್ಲಿ ಹಂಪನಗೌಡ ಅವರು ಹೋರಾಟ ಸಮಿತಿಯವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ಅದೇ ರೀತಿ 06-01-2026 ರಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಹೇಳಲಾಗಿದ್ದರೂ, ಇಂದಿನವರೆಗೂ ಸಭೆ ನಡೆಯದೆ ಇರುವುದಾಗಿ ವ್ಯಾಪಾರಿಗಳು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು 15 ದಿನಗಳೊಳಗೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಹೈಕೋರ್ಟ್ ಮತ್ತು ಭೂ ಕಬಳಿಕೆ ನಿಷೇಧ […] - [ವಿಶ್ವದ ಮೊದಲ ವನ್ಯಜೀವಿ–ಪಶುವೈದ್ಯಕೀಯ ವಿವಿ ಸ್ಥಾಪನೆ: ಅನಂತ್ ಅಂಬಾನಿ ಘೋಷಣೆ](https://bisiloorapost.com/establishment-of-the-worlds-first-wildlifeveterinary-university-announcement-by-anant-ambani/): ಗುಜರಾತ್, ಏ.11: ಅನಂತ್ ಅಂಬಾನಿ ಅವರ ಮುಂದಾಳತ್ವದಲ್ಲಿ ಸ್ಥಾಪಿತವಾದ ಜಾಗತಿಕ ವನ್ಯಜೀವಿ ಸಂರಕ್ಷಣ ಸಂಸ್ಥೆ ವನತಾರಾ ಗುಜರಾತ್‌ನ ಜಾಮ್‌ನಗರದಲ್ಲಿ “ವನತಾರಾ ವಿಶ್ವವಿದ್ಯಾನಿಲಯ” ಸ್ಥಾಪಿಸುವುದಾಗಿ ಘೋಷಿಸಿದೆ. ವನ್ಯಜೀವಿ ಸಂರಕ್ಷಣೆ ಹಾಗೂ ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ವಿಶ್ವದ ಮೊದಲ ಸಂಯೋಜಿತ ಜಾಗತಿಕ ವಿಶ್ವವಿದ್ಯಾನಿಲಯವೆಂದು ಇದು ಗುರುತಿಸಿಕೊಳ್ಳಲಿದೆ. ಈ ವಿಶ್ವವಿದ್ಯಾನಿಲಯವು ಪ್ರಾಣಿಗಳ ಕಲ್ಯಾಣ, ವೈಜ್ಞಾನಿಕ ಪ್ರಗತಿ ಹಾಗೂ ವನ್ಯಜೀವಿ ಸಂರಕ್ಷಣೆಯ ಭವಿಷ್ಯದ ಮೇಲೆ ಕೇಂದ್ರೀಕೃತವಾಗಿದ್ದು, ಪಶುವೈದ್ಯಕೀಯ ಕ್ಷೇತ್ರ, ಸಂರಕ್ಷಣೆ ಮತ್ತು ವನ್ಯಜೀವಿ ಆರೈಕೆಯಲ್ಲಿ ಮುಂದಿನ ಪೀಳಿಗೆಯ ನಾಯಕರನ್ನು ರೂಪಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, “ಸಂರಕ್ಷಣೆಯ ಭವಿಷ್ಯವು ಕರುಣೆ, ಜ್ಞಾನ ಮತ್ತು ಕೌಶಲದ ಮೇಲೆ ಅವಲಂಬಿತವಾಗಿದೆ. ಪ್ರಾಚೀನ ನಳಂದಾ ವಿಶ್ವವಿದ್ಯಾಲಯ ಆದರ್ಶಗಳಿಂದ ಪ್ರೇರಿತವಾಗಿ, ‘ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬ ಮಂತ್ರದ ಆಶಯದೊಂದಿಗೆ ಈ ವಿಶ್ವವಿದ್ಯಾನಿಲಯವು ಪ್ರತಿಯೊಂದು ಜೀವವನ್ನು ರಕ್ಷಿಸಲು ಬದ್ಧವಾದ ಪೀಳಿಗೆಯನ್ನು ರೂಪಿಸಲಿದೆ” ಎಂದು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದ ವೈಶಿಷ್ಟ್ಯಗಳು ವನತಾರಾ ವಿಶ್ವವಿದ್ಯಾನಿಲಯವು ಕೇವಲ ಶೈಕ್ಷಣಿಕ ಸಂಸ್ಥೆಯಾಗಿರದೆ, […] - [ಪೀಣ್ಯ ಫ್ಲೈಓವರ್ ಐದು ದಿನ ಬಂದ್; ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ](https://bisiloorapost.com/peenya-flyover-closed-for-five-days-alternative-routes-arranged-for-traffic/): ಬೆಂಗಳೂರು, ಏಪ್ರಿಲ್ 11: ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನ ಕೇಬಲ್ ದುರಸ್ತಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಂತಿಮ ಹಂತದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ 13ರಿಂದ ಐದು ದಿನಗಳ ಕಾಲ ಮೇಲ್ಸೇತುವೆಯನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಪೀಣ್ಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 13ರ ಬೆಳಗ್ಗೆ 5 ಗಂಟೆಯಿಂದ ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಈ ಅವಧಿಯಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಪರ್ಯಾಯ ಮಾರ್ಗಗಳ ವಿವರ: ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ವಿಡಿಯಾ ಸಮೀಪ ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಹಾಗೂ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಮತ್ತು ಗೊರಗುಂಟೆಪಾಳ್ಯ ಮೂಲಕ ಸಂಚರಿಸಬಹುದಾಗಿದೆ. ಅದೇ ರೀತಿ ಸಿಎಂಟಿಐನಿಂದ ನೆಲಮಂಗಲ ಕಡೆಗೆ ಸಾಗುವ […] - [ದಾಖಲೆ ಬರೆದ ದಮ್ಮೂರು ಬೃಂದಾ ಪಿಯು ಕಾಲೇಜು; ತಾಲೂಕಿಗೆ ನಂ.1 ಸ್ಥಾನ](https://bisiloorapost.com/record-breaking-brinda-pu-college-dammur-secures-no-1-position-in-the-taluk/): ದಮ್ಮೂರು, ಏ.10: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದಮ್ಮೂರಿನ ಬೃಂದಾ ಪಿಯು ಕಾಲೇಜು ಶೇಕಡಾ 100 ಫಲಿತಾಂಶದೊಂದಿಗೆ ಗಮನ ಸೆಳೆದಿದ್ದು, ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ. ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ಐಚ್ಛಿಕ ವಿಷಯಗಳಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದು, ಹಲವರು ನೂರಕ್ಕೆ ನೂರು ಅಂಕಗಳನ್ನು ಪಡೆದು ಗ್ರಾಮೀಣ ಭಾಗದ ಶಿಕ್ಷಣದ ಮಟ್ಟವನ್ನು ಮತ್ತಷ್ಟು ಎತ್ತಿಹಿಡಿದಿದ್ದಾರೆ. ಸೈನ್ಸ್ ವಿಭಾಗದಲ್ಲಿ ನಯನಶ್ರೀ ಬಿ ಮಣ್ಣೂರ್ 571 ಅಂಕಗಳು (95.16%) ಗಳಿಸಿ ಹಾಗೂ ಕಾಮರ್ಸ್ ವಿಭಾಗದಲ್ಲಿ ಕೌಸರ್ ಪಿ 570 ಅಂಕಗಳು (95%) ಪಡೆದು ಕಾಲೇಜಿನ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇಬ್ಬರೂ ತಮ್ಮ ತಮ್ಮ ವಿಭಾಗಗಳಲ್ಲಿ ಕುರುಗೋಡು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇನ್ನು ಸೈನ್ಸ್ ವಿಭಾಗದಲ್ಲಿ ಪಿ. ಪ್ರತೂಷ (94.67%), ಸಿಂಚನ (94%), ಎ. ರಾಜೇಶ್ವರಿ (93.67%), ಇ. ಹಾರಿಕ (91.67%), ರಂಜಿತ ಎಂ.ಎಂ (90.17%), ವೈಷ್ಣವಿ ಬೋಂದ್ರೆ (89.17%), ಚೈತನ್ಯ ಡಿ.ಜಿ (88.67%), ಎಂ. ಸಿಂಧು (88%), ವಂದನಾ […] - [ಅಮೆರಿಕ–ಇರಾನ್ ಮಾತುಕತೆ ಹಿನ್ನೆಲೆ: ಪಾಕಿಸ್ತಾನ ಮೇಲೆ ನಂಬಿಕೆ ಇಲ್ಲ— ಇಸ್ರೇಲ್ ರಾಯಭಾರಿ](https://bisiloorapost.com/amid-u-s-iran-talks-no-trust-in-pakistan-israeli-ambassador/): ನವದೆಹಲಿ, ಏ.10: ಅಮೆರಿಕ–ಇರಾನ್ ಶಾಂತಿ ಮಾತುಕತೆಗೂ ಮುನ್ನ ಪಾಕಿಸ್ತಾನದ ಪಾತ್ರದ ಬಗ್ಗೆ ಇಸ್ರೇಲ್ ತೀವ್ರ ಅನುಮಾನ ವ್ಯಕ್ತಪಡಿಸಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಪಾಕಿಸ್ತಾನವನ್ನು ಇಸ್ರೇಲ್ ನಂಬುವುದಿಲ್ಲ ಮತ್ತು ಅಮೆರಿಕವೂ ಇದೇ ರೀತಿಯ ದೃಷ್ಟಿಕೋನ ಹೊಂದಿದೆ ಎಂದು ಹೇಳಿದ್ದಾರೆ. ಎನ್.ಡಿ.ಟಿ.ವಿ ಜೊತೆ ಮಾತನಾಡಿದ ಅವರು, “ನಾವು ಪಾಕಿಸ್ತಾನಿಗಳನ್ನು ನಂಬುವುದಿಲ್ಲ. ಅಮೆರಿಕ ಅವರುಗಳನ್ನು ಎಷ್ಟರ ಮಟ್ಟಿಗೆ ನಂಬುತ್ತದೆ ಎಂಬುದರ ಬಗ್ಗೆ ಅತಿಯಾದ ನಿರೀಕ್ಷೆ ಇಡಬಾರದು. ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪಾತ್ರ ಕೇವಲ ಸಹಾಯಕವಾಗಿದ್ದು, ಅದಕ್ಕಿಂತ ಹೆಚ್ಚೇನೂ ಅಲ್ಲ” ಎಂದು ಸ್ಪಷ್ಟಪಡಿಸಿದರು. ಅಮೆರಿಕ–ಇರಾನ್ ಮಾತುಕತೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಕುರಿತು ಮಾತನಾಡಿದ ಅವರು, ಪರಿಸ್ಥಿತಿಯನ್ನು ನಿಭಾಯಿಸಲು ಇಸ್ರೇಲ್ ಪಾಕಿಸ್ತಾನವನ್ನಲ್ಲ, ಅಮೆರಿಕವನ್ನೇ ಅವಲಂಬಿಸಿದೆ ಎಂದು ಹೇಳಿದರು. “ಈ ಎರಡು ವಾರಗಳ ವಿರಾಮ ಅವಧಿಯಲ್ಲಿ ಅಮೆರಿಕ ಏನು ಕ್ರಮ ಕೈಗೊಳ್ಳುತ್ತದೆ ಎಂಬುದೇ ಮುಖ್ಯ. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ನಾವು ಅವರ ಮೇಲೆಯೇ ಭರವಸೆ ಇಟ್ಟಿದ್ದೇವೆ” ಎಂದರು. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಪಾಕಿಸ್ತಾನ ಖಂಡನೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ […] - [ಪಿಯುಸಿ ಫಲಿತಾಂಶದಲ್ಲಿ ಸತ್ಯಂ ಪಿಯು ಕಾಲೇಜು ಸಾಧನೆ: ಉನ್ನತ ಅಂಕಗಳೊಂದಿಗೆ ವಿದ್ಯಾರ್ಥಿಗಳು ಉತ್ತೀರ್ಣ](https://bisiloorapost.com/satyam-pu-college-shines-in-puc-results-students-pass-with-high-scores/): ಬಳ್ಳಾರಿ, ಏ. 09: ಬಳ್ಳಾರಿಯ ಸತ್ಯಂ ಪದವಿ ಪೂರ್ವ ಕಾಲೇಜು 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಮೇಲುಗೈ ಮತ್ತೊಮ್ಮೆ ಸಾಬೀತಾಗಿದೆ. ದಾವಣಗೆರೆಯ ಖ್ಯಾತ ಸರ್ ಎಂವಿ ಸಂಸ್ಥೆಯ ಅಕಾಡೆಮಿಕ್ ಸಹಕಾರದೊಂದಿಗೆ ಶಿಕ್ಷಣ ನೀಡುತ್ತಿರುವ ಈ ಕಾಲೇಜು, ಉತ್ತಮ ಫಲಿತಾಂಶಗಳ ಮೂಲಕ ತನ್ನ ಗುಣಮಟ್ಟವನ್ನು ತೋರಿಸಿದೆ. ಈ ವರ್ಷದ ಫಲಿತಾಂಶಗಳಲ್ಲಿ ಕಾಲೇಜಿನ ಹಲವು ವಿದ್ಯಾರ್ಥಿಗಳು ಉನ್ನತ ಅಂಕಗಳನ್ನು ಪಡೆದಿದ್ದಾರೆ. 587, 586, 585 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಮೆರೆದಿದ್ದು, 580ಕ್ಕೂ ಹೆಚ್ಚು ಅಂಕಗಳನ್ನು 8 ಮಂದಿ ಪಡೆದಿದ್ದಾರೆ. 575ರಿಂದ 579ರೊಳಗೆ 9 ವಿದ್ಯಾರ್ಥಿಗಳು ಹಾಗೂ 570ರಿಂದ 574ರೊಳಗೆ 10 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ. ಒಟ್ಟು 550ಕ್ಕೂ ಹೆಚ್ಚು ಅಂಕಗಳನ್ನು 58 ವಿದ್ಯಾರ್ಥಿಗಳು ಪಡೆದಿರುವುದು ವಿಶೇಷ. ಫಲಿತಾಂಶದ ವಿವರಗಳ ಪ್ರಕಾರ, 86 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ (ಶೇ.67.2) ಪಡೆದಿದ್ದು, 40 ವಿದ್ಯಾರ್ಥಿಗಳು ಪ್ರಥಮ ದರ್ಜೆ (ಶೇ.31.3) ಮತ್ತು 1 ವಿದ್ಯಾರ್ಥಿ ದ್ವಿತೀಯ ದರ್ಜೆ (ಶೇ.0.8) ಗಳಿಸಿದ್ದಾರೆ. ವಿದ್ಯಾರ್ಥಿಗಳ […] - [ಮೇ 1: ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ](https://bisiloorapost.com/may-1-consecration-ceremony-at-maniyoor-sri-shasthara-temple/): ಕಾಸರಗೋಡು, ಏ.09: ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಜೀರ್ಣೋದ್ದಾರ ಅಂಗವಾಗಿ ನಾಗನಕಟ್ಟೆ, ರಕೇಶ್ವರಿ ಕಟ್ಟೆ ಹಾಗೂ ಬ್ರಹ್ಮರಕ್ಷಸಿ ಕಟ್ಟೆಗಳಲ್ಲಿ ಪ್ರತಿಷ್ಠಾ ಕಾರ್ಯಕ್ರಮವು ಮೇ 1ರಂದು ನಡೆಯಲಿದೆ. ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ರವೀಶ ತಂತ್ರಿಗಳ ನಿರ್ದೇಶನದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ. ಕಾರ್ಯಕ್ರಮಗಳ ವಿವರ: ಏಪ್ರಿಲ್ 30ರಂದು ಗುರುವಾರ ಸಂಜೆ 5 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ನಂತರ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷಘ್ನ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆಯಲಿವೆ. ಮೇ 1ರಂದು ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹವನ ಮತ್ತು ಬ್ರಹ್ಮಕಲಶ ಪೂಜೆ ನಡೆಯಲಿದ್ದು, ಬೆಳಿಗ್ಗೆ 10.18ರಿಂದ 11.16ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ […] - [ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉತ್ತೀರ್ಣ ಪ್ರಮಾಣದಲ್ಲಿ ದಾಖಲೆಯ ಏರಿಕೆ!](https://bisiloorapost.com/puc-ii-results-announced-record-increase-in-pass-percentage/): ಬೆಂಗಳೂರು, ಏಪ್ರಿಲ್ 9: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದ್ದು, ಈ ಬಾರಿ ಫಲಿತಾಂಶದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ. ಈ ಬಾರಿ ಒಟ್ಟು ಶೇ.86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದಿಗಿಂತ ಶೇ.12ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು. ಈ ವರ್ಷ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರೊಂದಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಶಿಕ್ಷಣ ಇಲಾಖೆ ಈ ಫಲಿತಾಂಶವನ್ನು ಮಹತ್ವದ ಸಾಧನೆ ಎಂದು ಪರಿಗಣಿಸಿದ್ದು, ವಿದ್ಯಾರ್ಥಿಗಳ ಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದೆ. - [‘ದಿ ಅಲ್ಚೆಮಿಸ್ಟ್’: ಕನಸು, ಪ್ರಯಾಣ ಮತ್ತು ಬದುಕಿನ ಸರಳ ಪಾಠಗಳು](https://bisiloorapost.com/article-written-by-akshatha-koppala-2/): ಪುಸ್ತಕ ವಿಮರ್ಶೆ: ಅಕ್ಷತಾ ಕೊಪ್ಪಳ ಜಗತ್ತಿನ ಪ್ರಸಿದ್ಧ ಕೃತಿ ‘ದಿ ಅಲ್ಚೆಮಿಸ್ಟ್’ (The Alchemist) ಓದುಗರ ಮನಸ್ಸನ್ನು ಸೆಳೆಯುವ ಪ್ರೇರಣಾದಾಯಕ ಕಾದಂಬರಿಯಾಗಿದೆ. ಖ್ಯಾತ ಲೇಖಕ ಪೌಲೊ ಕೊಯಿಲ್ಹೊ( Paulo Coelho) ಅವರ ಈ ಕೃತಿ, ಜೀವನದ ಅರ್ಥವನ್ನು ಹುಡುಕುವ ಒಬ್ಬ ಯುವಕನ ಕಥೆಯನ್ನು ಸರಳವಾಗಿ ಹೇಳುತ್ತದೆ. ಈ ಕೃತಿ ಓದುವಾಗ ಮನಸ್ಸಿಗೆ ನಾಟುವ ಅನೇಕ ವಿಚಾರಗಳು ತಿಳಿಯುತ್ತವೆ. ‘ದಿ ಅಲ್ಚೆಮಿಸ್ಟ್’ ಕಥೆಯು ತನ್ನ ಕನಸನ್ನು ಸಾಧಿಸಲು ಹೊರಡುವ ಒಬ್ಬ ಹುಡುಗನ ಬಗ್ಗೆ ಇರುವಂತದ್ದು. ಅವನು ಈಜಿಪ್ಟ್‌ನ ಪಿರಮಿಡ್‌ಗಳ ಬಳಿ ಒಂದು ಖಜಾನೆ ಇದೆ ಎಂದು ಕನಸು ಕಾಣುತ್ತಾನೆ. ಒಬ್ಬ ಜ್ಯೋತಿಷಿ ಅವನಿಗೆ ಅಲ್ಲೊಂದು ಖಜಾನೆ ಇದೆ ಮತ್ತು ಅದನ್ನು ಹುಡುಕುವುದು ನಿನ್ನ ವಿಧಿ ಎಂದು ಹೇಳುತ್ತಾನೆ. ಇದರಿಂದ ಪ್ರೇರಿತನಾದ ಹುಡುಗನು ತನ್ನ ಊರನ್ನು ಬಿಟ್ಟು, ಕುರಿಗಾಹಿಯಾಗಿ ಇದ್ದ ಜೀವನದಿಂದ ಹೊರಬಂದು, ಖಜಾನೆಯನ್ನು ಹುಡುಕಲು ದೂರ ಪ್ರಯಾಣ ಆರಂಭಿಸುತ್ತಾನೆ. ಈ ಪ್ರಯಾಣದಲ್ಲಿ ಅವನು ಹಲವರನ್ನು ಭೇಟಿ ಮಾಡುತ್ತಾನೆ. ಅವನು ಕುರಿಗಳನ್ನು ಸಾಕುವುದರಿಂದಲೇ ಎಲ್ಲವನ್ನೂ […] - [ಕೇರಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ: 140 ಕ್ಷೇತ್ರಗಳಲ್ಲಿ ನಾಳೆ ಮತದಾನ](https://bisiloorapost.com/countdown-to-kerala-assembly-elections-voting-tomorrow-in-140-constituencies/): ತಿರುವನಂತಪುರಂ, ಏಪ್ರಿಲ್ 8: ಕೇರಳ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಯಿದ್ದು, ಮತದಾನಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಒಟ್ಟು 883 ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಹಾಗೂ ಸ್ವತಂತ್ರರ ಪ್ರವೇಶದಿಂದ ಸ್ಪರ್ಧೆ ತೀವ್ರಗೊಂಡಿದ್ದು, ಕೆಲವೆಡೆ ಬಹುಕೋನೀಯ ಪೈಪೋಟಿ ಕಂಡುಬರುತ್ತಿದೆ. ಐಎಎನ್‌ಎಸ್ ವರದಿ ಪ್ರಕಾರ, ರಾಜ್ಯದಲ್ಲಿ ಸುಮಾರು 2.7 ಕೋಟಿ ಮತದಾರರಿದ್ದು, 30,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಹೆಚ್ಚಿನ ಪ್ರಮಾಣದ ಮತದಾನ ಸಂಭವಿಸುವ ನಿರೀಕ್ಷೆಯಿದೆ. ಸಂಖ್ಯೆಗಳಾಚೆಗೆ ಕೇರಳ ರಾಜಕೀಯದಲ್ಲಿ ವಿಶೇಷ ಸನ್ನಿವೇಶ ಕಾಣಿಸುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) 2021ರಲ್ಲಿ ಮತ್ತೆ ಅಧಿಕಾರಕ್ಕೆ ಬಂದು ಪರಂಪರാഗത ಆಡಳಿತ ಬದಲಾವಣೆಯ ಸಂಪ್ರದಾಯವನ್ನು ಮುರಿದಿತ್ತು. ಈ ಬಾರಿ ನಿರಂತರ ಆಡಳಿತ, ಕಲ್ಯಾಣ ಯೋಜನೆಗಳು ಹಾಗೂ ಸಂಘಟಿತ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಮತದಾರರ ಬೆಂಬಲವನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಸ್ಥಳೀಯ ಅಸಮಾಧಾನ ಹಾಗೂ ಮತಕ್ಷೇತ್ರ […] - [ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯಲು ಕೇಂದ್ರ ಸರ್ಕಾರದ ಸೂಚನೆ!](https://bisiloorapost.com/centre-directs-indians-in-iran-to-leave-the-country-immediately/): ಟೆಹ್ರಾನ್, ಏಪ್ರಿಲ್ 8: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಇರಾನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಯುದ್ಧ ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿರುವುದರಿಂದ, “ತಕ್ಷಣ ದೇಶ ತೊರೆಯಿರಿ” ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಬಲವಾದ ಸೂಚನೆ ನೀಡಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಭಾರತೀಯರು ಲಭ್ಯವಿರುವ ಸುರಕ್ಷಿತ ಮಾರ್ಗಗಳನ್ನು ಬಳಸಿಕೊಂಡು ವಿಳಂಬ ಮಾಡದೆ ಇರಾನ್ ತೊರೆಯುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ರಾಯಭಾರ ಕಚೇರಿಯೊಂದಿಗೆ ಸಮನ್ವಯವಿಲ್ಲದೆ ಯಾವುದೇ ಅಂತರರಾಷ್ಟ್ರೀಯ ಗಡಿಗಳನ್ನು ಸಮೀಪಿಸಲು ಪ್ರಯತ್ನಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ತುರ್ತು ನೆರವಿಗಾಗಿ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳ ನಂತರವೇ ಭಾರತ ಈ ಸೂಚನೆಯನ್ನು ನೀಡಿರುವುದು ಗಮನಾರ್ಹ. ಫೆಬ್ರುವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ಬಳಿಕ ಈ […] - [‘ಅಲಂಕಾರ್’ ಮಿಷನ್ ಮೂಲಕ ಅರ್ಕಾವತಿ ಪುನಶ್ಚೇತನ: ವಂದೇ ಭಾರತಂ ಸಹಭಾಗಿತ್ವ](https://bisiloorapost.com/arkavathi-rejuvenation-through-alankar-mission-vande-bharat-participation/): ಬೆಂಗಳೂರು, ಏಪ್ರಿಲ್ 8: ನಗರದ ಜೀವನಾಡಿಯಾಗಿರುವ ಅರ್ಕಾವತಿ ನದಿ ಹಾಗೂ ಅದರ ವ್ಯಾಪ್ತಿಯಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸಲು ‘ಅಲಂಕಾರ್’ (ALANCAR – Arkavathi Lakes and Catchment Area Rejuvenation) ಮಿಷನ್ ಆರಂಭಿಸಲಾಗಿದೆ ಎಂದು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಬಿಜ್ಜವರ ಎಚ್. ಲೋಕೇಶ್ ತಿಳಿಸಿದ್ದಾರೆ. ಸ್ನೇಹಿತರ ಬಳಗ ಹಾಗೂ ಆಲ್ಟ್ ಟೆಕ್ ಫೌಂಡೇಶನ್ (AltTech Foundation) ಜೊತೆ ಕೈಜೋಡಿಸಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿರುವುದಾಗಿ ಅವರು ಹೇಳಿದ್ದಾರೆ. ಅರ್ಕಾವತಿ ನದಿ ಮತ್ತು ಅದರ ಹರಿವು ಪ್ರದೇಶದಲ್ಲಿರುವ ಎಲ್ಲಾ ಕೆರೆಗಳನ್ನು ವೈಜ್ಞಾನಿಕವಾಗಿ ಶುಚಿಗೊಳಿಸುವುದು, ನೀರು ಮತ್ತು ಮಣ್ಣಿನ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಪರಿಸರ ಸಮತೋಲನವನ್ನು ಪುನಃಸ್ಥಾಪಿಸುವುದು ಈ ಮಿಷನ್‌ನ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿದಿನ ಸುಮಾರು 180 ಮಿಲಿಯನ್ ಲೀಟರ್ ಮಲಿನ ನೀರನ್ನು ಶುದ್ಧೀಕರಿಸುವ ಮೂಲಕ ಬೆಂಗಳೂರಿನ ಒಟ್ಟು ಮಲಿನ ನೀರಿನ ಸುಮಾರು 10 ಶೇಕಡಾ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಅಲಂಕಾರ್ ಮಿಷನ್‌ಗೆ ವಂದೇ ಭಾರತಂ ಫೌಂಡೇಶನ್, […] - [ಅಮೆರಿಕ-ಇರಾನ್ ಉದ್ವಿಗ್ನತೆಗೆ ತಾತ್ಕಾಲಿಕ ವಿರಾಮ: ದಾಳಿ ಸ್ಥಗಿತ, ಎರಡು ವಾರಗಳ ಕದನ ವಿರಾಮ!](https://bisiloorapost.com/temporary-pause-in-us-iran-tensions-strike-suspended-two-week-ceasefire-declared/): ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ಇರಾನ್ ಮೇಲಿನ ಭಾರೀ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ತಮ್ಮ ದಾಳಿ ನಿರ್ಧಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಎರಡು ವಾರಗಳ ಕದನ ವಿರಾಮಕ್ಕೆ ಸಮ್ಮತಿಸಿದ್ದಾರೆ. ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ಯುದ್ಧದ ಪರಿಣಾಮವಾಗಿ ಜಗತ್ತಿನ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಬಂದ್ ಆಗಿತ್ತು. ಇದೀಗ ಇರಾನ್ ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ. ಈ ಹಿಂದೆ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದರಿಂದ ಯುದ್ಧಾಪರಾಧದ ಆತಂಕ ವ್ಯಕ್ತವಾಗಿದ್ದು, ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವಲಯದಲ್ಲಿ ಚಿಂತೆ ಮೂಡಿತ್ತು. ಇದೀಗ ಇರಾನ್ ನೀಡಿರುವ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ […] - [ಬಳ್ಳಾರಿ ಬಸ್ ಸ್ಟ್ಯಾಂಡ್ ಶೌಚಾಲಯ ಅವ್ಯವಸ್ಥೆ: ವಿಭಾಗೀಯ ನಿಯಂತ್ರಣಾಧಿಕಾರಿಗೆ ಪ್ರಶ್ನೆ ಫೌಂಡೇಶನ್ ಸಂಸ್ಥಾಪಕ ಅರುಣ್ ಭೂಪಾಲ್ ಪತ್ರ](https://bisiloorapost.com/ballari-bus-stand-toilet-mismanagement-prashne-foundation-founder-arun-bhupal-writes-to-district-controller/): ಬಳ್ಳಾರಿ, ಏ.7: ನಗರದ ಹೊಸ ಬಸ್ ಸ್ಟ್ಯಾಂಡ್‌ನ ಸಾರ್ವಜನಿಕ ಶೌಚಾಲಯದಲ್ಲಿ ಅವ್ಯವಸ್ಥೆ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ನಡೆಯುತ್ತಿರುವ ಬಗ್ಗೆ ಪ್ರಶ್ನೆ ಫೌಂಡೇಶನ್ ಸಂಸ್ಥಾಪಕ ಹಾಗೂ ವಕೀಲ ಅರುಣ್ ಭೂಪಾಲ್ ಅವರು ಗಮನ ಸೆಳೆದಿದ್ದಾರೆ. ಈ ಸಂಬಂಧ ಅವರು ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು, ಶೌಚಾಲಯದಲ್ಲಿ ಸ್ವಚ್ಛತೆ ಕೊರತೆ, ಸಮರ್ಪಕ ನಿರ್ವಹಣೆಯ ಅಭಾವ ಹಾಗೂ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯವಾಗಿರುವ ಶೌಚಾಲಯದ ದುಸ್ಥಿತಿ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಮನವಿಯಲ್ಲಿ ಸಂಬಂಧಿತ ಗುತ್ತಿಗೆದಾರರ ವಿರುದ್ಧ ತಕ್ಷಣ ತನಿಖೆ ನಡೆಸಬೇಕು, ಹೆಚ್ಚುವರಿ ಶುಲ್ಕ ವಸೂಲಿ ನಿಲ್ಲಿಸಬೇಕು, ನಿಯಮ ಉಲ್ಲಂಘಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಗುತ್ತಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಇದಲ್ಲದೆ, ಶೌಚಾಲಯದ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಸುಧಾರಿಸಿ, ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಅಧಿಕೃತ ದರಪಟ್ಟಿ ಪ್ರದರ್ಶಿಸುವಂತೆ ಒತ್ತಾಯಿಸಲಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಹಾಗೂ ಕಾನೂನು ಕ್ರಮಗಳನ್ನು […] - [ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ ಅನಂತ್ ಅಂಬಾನಿ ಭೇಟಿ; 12 ಕೋಟಿ ರೂ ದೇಣಿಗೆ ಘೋಷಣೆ!](https://bisiloorapost.com/anant-ambani-visits-rajarajeshwara-temple-pledges-12-crore-for-renovation/): ಕಣ್ಣೂರು, ಏ.7: ಭಾರತದ ಗಣ್ಯ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ರಾಜರಾಜೇಶ್ವರ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ಭಕ್ತರು ಹಾಗೂ ಸ್ಥಳೀಯರು ಆತ್ಮೀಯವಾಗಿ ಬರಮಾಡಿಕೊಂಡರು. ದೇವಸ್ಥಾನದಲ್ಲಿ ಪೊನ್ನುಂಕುಡಂ, ಪಟ್ಟಂ, ಥಾಲಿ, ನೆಯ್ಯಾಮೃತು ಸೇರಿದಂತೆ ವಿವಿಧ ಕಾಣಿಕೆಗಳನ್ನು ಅರ್ಪಿಸಿದ ಅವರು, ಅಶ್ವಮೇಧ ನಮಸ್ಕಾರ ಸಲ್ಲಿಸಿ ಭಕ್ತಿಭಾವ ವ್ಯಕ್ತಪಡಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಮಹತ್ವದ ನೆರವಾಗಿ, 3 ಕೋಟಿ ರೂ ಮೊತ್ತದ ಚೆಕ್ ಅನ್ನು ಅವರು ಹಸ್ತಾಂತರಿಸಿದರು. ಜೊತೆಗೆ, ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಒಟ್ಟು 12 ಕೋಟಿ ರೂ ನೆರವು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು. ದೇವಸ್ಥಾನದ ಪೂರ್ವಭಾಗದ ಗೋಪುರವು ಶತಮಾನಗಳ ಪಾರಂಪರ್ಯವನ್ನು ಹೊಂದಿದ್ದು, ಬಹುಕಾಲದಿಂದ ದುರಸ್ತಿ ಕಾಣದೇ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಪುನಃಸ್ಥಾಪನೆಗೆ ಅಗತ್ಯ ನೆರವು ಒದಗಿಸುವುದಾಗಿ ಅನಂತ್ ಅಂಬಾನಿ ಭರವಸೆ ನೀಡಿದರು. ಕಳೆದ ಹಲವು ವರ್ಷಗಳಿಂದ ಹಣಕಾಸಿನ ಕೊರತೆಯಿಂದ […] - [ಆಟೋ LPG ಕೊರತೆ ಹಿನ್ನೆಲೆ: ಪೆಟ್ರೋಲ್‌ಗೆ ಬದಲಾಯಿಸಿಕೊಳ್ಳಿ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ](https://bisiloorapost.com/auto-lpg-shortage-switch-to-petrol-union-minister-pralhad-joshi-advises/): ದಾವಣಗೆರೆ, ಏ.7: ದೇಶದಲ್ಲಿ ಆಟೋ LPG ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಆಟೋ ಚಾಲಕರು ತಾತ್ಕಾಲಿಕವಾಗಿ LPG ಬದಲು ಪೆಟ್ರೋಲ್ ಬಳಕೆಗೆ ಬದಲಾಯಿಸಿಕೊಳ್ಳುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದರು. ನಗರದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ದೇಶದಲ್ಲಿ ನಿರಂತರವಾಗಿ ಲಭ್ಯವಿರುವ ಇಂಧನವಾಗಿದ್ದು, ಆಟೋ LPG ವಿಶ್ವದ ಕೆಲವೇ ದೇಶಗಳಲ್ಲಿ ಮಾತ್ರ ದೊರೆಯುತ್ತದೆ ಎಂದು ಹೇಳಿದರು. ಕರ್ನಾಟಕದಲ್ಲಿ ಒಟ್ಟು 372 ಆಟೋ LPG ವಿತರಣಾ ಕೇಂದ್ರಗಳಿದ್ದು, ಇದರಲ್ಲಿ ಕೇವಲ 72 ಕೇಂದ್ರಗಳನ್ನು ಸರ್ಕಾರ ನಡೆಸುತ್ತಿದೆ. ಉಳಿದ 300 ಕೇಂದ್ರಗಳು ಖಾಸಗಿ ಕಂಪನಿಗಳಿಂದ ನಿರ್ವಹಣೆಯಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯ ಪರಿಣಾಮ LPG ದರ ಪ್ರತಿ ಕಿಲೋಗ್ರಾಂಗೆ 110 ರೂ.ವರೆಗೆ ಏರಿಕೆಯಾದರೂ, ಕೇಂದ್ರ ಸರ್ಕಾರ ತನ್ನ ಕೇಂದ್ರಗಳಲ್ಲಿ ದರ ಹೆಚ್ಚಿಸಿಲ್ಲ. ಸರ್ಕಾರದ ಕೇಂದ್ರಗಳಲ್ಲಿ ಪ್ರತಿ ಕಿಲೋಗ್ರಾಂ LPG ದರವು ಸುಮಾರು 89 ರೂ. ಮಟ್ಟದಲ್ಲಿದೆ ಎಂದು ವಿವರಿಸಿದರು. ದೇಶದಲ್ಲಿ ಒಟ್ಟು LPG ಅವಶ್ಯಕತೆಯಲ್ಲಿ ಸುಮಾರು 60 ಶೇಕಡಾ ದೇಶೀಯ ಉತ್ಪಾದನೆಯಾಗುತ್ತಿದ್ದು, […] - [ತ್ರಿಶಾ ಕಾಲೇಜುಗಳಲ್ಲಿ ದಾಖಲಾತಿ ಆರಂಭ; ಬಿ.ಕಾಂ., ಬಿ.ಸಿ.ಎ ಅಧ್ಯಯನಕ್ಕೆ ವಿದ್ಯಾರ್ಥಿಗಳ ಮೊದಲ ಆಯ್ಕೆ ತ್ರಿಶಾ ಸಂಸ್ಥೆ](https://bisiloorapost.com/admissions-open-at-trisha-colleges/): ಉಡುಪಿ, ಏ. 06: ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀಡುವ ತ್ರಿಶಾ ಸಂಸ್ಥೆಯ ಕಾಲೇಜುಗಳಲ್ಲಿ 2026–27ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. 1998ರಲ್ಲಿ ಉಡುಪಿಯಲ್ಲಿ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಕೇವಲ ಐದು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ತ್ರಿಶಾ ಕೋಚಿಂಗ್ ಸಂಸ್ಥೆ, ತನ್ನ ಗುಣಮಟ್ಟದ ತರಬೇತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯಿತು. ಬಳಿಕ ಮಂಗಳೂರು ಹಾಗೂ ಬೆಂಗಳೂರಿನಲ್ಲೂ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ. ಬಿ.ಕಾಂ. ಮತ್ತು ಬಿ.ಸಿ.ಎ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಿರುವ ತ್ರಿಶಾ ಸಂಸ್ಥೆ, ಪ್ರಸ್ತುತ ಕರಾವಳಿ ಭಾಗದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದು ಎಂದು ಹೆಸರಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ವಿಷಯ ತಜ್ಞರನ್ನು ಆಹ್ವಾನಿಸಿ ತರಬೇತಿ ನೀಡಲಾಗುತ್ತಿದ್ದು, ಇದುವರೆಗೆ 80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ. ವಿದ್ಯಾರ್ಥಿವೇತನ ಸೌಲಭ್ಯವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಕಳೆದ ವರ್ಷ 40 ಲಕ್ಷ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಗಿದೆ. ಸೈನಿಕರು […] - [ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರದ ಅಂತ್ಯಕ್ಕೆ ಕ್ಷಣಗಣನೆ: ಮೋದಿ ಘೋಷಣೆ!](https://bisiloorapost.com/countdown-begins-for-the-end-of-the-ldf-government-in-kerala-modi-declares/): ಪತ್ತನಂತಿಟ್ಟ, ಏ.04: ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರವನ್ನು ಪದಚ್ಯುತಗೊಳಿಸುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು, ಕಾರ್ಯಕರ್ತರಲ್ಲಿ ಬಲವಾದ ವಿಶ್ವಾಸ ಮೂಡಿದೆ ಎಂದು ಅವರು ಹೇಳಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದ ಬಿಜೆಪಿ ನೇತೃತ್ವದ ಎನ್‌ಡಿಎ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ಎಲ್‌ಡಿಎಫ್ ಆಡಳಿತಕ್ಕೆ ವಿದಾಯ ಹೇಳುವ ಮನೋಭಾವ ರಾಜ್ಯದ ಜನರಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು. ಕ್ರಿಶ್ಚಿಯನ್ ಜನಸಂಖ್ಯೆ ಹೆಚ್ಚಿರುವ ಈಶಾನ್ಯ ರಾಜ್ಯಗಳು ಹಾಗೂ ಗೋವಾದಲ್ಲಿ ಸಾಧಿಸಿರುವ ಅಭಿವೃದ್ಧಿಯಂತೆಯೇ ಕೇರಳದಲ್ಲೂ ಎನ್‌ಡಿಎ ಅಭಿವೃದ್ಧಿ ಸಾಧಿಸಲಿದೆ. ಅಗಾಧ ಸಾಮರ್ಥ್ಯ ಹೊಂದಿದ್ದರೂ ಕೇರಳವು ಅಭಿವೃದ್ಧಿಯಲ್ಲಿ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಗಳಿಗಿಂತ ಎನ್‌ಡಿಎ ಸರ್ಕಾರ ಕೇರಳದ ಅಭಿವೃದ್ಧಿಗೆ ಐದು ಪಟ್ಟು ಹೆಚ್ಚು ಅನುದಾನ ನೀಡಿದೆ ಎಂದು ಮೋದಿ ಹೇಳಿದ್ದಾರೆ. ಕೇರಳದ ಅಭಿವೃದ್ಧಿಗೆ ಭ್ರಷ್ಟಾಚಾರ ಮತ್ತು ಕೋಮುವಾದವೇ ಪ್ರಮುಖ ಅಡೆತಡೆಗಳಾಗಿದ್ದು, ಅವುಗಳನ್ನು ನಿವಾರಿಸಲು ಎಲ್‌ಡಿಎಫ್ ಅನ್ನು ಸೋಲಿಸುವ ಅಗತ್ಯವಿದೆ […] - [ರಾಜ್ಯದಲ್ಲಿ ನೀರಿನ ಕೊರತೆಯ ಭೀತಿ; ತುರ್ತು ಕ್ರಮಕ್ಕೆ ಸರ್ಕಾರ ಸೂಚನೆ](https://bisiloorapost.com/fear-of-water-shortage-in-the-state-government-directs-urgent-measures/): ಬೆಂಗಳೂರು, ಏ.04: ರಾಜ್ಯದಲ್ಲಿ ಬೇಸಿಗೆ ತಾಪಮಾನ ಏರಿಕೆಯಾಗುತ್ತಿರುವ ನಡುವೆಯೇ ಮಳೆ ಕೊರತೆ ಭೀತಿ ಹೆಚ್ಚಿದ್ದು, 207 ತಾಲ್ಲೂಕುಗಳಲ್ಲಿ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಂಪುಟ ಉಪ ಸಮಿತಿ ಹಲವು ಮಹತ್ವದ ಸೂಚನೆಗಳನ್ನು ನೀಡಿದೆ. ಈಗಾಗಲೇ ರಾಜ್ಯದ 60 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಹವಾಮಾನ ವೈಪರೀತ್ಯದ ಹಿನ್ನೆಲೆ ಈ ವರ್ಷ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಬಹುದು ಎಂದು ಮುನ್ಸೂಚನೆ ನೀಡಿದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೆಲ ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಜಲಾಶಯಗಳಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು, ಜಾನುವಾರುಗಳಿಗೆ ಮೇವು ಲಭ್ಯತೆಯನ್ನು ನಿರಂತರವಾಗಿ ಪರಿಶೀಲಿಸಬೇಕು, ಹಾಗೂ ಮನರೇಗಾ ಯೋಜನೆಯಡಿ ಜಲ ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ […] - [ಬೇಸಿಗೆ ರಜಾದಿನಗಳಲ್ಲಿ ‘ಕಟ್ಟುಕಥೆ’ ಮಕ್ಕಳ ಕಥಾ ಸ್ಪರ್ಧೆ; ಕಥೆಗಳಿಗೆ ಆಹ್ವಾನ](https://bisiloorapost.com/kattukathe-childrens-story-competition-during-summer-holidays-entries-invited/): ಬೆಂಗಳೂರು, ಏ.04: ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಬೇಸಿಗೆ ರಜಾದಿನಗಳಲ್ಲಿ, ಬೆಂಗಳೂರಿನ ಕಟ್ಟುಕಥೆ ಕಥಾಸ್ಪರ್ಧೆ ವೇದಿಕೆ ವತಿಯಿಂದ ‘ಕಟ್ಟುಕಥೆ’ ಮಕ್ಕಳ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಕ್ಕಳ ಅಕ್ಷರ ಪ್ರೀತಿಗೆ ವೇದಿಕೆ ಕಲ್ಪಿಸುವ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ದಿನಗಳ ನೆನಪುಗಳು, ಸ್ನೇಹಿತರ ಜೊತೆಗಿನ ಆಟ-ಪಾಠ, ಕುಟುಂಬದ ಸಿಹಿ ಕ್ಷಣಗಳು, ಊರಿನ ಸಂಸ್ಕೃತಿ, ರಜಾದಿನಗಳ ಅನುಭವಗಳು ಸೇರಿದಂತೆ ತಮ್ಮ ಜೀವನದ ವಿಭಿನ್ನ ಅನುಭವಗಳನ್ನು ಕಥೆಯ ರೂಪದಲ್ಲಿ ಕಟ್ಟಿಕೊಟ್ಟು ಕಳುಹಿಸಲು ಆಯೋಜಕರು ಕರೆ ನೀಡಿದ್ದಾರೆ. “ಕಥೆಯೊಂದನ್ನು ಕಟ್ಟೋಣ, ನೆನಪುಗಳ ಹೆಕ್ಕೋಣ, ಅಕ್ಷರಗಳ ಪುಂಜ ಸೃಷ್ಟಿಸೋಣ!” ಎಂಬ ಧ್ಯೇಯವಾಕ್ಯದೊಂದಿಗೆ ಈ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ವಿಭಜನೆ ಇಲ್ಲದೆ ಆಯ್ಕೆಯಾದ ಮೂರು ಉತ್ತಮ ಕಥೆಗಳಿಗೆ ಸಮಾನ ಗೌರವ ನೀಡಲಾಗುವುದು ಎಂದು ತಿಳಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಸ್ವರಚಿತ ಕಥೆಯನ್ನು ಕೈಬರಹದಲ್ಲಿ ಬರೆದು, ಅದರ ಸ್ಪಷ್ಟವಾದ ಚಿತ್ರವನ್ನು ತೆಗೆದು ವಾಟ್ಸಾಪ್ ಸಂಖ್ಯೆ 6360322392ಕ್ಕೆ ಕಳುಹಿಸಬೇಕು. ನಿಬಂಧನೆಗಳು: ಇನ್ನೇಕೆ […] - [ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು](https://bisiloorapost.com/former-lokayukta-justice-santosh-hegde-falls-ill-admitted-to-hospital/): ಬೆಂಗಳೂರು, ಏ.04: ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮದ ಮಧ್ಯೆ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಗರದಲ್ಲಿ ನಡೆದಿದೆ. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತೋಷ್ ಹೆಗ್ಡೆ ಅವರು ಭಾಷಣ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡರು. ಭಾಷಣ ಮುಗಿಸಿ ಕುಳಿತುಕೊಳ್ಳುವ ಸಂದರ್ಭದಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣವೇ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳು ಅವರನ್ನು ಹೈಗ್ರೌಂಡ್ಸ್ ಠಾಣೆ ಸಮೀಪದ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರ ಕಾರಿನಲ್ಲೇ ಸಂತೋಷ್ ಹೆಗ್ಡೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಸ್ತುತ ಅವರ ಆರೋಗ್ಯದ ಬಗ್ಗೆ ವೈದ್ಯರು ಗಮನ ವಹಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. - [ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್ ಬಂಧನ!](https://bisiloorapost.com/famous-malayalam-film-director-ranjith-arrested/): ಕೊಚ್ಚಿ, ಏ.03: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರನ್ನು ಲೈಂಗಿಕ ದೌರ್ಜನ್ಯ ಯತ್ನ ಆರೋಪದ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಮಹಿಳಾ ನಟಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ಸಂಜೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟಿಯ ಹೇಳಿಕೆಯ ಪ್ರಕಾರ, ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ರಂಜಿತ್ ಅವರು ಕಾರವಾನ್‌ಗೆ ಕರೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಸೋಮವಾರ ಕೊಚ್ಚಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದೀಗ ಅವರನ್ನು ತೊಡುಪುಝಾದಲ್ಲಿ ಪೊಲೀಸ್ ವಶದಲ್ಲಿರಿಸಲಾಗಿದೆ. ಶೀಘ್ರದಲ್ಲೇ ಕೊಚ್ಚಿ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಇಡುಕ್ಕಿ ಜಿಲ್ಲೆಯಿಂದ ಅವರನ್ನು ಬಂಧಿಸಲಾಗಿದೆ. ಮಹಿಳಾ ನಟಿಯ ಹೇಳಿಕೆಯನ್ನು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡ ನಂತರ ಪೊಲೀಸರು ಗೋಪ್ಯತೆಯಿಂದ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಮೆನ್ ಇನ್ ಸಿನೆಮಾ ಕಲೆಕ್ಟಿವ್ ಸಂಘಟನೆ, “ಉಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಸಿನಿಮಾ ನೀತಿ- ನಿಯಮಗಳಿದ್ದರೂ ಕೆಳಸ್ತರದಲ್ಲಿ ಬದಲಾವಣೆ ಕಾಣುತ್ತಿಲ್ಲ. […] - [ಸೇವಾಗ್ರಹ ಮಹತ್ವದ ಹೆಜ್ಜೆ: ರೈತರ ಭೂಮಿ–ಬದುಕು ಅಭಿವೃದ್ಧಿಗೆ ಒತ್ತು](https://bisiloorapost.com/sevagraha-a-major-step-towards-improving-farmers-land-and-livelihoods/): ಬಾಗಲಕೋಟೆ, ಏ. 03: ಜಿಲ್ಲೆಯ ಸಮೀರವಾಡಿಯ ಗೋದವಾರಿ ಬಯೋರಿಫೈನರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಬಕ್ಷಿ ಅವರನ್ನು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಬಿಜ್ಜವರ ಎಚ್. ಲೋಕೇಶ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸುಮಾರು 25 ಸಾವಿರ ರೈತರು, ಅವರ ಕುಟುಂಬಗಳು ಹಾಗೂ ಅವರ ಭೂಮಿ–ಬದುಕಿನ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು. ‘ಸೇವಾಗ್ರಹ: ಆರ್ಟ್ ಆಫ್ ಸರ್ವಿಂಗ್’ ಯೋಜನೆಯಡಿ ರೈತರ ಜೀವನಮಟ್ಟ ಸುಧಾರಣೆ, ಕೃಷಿಯಲ್ಲಿ ನವೀನ ತಂತ್ರಜ್ಞಾನಗಳ ಬಳಕೆ, ಜೀವನೋಪಾಯ ವೃದ್ಧಿ ಹಾಗೂ ಸಮಗ್ರ ಅಭಿವೃದ್ಧಿ ಸಾಧನೆ ಕುರಿತಂತೆ ಆಳವಾದ ಮಾತುಕತೆ ನಡೆಯಿತು. ಈ ಉಪಕ್ರಮದ ಮೂಲಕ ರೈತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಬಿಜ್ಜವರ ಎಚ್. ಲೋಕೇಶ್ ತಿಳಿಸಿದ್ದಾರೆ. - [ತಮಿಳುನಾಡು ವಿಧಾನಸಭೆ ಚುನಾವಣೆ: ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಅಣ್ಣಾಮಲೈಗೆ ತಪ್ಪಿದ ಟಿಕೆಟ್!](https://bisiloorapost.com/tamil-nadu-assembly-elections-bjp-releases-first-candidate-list-annamalai-denied-ticket/): ಚೆನ್ನೈ, ಏ.03: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹಲವು ಪ್ರಮುಖ ನಾಯಕರಿಗೆ ಅವಕಾಶ ನೀಡಲಾಗಿದ್ದು, ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಬಿಜೆಪಿ ಕಾರ್ಯತಂತ್ರ ರೂಪಿಸಿರುವುದು ಗೋಚರಿಸಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಇದ್ದರೂ, ಮೊದಲ ಪಟ್ಟಿಯಲ್ಲಿ ಅವರ ಹೆಸರು ಕಾಣಿಸದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮಾಹಿತಿಗಳ ಪ್ರಕಾರ, ಅಣ್ಣಾಮಲೈ ಅವರು ಕೊಯಮತ್ತೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದರೆಂದು ತಿಳಿದುಬಂದಿದೆ. ಆದರೆ, ಆ ಕ್ಷೇತ್ರದಲ್ಲಿ ಪ್ರಸ್ತುತ ಶಾಸಕಿ ವಾನತಿ ಶ್ರೀನಿವಾಸನ್ ಅವರನ್ನೇ ಪಕ್ಷವು ಮತ್ತೆ ಕಣಕ್ಕಿಳಿಸಿದೆ. ಇದೇ ವೇಳೆ, ಕೇಂದ್ರ ಸಚಿವ ಎಲ್. ಮುರುಗನ್ ಅವರನ್ನು ಅವಿನಾಶಿ (ಎಸ್‌ಸಿ) ಕ್ಷೇತ್ರದಿಂದ, ತಮಿಳಿಸೈ ಸೌಂದರರಾಜನ್ ಅವರನ್ನು ಮೈಲಾಪುರ್ ಕ್ಷೇತ್ರದಿಂದ ಹಾಗೂ ನೈನಾರ್ ನಾಗೇಂದ್ರನ್ ಅವರನ್ನು ಸಾತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ […] - [ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಆಕ್ಷೇಪ; ತಕ್ಷಣ ಮತದಾನಕ್ಕೆ ಒತ್ತಾಯ](https://bisiloorapost.com/objection-to-delay-in-bbmp-elections-demand-for-immediate-polling/): ಬೆಂಗಳೂರು, ಏ.02: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ತಕ್ಷಣ ಚುನಾವಣೆ ನಡೆಸುವಂತೆ ಮಾಜಿ ಕಾರ್ಪೊರೇಟರ್‌ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜನಪ್ರತಿನಿಧಿಗಳಿಲ್ಲದೆ ನಗರ ಆಡಳಿತ ನಡೆಯುತ್ತಿರುವ ಪರಿಣಾಮ, ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಗಳ ಕಾರ್ಯಪದ್ಧತಿಯಲ್ಲಿ ಅವ್ಯವಸ್ಥೆ ಮತ್ತು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ. ನಗರದಲ್ಲಿ ರಸ್ತೆ, ನೀರು, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಆಯ್ಕೆಯಾದ ಎಂಎಲ್‌ಎಗಳಿಗೆ ಬಿಬಿಎಂಪಿ ಚುನಾವಣೆ ನಡೆಸುವ ಉತ್ಸಾಹ ಕಾಣಿಸುತ್ತಿಲ್ಲವೆಂದು ಟೀಕಿಸಿದ ಅವರು, ಸರ್ಕಾರದ ಈ ನಡೆ ಪ್ರಜಾಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಉಚ್ಚ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿ ಶೀಘ್ರದಲ್ಲೇ ಚುನಾವಣೆ ಘೋಷಿಸಿ ನಡೆಸಬೇಕು ಎಂದು ಮಾಜಿ ಕಾರ್ಪೊರೇಟರ್‌ಗಳಾದ ಈ ಕೃಷ್ಣಪ್ಪ ಮತ್ತು ಯಶೋದಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದ ಆಡಳಿತ ಸುಧಾರಣೆಗಾಗಿ ಜನಪ್ರತಿನಿಧಿಗಳ ಆಯ್ಕೆ ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. - [ರಾಜಾ ರವಿವರ್ಮ ಕಲಾಕೃತಿ 167 ಕೋಟಿಗೆ ಹರಾಜು!](https://bisiloorapost.com/raja-ravi-varmas-artwork-auctioned-for-167-crore/): ಮುಂಬೈ, ಏ.02: ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದ್ದು, ರಾಜಾ ರವಿವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ತೈಲವರ್ಣ ಕಲಾಕೃತಿ ₹167 ಕೋಟಿಗೆ ಹರಾಜಾಗಿ ದೇಶದ ಅತ್ಯಂತ ದುಬಾರಿ ಕಲಾಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನಲ್ಲಿ ಬುಧವಾರ ನಡೆದ ಸ್ಯಾಫ್ರನ್ ಆರ್ಟ್ ಹರಾಜಿನಲ್ಲಿ ಈ ಅಪರೂಪದ ಕಲಾಕೃತಿಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಬಿಲಿಯನೇರ್ ಸೈರಸ್ ಪೂನವಾಲಾ ಖರೀದಿಸಿದ್ದಾರೆ. ಇದಕ್ಕೂ ಮುನ್ನ ಎಂಎಫ್ ಹುಸೇನ್ ಅವರ ‘ಅನ್‌ಟೈಟಲ್ಡ್ (ಗ್ರಾಮ ಯಾತ್ರಾ)’ ಚಿತ್ರ ₹118 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ದೆಹಲಿ ಮೂಲದ ಕಿರಣ್ ನಾಡರ್ ಅದನ್ನು ಖರೀದಿಸಿದ್ದರು. ಆದರೆ ಈಗ ರವಿವರ್ಮರ ಈ ಕಲಾಕೃತಿ ಆ ದಾಖಲೆಯನ್ನು ಮೀರಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. 1890ರಲ್ಲಿ ರಚಿಸಲಾದ ಈ ಚಿತ್ರದಲ್ಲಿ ತಾಯಿ ಯಶೋಧಾ ಮತ್ತು ಬಾಲ ಕೃಷ್ಣನ ನಡುವಿನ ಮಮತೆಯ ಕ್ಷಣವನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ. ಹಸುವಿನ ಬಳಿಯಲ್ಲಿ ಕುಳಿತು ಹಾಲು ಕರೆಯುತ್ತಿರುವ ಯಶೋಧಾಳ ಹಿಂದೆ ಲೋಟ ಹಿಡಿದು ನಿಂತಿರುವ ಕೃಷ್ಣನ […] - [ಸಂಸ್ಥೆಗಳಲ್ಲಿನ ಎಚ್.ಆರ್. ಕರ್ತವ್ಯ ಪಾಲಕರೇ ಅಥವಾ ಕೇವಲ ನಿಯಮ ಪಾಲಕರೇ?](https://bisiloorapost.com/article-written-by-shivaprasad-maniyooru-3/): ಲೇಖನ: ಶಿವಪ್ರಸಾದ್ ಮಣಿಯೂರು ಇಂದಿನ ಕಾರ್ಪೊರೇಟ್‌ ಲೋಕದಲ್ಲಿ “ಎಚ್.ಆರ್.” (Human Resource) ಎಂಬ ಪದವು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಸಂಸ್ಥೆಯ ಒಂದು ಪ್ರಮುಖ ಅಂಗವೆಂದು ಗುರುತಿಸಲ್ಪಡುವ ಈ ವಿಭಾಗವು, ಕೆಲಸಗಾರರ ಆಯ್ಕೆ, ತರಬೇತಿ, ವೇತನ ವ್ಯವಸ್ಥೆ ಮತ್ತು ಸಂಸ್ಥೆಯ ಒಳಾಂಗಣ ವ್ಯವಸ್ಥೆಗಳನ್ನು ನಿರ್ವಹಿಸುವ ಹೊಣೆ ಹೊತ್ತಿರುತ್ತದೆ. ಆದರೆ, ಇತ್ತೀಚಿನ ಅನುಭವಗಳು ಮತ್ತು ವಾಸ್ತವಿಕತೆಗಳನ್ನು ಗಮನಿಸಿದಾಗ, ಒಂದು ಮೂಲಭೂತ ಪ್ರಶ್ನೆ ಮೂಡುವುದು ಸಹಜ. ಈ ಎಚ್.ಆರ್. ವಿಭಾಗ ನಿಜವಾಗಿಯೂ “ಮಾನವ ಸಂಪನ್ಮೂಲ”ವನ್ನು ಮಾನವೀಯವಾಗಿ ನೋಡುತ್ತಿದೆಯೇ, ಅಥವಾ ಕೇವಲ ನಿಯಮ-ನಿಬಂಧನೆಗಳ ಪಾಲನೆಗಳಿಗೆ ಮಾತ್ರ ಸೀಮಿತವಾಗಿದೆಯೇ?! ಒಬ್ಬ ಯುವಕ ಅಥವಾ ಉದ್ಯೋಗಾಕಾಂಕ್ಷಿ ಹೊಸ ಸಂಸ್ಥೆಗೆ ಕಾಲಿಡುವಾಗ, ಅವನು ತನ್ನ ಕನಸುಗಳು, ಆಸೆಗಳು ಮತ್ತು ಭವಿಷ್ಯದ ಗುರಿಗಳನ್ನು ಹೊತ್ತು ಬರುತ್ತಾನೆ. ಸಾವಿರಾರು ಅಭ್ಯರ್ಥಿಗಳ ನಡುವೆ ಸ್ಪರ್ಧಿಸಿ, ವಿವಿಧ ಹಂತದ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ದಾಟಿ, ಅವನು ಆ ಕೆಲಸವನ್ನು ಪಡೆದುಕೊಳ್ಳುತ್ತಾನೆ. ಇದು ಅವನ ಜೀವನದ ಒಂದು ಮಹತ್ವದ ಸಾಧನೆಯಾಗಿರುತ್ತದೆ. ಆದರೆ, ಕೆಲಸಕ್ಕೆ ಸೇರಿದ ನಂತರ ಅವನಿಗೆ ದೊರೆಯಬೇಕಾದ ಮೂಲಭೂತ […] - [ದೇಶವ್ಯಾಪಿ ಜನಗಣತಿ ಪ್ರಕ್ರಿಯೆಗೆ ಚಾಲನೆ; ಎರಡು ಹಂತಗಳಲ್ಲಿ ಮಾಹಿತಿ ಸಂಗ್ರಹಣೆ](https://bisiloorapost.com/nationwide-census-process-begins-data-collection-in-two-phases/): ನವದೆಹಲಿ, ಏಪ್ರಿಲ್ 1: ದೇಶದಾದ್ಯಂತ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಇದು ಭವಿಷ್ಯದ ಕಲ್ಯಾಣ ಯೋಜನೆಗಳು ಹಾಗೂ ರಾಜಕೀಯ ಪ್ರತಿನಿಧಿತ್ವಕ್ಕೆ ಮಹತ್ವದ ಆಧಾರವಾಗಲಿದೆ. ಹಿಂದಿನ 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 1.21 ಶತಕೋಟಿ ಆಗಿದ್ದರೆ, ಇದೀಗ ಅದು 140 ಕೋಟಿಗೂ ಹೆಚ್ಚು ಆಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಭಾರತ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ COVID-19 ಸಾಂಕ್ರಾಮಿಕದ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಪ್ರಸ್ತುತ ಆರಂಭಗೊಂಡಿರುವ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಬುಧವಾರದಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಈ ಹಂತದಲ್ಲಿ ಗಣತಿದಾರರು ಮನೆಮನೆಗೆ ತೆರಳಿ ವಾಸಸ್ಥಳದ ಸ್ಥಿತಿ, ಸೌಲಭ್ಯಗಳು ಹಾಗೂ ಜೀವನಮಟ್ಟದ ಮಾಹಿತಿ ಸಂಗ್ರಹಿಸಲಿದ್ದಾರೆ. ಜೊತೆಗೆ ನಾಗರಿಕರು ಬಹುಭಾಷಾ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕವೂ ತಮ್ಮ ಮಾಹಿತಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್‌ನಿಂದ ಮುಂದಿನ ಏಪ್ರಿಲ್ 1ರವರೆಗೆ ನಡೆಯುವ ಎರಡನೇ ಹಂತದಲ್ಲಿ ಧರ್ಮ, ಜಾತಿ ಸೇರಿದಂತೆ ಜನರ […] - [ಅನುಮತಿ ಇಲ್ಲದೆ ಹಾಡು ಬಳಕೆ: ನಟ ರಕ್ಷಿತ್ ಶೆಟ್ಟಿಗೆ ದೆಹಲಿ ಹೈಕೋರ್ಟ್ ದಂಡ!](https://bisiloorapost.com/using-songs-without-permission-delhi-high-court-fines-rakshit-shetty/): ನವದೆಹಲಿ, ಏ.01:ಹಾಡುಗಳ ಕಾಪಿರೈಟ್ ಉಲ್ಲಂಘನೆ ಪ್ರಕರಣದಲ್ಲಿ ನಟ ರಕ್ಷಿತ್ ಶೆಟ್ಟಿ ಅವರಿಗೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡುಗಳನ್ನು ಬಳಸಿದ ಹಿನ್ನೆಲೆ, ರಕ್ಷಿತ್ ಶೆಟ್ಟಿ ಮಾಲೀಕತ್ವದ ಪರಂವಾ ಸ್ಟುಡಿಯೋಸ್ ಗೆ ₹25 ಲಕ್ಷ ಪರಿಹಾರ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಎಂಆರ್‌ಟಿ ಮ್ಯೂಸಿಕ್ ಪಾಲುದಾರ ನವೀನ್ ಕುಮಾರ್ ಅವರು ಈ ಸಂಬಂಧ ದೂರು ನೀಡಿದ್ದರು. “ನ್ಯಾಯ ಎಲ್ಲಿದೆ” ಹಾಗೂ “ಒಮ್ಮೆ ನಿನ್ನನ್ನೂ ಕಣ್ತುಂತ ನೋಡುವಾಸೆ” ಹಾಡುಗಳನ್ನು ಅನುಮತಿ ಇಲ್ಲದೆ ಸಿನಿಮಾದಲ್ಲಿ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2025ರ ಜನವರಿ 26ರಂದು ಬಿಡುಗಡೆಯಾದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲೇ ಈ ಹಾಡುಗಳ ಬಳಕೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ರಕ್ಷಿತ್ ಶೆಟ್ಟಿಗೆ ಈ ಹಿಂದೆ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲೂ ‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಅನುಮತಿ ಇಲ್ಲದೆ ಬಳಸಿದ ಆರೋಪ ಎದುರಾಗಿತ್ತು. - [ಇಂಡಿಗೋಗೆ ಹೊಸ ಸಿಇಒ: ವಿಲಿಯಂ ವಾಲ್ಷ್ ನೇಮಕ](https://bisiloorapost.com/indigo-appoints-william-walsh-as-new-ceo/): ಬ್ರಿಟಿಷ್ ಏರ್ವೇಸ್ ಮಾಜಿ ಮುಖ್ಯಸ್ಥರಿಗೆ ಜವಾಬ್ದಾರಿ; ಆಗಸ್ಟ್ ಬಳಿಕ ಅಧಿಕಾರ ಸ್ವೀಕಾರ ನಿರೀಕ್ಷೆ ನವದೆಹಲಿ, ಏ.01: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ನೂತನ ಸಿಇಒ ಆಗಿ ಬ್ರಿಟಿಷ್ ಏರ್ವೇಸ್‌ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ಮಂಗಳವಾರ ನೇಮಕ ಮಾಡಿದೆ. ವಿಮಾನಯಾನ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ (ಐಎಟಿಎ) ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇಮಕಾತಿ ಭಾರತೀಯ ನಿಯಂತ್ರಕ ಸಂಸ್ಥೆಗಳ ಅನುಮೋದನೆಗೆ ಒಳಪಟ್ಟಿದೆ ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ. ಐಎಟಿಎಯಲ್ಲಿ ವಾಲ್ಷ್ ಅವರ ಅಧಿಕಾರಾವಧಿ ಜುಲೈ 31ರಂದು ಮುಗಿಯಲಿದ್ದು, ಆಗಸ್ಟ್ 3ರ ನಂತರ ಅವರು ಇಂಡಿಗೋ ಸಂಸ್ಥೆಗೆ ಸೇರುವ ನಿರೀಕ್ಷೆಯಿದೆ. ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರ ಹಠಾತ್ ನಿರ್ಗಮನದ ಮೂರು ವಾರಗಳ ಬಳಿಕ ಈ ನೇಮಕಾತಿ ಪ್ರಕಟವಾಗಿದೆ. ವಿಲಿಯಂ ವಾಲ್ಷ್ ಅವರು 1979ರಲ್ಲಿ ಏರ್ ಲಿಂಗಸ್‌ನಲ್ಲಿ ಪೈಲಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಅದೇ ಸಂಸ್ಥೆಯಲ್ಲಿ ಸಿಇಒ […] - [‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ – ಒಂದು ತಪ್ಪು ನಿರ್ಧಾರ ಹೆಣ್ಣಿನ ಬದುಕನ್ನೇ ಬದಲಿಸಿದ ಕಥನ](https://bisiloorapost.com/article-written-by-akshatha-koppala/): ಪುಸ್ತಕ ವಿಮರ್ಶೆ: ಅಕ್ಷತಾ ಕೊಪ್ಪಳ ಡಾ. ಎಚ್. ನಾಗ ಹುಬ್ಳಿ ಅವರು ಅನುವಾದಿಸಿರುವ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಕೃತಿ ಮಾನದಾ ದೇವಿ ಅವರು ಬರೆದಿರುವ ಅವರದೇ ಆತ್ಮಕತೆಯಾಗಿದೆ. ಈ ಪುಸ್ತಕದಲ್ಲಿ ಮಾನದಾದೇವಿಯವರು ತಮ್ಮ ಜೀವನದಲ್ಲಿ ಆಗುವಂತಹ ಅನುಭವಗಳು ಹಾಗೂ ತಾನು ಎದುರಿಸಿದ ಸಂಕಟಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಮಾನದಾ ದೇವಿ ಶ್ರೀಮಂತ ಕುಟುಂಬದಲ್ಲಿ ಜನಿಸಿ, ತಾಯಿಯನ್ನು ಕಳೆದುಕೊಂಡ ನಂತರ ತಂದೆಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾಳೆ. ಆ ಸಂದರ್ಭದಲ್ಲಿ ಸ್ನೇಹಿತರ ಜೊತೆ ಸೇರಿ ವಯೋಸಹಜ ಭಾವನೆಗಳಿಗೆ ಒಳಗಾಗಿ ರಮೇಶ್ ಜೊತೆ ಮನೆ ಬಿಟ್ಟು ಹೋಗುತ್ತಾಳೆ. ಆದರೆ ಅವನಿಂದ ಮೋಸಗೊಂಡು ಅವಳ ಬದುಕು ಮತ್ತಷ್ಟು ಕಷ್ಟಕರವಾಗುತ್ತದೆ. ನಂತರ ಮಾನದಾ ಒಂದು ಆಶ್ರಮ ಸೇರಿ ಬದುಕನ್ನು ಸರಿಪಡಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ ಅಲ್ಲಿಯೂ ಅವಳಿಗೆ ಸರಿಯಾದ ನೆಲೆ ಸಿಗುವುದಿಲ್ಲ. ತನ್ನ ದುರ್ಬಲತೆಯಿಂದ ಮತ್ತೆ ತಪ್ಪು ದಾರಿಯಲ್ಲಿ ಸಾಗುತ್ತಾಳೆ. ಬಳಿಕ ಕಲ್ಕತ್ತಾದಲ್ಲಿನ ಒಂದು ಆಶ್ರಮಕ್ಕೆ ಕಳುಹಿಸಲ್ಪಡುತ್ತಾಳೆ. ಅಲ್ಲಿ ಹೊಸ ಸ್ನೇಹಿತರ ಪರಿಚಯವಾಗುತ್ತದೆ, ಆದರೆ ಪರಿಸ್ಥಿತಿಗಳು ಬದಲಾಗುವುದಿಲ್ಲ. ಮೇಲಾಧಿಕಾರಿಗಳ ಕಿರುಕುಳದಿಂದ ಆಶ್ರಮವನ್ನು […] - [ನಾವೆತ್ತ ಸಾಗುತ್ತಿದ್ದೇವೆ?](https://bisiloorapost.com/article-written-by-manjula-bhat/): ಲೇಖನ: ಮಂಜುಳಾ ಭಟ್ ಉಡುಪಿ ಪತ್ರಿಕೆಯಲ್ಲಿ ಬಂದ ಇಂತಹ ಸುದ್ದಿ ಓದಿ ಏಕೋ ಮನಸ್ಸಿಗೆ ಪಿಚ್ಚೆನಿಸಿತು. ಒಂದನೇ ತರಗತಿಗೆ 5.5 ವರ್ಷಕ್ಕೆ ಪ್ರವೇಶಾವಕಾಶ ಕಲ್ಪಿಸಿ ಅಂತ ಪೋಷಕರು ಸಿ.ಎಂಗೆ ಮನವಿ ಮಾಡಿದ್ದಾರೆ. ತಿಳುವಳಿಕೆ ಉಳ್ಳವರು ಅಂದಿನ ನಮ್ಮ ಬದುಕನ್ನೂ, ನಮ್ಮ ಮಕ್ಕಳ ಇಂದಿನ ಬದುಕನ್ನೂ ತೂಗಿ ನೋಡಿದಾಗ, ಮಕ್ಕಳ ಬಾಲ್ಯವನ್ನು ಕಸಿಯುತ್ತಿರುವ ಅಪರಾಧೀ ಮನೋಭಾವ ಮೂಡದೇ ಇರಲಾರದು. ಸಾಧಾರಣ ಆರು ವರ್ಷಗಳವರೆಗೂ ತಂದೆ ತಾಯಿಯ ಜೊತೆ, ಅವರೆಲ್ಲಿ ಹೋದರೂ ಹಿಂದೆ ಹೋಗುತ್ತಾ, ಬಿಸಿಲು, ಮಳೆ,ಚಳಿ ಎಂಬ ಯೋಚನೆ ಇಲ್ಲದೇ ಅಲೆದಾಡಿದರೂ, ಜ್ಞಾನ ಸಂಪಾದನೆ ವಿಷಯದಲ್ಲಿ ಹಿಂದೆ ಬೀಳದವರು ನಾವೆಲ್ಲ. ಈಗಲೂ ನಮ್ಮ ಬಾಲ್ಯ ಕಣ್ಮುಂದೆ ಬಂದರೆ ಆಹಾ! ಎನಿಸುವ ಆಹ್ಲಾದ ಭಾವ. ಆದರೆ ನಮ್ಮ ಮಕ್ಕಳ ವಿಷಯಕ್ಕೆ ಬಂದರೆ, ಎಷ್ಟು ಬೇಗ ಶಾಲೆಗೆ ಸೇರಿಸಲು ಸಾಧ್ಯವೋ ಅಷ್ಟು ಬೇಗ ಮನೆಯಿಂದ ಹೊರಗೆ ಕಳಿಸುವ ಹಪಾಹಪಿ. ಆ ಮಕ್ಕಳ ಜಾಗದಲ್ಲಿ ನಿಂತು ಒಂದು ಸಲವೂ ಯೋಚಿಸುವ ವ್ಯವಧಾನ ನಮಗಿಲ್ಲದೇ ಹೋದದ್ದು ವಿಪರ್ಯಾಸ. ಮೊದಲೇ […] - [ಯುಡಿಎಫ್ ಅಧಿಕಾರಕ್ಕೆ ಬಂದರೆ ಕೇರಳಕ್ಕೆ ಮಹಿಳಾ ಸಿಎಂ: ರಾಹುಲ್ ಗಾಂಧಿ ಘೋಷಣೆ!](https://bisiloorapost.com/kerala-to-have-woman-chief-minister-if-udf-comes-to-power-rahul-gandhi/): ತಿರುವನಂತಪುರಂ, ಮಾ. 31: ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೇರಿದರೆ ಕರ್ನಾಟಕ ಮತ್ತು ತೆಲಂಗಾಣ ಮಾದರಿಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ತಮ್ಮ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಪುತ್ತುಪಲ್ಲಿ ಪ್ರದೇಶದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಕಾಲೇಜು ವಿದ್ಯಾರ್ಥಿನಿಯರಿಗೆ ತಿಂಗಳಿಗೆ ₹1,000 ಗೌರವಧನ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಮಹಿಳೆಯರು ತಮಗೆ ನೀಡಿದ ಸ್ಪಂದನೆಗೆ ಉತ್ತೇಜಿತರಾದ ರಾಹುಲ್ ಗಾಂಧಿ, ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಕರೆ ನೀಡಿದರು. “ಈ ಬಾರಿ ಕೇರಳದಲ್ಲಿ ಮಹಿಳೆ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸುತ್ತೇನೆ. ಮಹಿಳೆಯರ ಆಶೋತ್ತರಗಳನ್ನು ಅವರು ಸ್ವತಃ ಈಡೇರಿಸಿಕೊಳ್ಳಲು ಅಧಿಕಾರಕ್ಕೆ ಬರಬೇಕು” ಎಂದು ಹೇಳಿದರು. ಕೇರಳದಲ್ಲಿ ಕೆ.ಆರ್. ಗೌರಿ ಅಮ್ಮ ಅವರಂತಹ ಪ್ರಭಾವಿ […] - [ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ದಂಡ 10 ಪಟ್ಟು ಏರಿಕೆ: ಜನ ವಿಶ್ವಾಸ ಮಸೂದೆಗೆ ಕೇಂದ್ರ ಪಟ್ಟು](https://bisiloorapost.com/10-fold-increase-in-fine-for-urinating-in-public-places-centre-pushes-jan-vishwas-bill/): ಸಾರ್ವಜನಿಕ ಅಶಿಸ್ತಿಗೆ ಕಟ್ಟುನಿಟ್ಟು: ದಂಡ ಹೆಚ್ಚಳಕ್ಕೆ ಕೇಂದ್ರದ ಮಸೂದೆ ನವದೆಹಲಿ, ಮಾ.30: ಸಾರ್ವಜನಿಕ ಸ್ಥಳಗಳಲ್ಲಿ ಅಶಿಸ್ತಿನ ವರ್ತನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ‘ಜನ ವಿಶ್ವಾಸ (ತಿದ್ದುಪಡಿ) ಮಸೂದೆ–2026’ ಅನ್ನು ತರಲು ಮುಂದಾಗಿದೆ. ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ, ಕಸ ಎಸೆಯುವುದು ಸೇರಿದಂತೆ ಹಲವು ಸಣ್ಣ ತಪ್ಪುಗಳಿಗೆ ವಿಧಿಸುವ ದಂಡ ಹೆಚ್ಚಾಗಲಿದೆ. ಪ್ರಸ್ತುತ Delhi Municipal Corporation Act, 1957 ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆಗೆ ₹50 ದಂಡವಿದ್ದು, ಅದನ್ನು ₹500ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಬೀದಿಗಳಲ್ಲಿ ಕಸ ಎಸೆಯುವವರಿಗೂ ಹೆಚ್ಚು ದಂಡ ವಿಧಿಸಲಾಗುತ್ತದೆ. ಲೈಸೆನ್ಸ್ ಇಲ್ಲದೆ ಅಥವಾ ನಿಯಮ ಉಲ್ಲಂಘಿಸಿ ಲಾಡ್ಜ್, ಹೋಟೆಲ್ ಮತ್ತು ಟೀ ಅಂಗಡಿಗಳನ್ನು ನಡೆಸುವವರಿಗೆ ಈಗ ₹100 ದಂಡವಿದ್ದು, ಅದನ್ನು ₹1,000ಕ್ಕೆ ಏರಿಸಲಾಗುತ್ತದೆ. ಸಾರ್ವಜನಿಕ ರಸ್ತೆಯಲ್ಲಿ ಸಾಕು ನಾಯಿಗಳನ್ನು ಸರಪಳಿ ಇಲ್ಲದೆ ಬಿಡುವವರಿಗೂ ದಂಡ ಹೆಚ್ಚಿಸಲಾಗುತ್ತದೆ. ಈಗ ₹50 ಇರುವ ದಂಡವನ್ನು ₹1,000ಕ್ಕೆ ಏರಿಸಲಾಗುತ್ತದೆ. ಕಸವನ್ನು ತೆರವುಗೊಳಿಸದಿದ್ದರೆ ಮೊದಲು ಎಚ್ಚರಿಕೆ […] - [ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಒಟ್ಟು ಅಂಕ 625ರಿಂದ 525ಕ್ಕೆ ಇಳಿಕೆ!](https://bisiloorapost.com/major-change-in-sslc-examination-total-marks-reduced-from-625-to-525/): ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮೂರನೇ ಭಾಷೆಗೆ ಅಂಕ ಪದ್ಧತಿಯನ್ನು ರದ್ದುಪಡಿಸಿ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ 625 ಅಂಕಗಳಿಗೆ ನಡೆಯುತ್ತಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಈಗ 525 ಅಂಕಗಳಿಗೆ ಇಳಿಸಲಾಗಿದೆ. ಹಿಂದಿ ಸೇರಿ ತೃತೀಯ ಭಾಷೆಗಳ 100 ಅಂಕಗಳಿಗೆ “ಕೊಕ್” ನೀಡಲಾಗಿದ್ದು, ವಿದ್ಯಾರ್ಥಿಗಳು ಹಿಂದಿನಂತೆ ಪರೀಕ್ಷೆ ಬರೆಯಬೇಕಾದರೂ ಅಂಕಪಟ್ಟಿಯಲ್ಲಿ ಅಂಕಗಳ ಬದಲು ಗ್ರೇಡ್ (A, B, C, D) ಮಾತ್ರ ನಮೂದಿಸಲಾಗುತ್ತದೆ ಎಂದು ಹೇಳಿದರು. ಈ ಹೊಸ ನಿಯಮವು 2026ರಿಂದ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದಲೇ ಅನ್ವಯವಾಗಲಿದೆ. “ಈ ಹಿಂದೆ ವಿದ್ಯಾರ್ಥಿಗಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಆದರೆ ಇನ್ನು ಮುಂದೆ 525 ಅಂಕಗಳಿಗೆ ಪಡೆದ ಅಂಕಗಳಷ್ಟೇ ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲಾಗುತ್ತದೆ. ಮೂರನೇ ಭಾಷೆಯ 100 ಅಂಕಗಳು ಒಟ್ಟು ಫಲಿತಾಂಶಕ್ಕೆ ಸೇರಿಸಲಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು. ವಿಧಾನಸಭಾ ಅಧಿವೇಶನದ ನಂತರ ಈ […] - [ಪುಂಜಗೋಡು ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ](https://bisiloorapost.com/grand-brahmakalashotsava-at-punjagodu-sri-mannallamma-vishnumurthy-daivasthana/): ಮಲ್ಲ, ಮಾರ್ಚ್ 26: ಕಾಸರಗೋಡು ತಾಲೂಕಿನ ಮುಳಿಯಾರು ಗ್ರಾಮದ ಪುಂಜಗೋಡು ಸಮೀಪದ ಪ್ರಸಿದ್ಧ ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ತರವಾಡು ದೈವಸ್ಥಾನದಲ್ಲಿ 20 ವರ್ಷಗಳ ಬಳಿಕ ನವೀಕರಣಗೊಂಡ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 26ರಿಂದ 29ರವರೆಗೆ ಭಕ್ತಿಭಾವದಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಸುಮಾರು 175 ವರ್ಷಗಳ ಇತಿಹಾಸ ಹೊಂದಿರುವ ಈ ದೈವಸ್ಥಾನವು ಯಾದವ ಸಮುದಾಯದ ಆರು ಇಲ್ಲಂಗಳ ಪೈಕಿ ‘ಪಚ್ಚೆಮಾರ್’ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಕಲಿಯುಗದ ಕಾರ್ಣಿಕ ದೈವಸಾನಿಧ್ಯವೆಂದು ಭಕ್ತರು ನಂಬಿಕೆ ಹೊಂದಿದ್ದಾರೆ. ಮಲ್ಲದ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪೂರ್ವಕ್ಕೆ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಈ ತರವಾಡು ದೈವಸ್ಥಾನವು ಇತ್ತೀಚೆಗೆ ಪುನರ್‌ನಿರ್ಮಾಣಗೊಂಡಿದ್ದು, ಮಹೋತ್ಸವದ ಸಂಭ್ರಮ ಆವರಿಸಿದೆ. ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಮದನೆಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದದಲ್ಲಿ, ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ರವೀಶ್ ತಂತ್ರಿ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು […] - [ಬೈಕ್ ಪಾರ್ಕಿಂಗ್ ಅಡ್ಡವಾದ ಕಾವು ಬಸ್ ತಂಗುದಾಣ: ಪ್ರಯಾಣಿಕರಿಗೆ ಸಂಕಷ್ಟ](https://bisiloorapost.com/bus-stop-turned-into-bike-parking-space-passengers-face-hardship/): ಕಾವು, ಮಾ.26: ಪುತ್ತೂರು–ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಈಶ್ವರಮಂಗಲ ಜಂಕ್ಷನ್‌ನಲ್ಲಿರುವ ಕಾವು ಬಸ್ಸು ತಂಗುದಾಣವು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕೇಂದ್ರವಾಗಿ ಮಾರ್ಪಟ್ಟಿದ್ದು, ಪ್ರಯಾಣಿಕರಿಗೆ ಗಂಭೀರ ತೊಂದರೆ ಉಂಟಾಗುತ್ತಿದೆ. ತಂಗುದಾಣದ ಎದುರುಗಡೆ ಸಾಲುಸಾಲಾಗಿ ಬೈಕ್‌ಗಳನ್ನು ನಿಲ್ಲಿಸಿರುವ ಪರಿಣಾಮ, ಪ್ರಯಾಣಿಕರಿಗೆ ತಂಗುದಾಣದೊಳಗೆ ಪ್ರವೇಶಿಸುವುದೇ ಕಷ್ಟಕರವಾಗಿದೆ. ಸರಿಯಾದ ನಿಲುಗಡೆ ವ್ಯವಸ್ಥೆಯ ಕೊರತೆಯಿಂದ ಪ್ರಯಾಣಿಕರು ಅಸೌಕರ್ಯ ಅನುಭವಿಸುತ್ತಿದ್ದು, ವಾಹನ ದಟ್ಟಣೆಯ ನಡುವೆ ಸುರಕ್ಷತೆ ಪ್ರಶ್ನಾರ್ಹವಾಗಿದೆ. ಪ್ರತಿದಿನ ನೂರಾರು ಮಂದಿ ಈ ತಂಗುದಾಣವನ್ನು ಬಳಸುತ್ತಿದ್ದು, ದ್ವಿಚಕ್ರ ವಾಹನಗಳ ಅಕ್ರಮ ಪಾರ್ಕಿಂಗ್‌ನಿಂದ ಪ್ರಯಾಣಿಕರು ರಸ್ತೆಯಲ್ಲೇ ನಿಂತು ಬಸ್ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಪಘಾತದ ಭೀತಿಯೂ ಹೆಚ್ಚಾಗಿದೆ. ಈ ಸಮಸ್ಯೆ ಬಗ್ಗೆ ಪದೇ ಪದೇ ವರದಿಯಾಗುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ತಕ್ಷಣವೇ ದ್ವಿಚಕ್ರ ವಾಹನಗಳಿಗೆ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ತಂಗುದಾಣವನ್ನು ಮುಕ್ತಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. - [ನಂದಿನಿ ಉತ್ಪನ್ನಗಳಿಗೆ ಆರ್‌ಸಿಬಿ ಬ್ರ್ಯಾಂಡ್ ಅಂಬಾಸಿಡರ್: ₹4.80 ಕೋಟಿ ಒಪ್ಪಂದ](https://bisiloorapost.com/rcb-as-brand-ambassador-for-nandini-products-4-80-crore-deal/): ಬೆಂಗಳೂರು, ಮಾ.25: ಕರ್ನಾಟಕದ ಹೆಮ್ಮೆಯ ‘ನಂದಿನಿ’ ಉತ್ಪನ್ನಗಳ ಪ್ರಚಾರಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ (KMF) ಐಪಿಎಲ್‌ನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಡಿಯಲ್ಲಿ ತಂಡದ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಹಾಗೂ ದೇವದತ್ ಪಡಿಕಲ್ ಅವರ ಭಾವಚಿತ್ರಗಳನ್ನು ನಂದಿನಿ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಬಳಸಲಾಗುತ್ತದೆ. ಒಂದು ವರ್ಷದ ಅವಧಿಗೆ ಮಾಡಿಕೊಳ್ಳಲಾದ ಈ ಪ್ರಾಯೋಜಕತ್ವ ಒಪ್ಪಂದಕ್ಕೆ ಕೆಎಂಎಫ್ ಬರೋಬ್ಬರಿ ₹4.80 ಕೋಟಿ ವೆಚ್ಚ ಮಾಡಿದೆ. ಈ ಮೂಲಕ ‘ನಂದಿನಿ’ ಬ್ರ್ಯಾಂಡ್‌ನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಗುರಿಯನ್ನು ಕೆಎಂಎಫ್ ಹೊಂದಿದೆ. ಆರ್‌ಸಿಬಿ ತಂಡಕ್ಕೆ ದೇಶದಾದ್ಯಂತ ಅಪಾರ ಅಭಿಮಾನಿ ಬಳಗವಿರುವ ಹಿನ್ನೆಲೆಯಲ್ಲಿ, ಈ ಸಹಭಾಗಿತ್ವದಿಂದ ಮಾರ್ಕೆಟ್ ವಿಸ್ತರಣೆ ಸಾಧ್ಯವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಸಂತೋಷ ವ್ಯಕ್ತಪಡಿಸಿದ್ದಾರೆ. “2024ರಿಂದಲೇ ಆರ್‌ಸಿಬಿ ಜೊತೆ ಈ ಪ್ರಯತ್ನ ನಡೆಯುತ್ತಿತ್ತು. ಕ್ರೀಡಾ ಪ್ರಾಯೋಜಕತ್ವದ ಮೂಲಕ ಯುವಜನರನ್ನು ಸೆಳೆಯುವ ಉದ್ದೇಶವಿದೆ. ಈ ಒಪ್ಪಂದದಿಂದ ‘ನಂದಿನಿ’ […] - [ಯುದ್ಧ ಸಂಕಷ್ಟ ನಡುವೆಯೂ ಭಾರತಕ್ಕೆ ತೈಲ ಭದ್ರತೆ: ಕೇಂದ್ರ ಮಾಹಿತಿ](https://bisiloorapost.com/india-has-oil-security-despite-war-crisis-centre/): ನವದೆಹಲಿ: ದೇಶದ ತಂತ್ರಜ್ಞಾನಿಕ ಕಚ್ಚಾ ತೈಲ ಸಂಗ್ರಹ ಕೇಂದ್ರಗಳಲ್ಲಿ (ಎಸ್‌ಪಿಆರ್) ಸದ್ಯ 33.72 ಲಕ್ಷ ಟನ್ ತೈಲ ಸಂಗ್ರಹವಿದ್ದು, ಇದು ಒಟ್ಟು ಸಾಮರ್ಥ್ಯದ ಸುಮಾರು ಮೂರರಲ್ಲಿ ಎರಡು ಭಾಗದಷ್ಟು ಇದೆ ಎಂದು ಕೇಂದ್ರ ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಭಾರತೀಯ ತಂತ್ರಜ್ಞಾನಿಕ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ISPRL) ನೀಡಿದ ಅಂಕಿಅಂಶಗಳನ್ನು ಉಲ್ಲೇಖಿಸಿ ಅವರು ಈ ಮಾಹಿತಿ ನೀಡಿದರು. ಮಾರುಕಟ್ಟೆಯ ಪರಿಸ್ಥಿತಿ, ಸರಬರಾಜು ಹಾಗೂ ಬಳಕೆಯ ಏರಿಳಿತದ ಮೇಲೆ ಈ ಸಂಗ್ರಹದ ಮಟ್ಟ ಬದಲಾಗಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು. ಜೊತೆಗೆ, ಎಸ್‌ಪಿಆರ್‌ನಲ್ಲಿ ಸಂಗ್ರಹವಾಗಿರುವುದು ಕಚ್ಚಾ ತೈಲವಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೊದಲಾದ ಶುದ್ಧೀಕೃತ ಇಂಧನ ಸಂಗ್ರಹದಿಂದ ಭಿನ್ನವಾಗಿದೆ ಎಂದು ತಿಳಿಸಿದರು. ಪ್ರಸ್ತುತ, ಕಚ್ಚಾ ತೈಲ ಹಾಗೂ ಬಳಕೆಗೆ ಸಿದ್ಧ ಇಂಧನ ಸೇರಿ ದೇಶದ ಒಟ್ಟು ಇಂಧನ ಸಂಗ್ರಹವು 74 ದಿನಗಳ ಅವಶ್ಯಕತೆಯನ್ನು ಪೂರೈಸುವ ಮಟ್ಟದಲ್ಲಿದೆ. ಇದರಲ್ಲಿ ತೈಲ ಮಾರಾಟ ಕಂಪನಿಗಳ ಸಂಗ್ರಹವೂ ಒಳಗೊಂಡಿದೆ ಎಂದು ಸಚಿವರು ಹೇಳಿದರು. ದೇಶದ […] - [ಮತಾಂತರವಾದರೆ ದಲಿತ ಸ್ಥಾನಮಾನ ಇಲ್ಲ: ಸುಪ್ರೀಂಕೋರ್ಟ್ ಮಹತ್ವದ ಆದೇಶ!](https://bisiloorapost.com/conversion-means-loss-of-dalit-status-supreme-courts-landmark-order/): ನವದೆಹಲಿ, ಮಾ.24: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದವರಿಗಷ್ಟೇ ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ ಅನ್ವಯಿಸುತ್ತದೆ. ಕ್ರೈಸ್ತ ಧರ್ಮ ಸೇರಿದಂತೆ ಇತರ ಧರ್ಮಗಳಿಗೆ ಮತಾಂತರವಾದರೆ ದಲಿತ ಸ್ಥಾನಮಾನ ಹಾಗೂ ಪರಿಶಿಷ್ಟ ಜಾತಿ ಸ್ಥಾನಮಾನ ಉಳಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನ್ಮೋಹನ್ ಅವರ ಪೀಠವು, “ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವಲ್ಲದ ಧರ್ಮವನ್ನು ಅನುಸರಿಸುವವರು ಪರಿಶಿಷ್ಟ ಜಾತಿಗೆ ಸೇರಲು ಅರ್ಹರಾಗುವುದಿಲ್ಲ. ಇತರ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಹೋಗುತ್ತದೆ” ಎಂದು ಸ್ಪಷ್ಟಪಡಿಸಿದೆ. ಈ ತೀರ್ಪಿನಂತೆ, ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತ ವ್ಯಕ್ತಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಎಸ್‌ಸಿ/ಎಸ್‌ಟಿ ಕಾಯ್ದೆ) ಉಲ್ಲಂಘನೆಯಾಗಿದೆ ಎಂದು ಹೇಳಿ ದೂರು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಈ ಪ್ರಕರಣವು ಚಿಂತಡಾ ಆನಂದ್ ಎಂಬ ಪಾಸ್ಟರ್ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದೆ. ಅವರು ಅಕ್ಕಲ ರಾಮಿರೆಡ್ಡಿ ಹಾಗೂ ಇತರರಿಂದ […] - [ನವದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ: ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್!](https://bisiloorapost.com/bomb-threat-to-new-delhi-legislative-assembly-high-alert-in-the-national-capital/): ನವದೆಹಲಿ, ಮಾ.24: ದೆಹಲಿ ವಿಧಾನಸಭೆಯಲ್ಲಿ ಇಂದು ಬಜೆಟ್ ಮಂಡನೆಗೂ ಮುನ್ನವೇ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಧಾನಸಭೆ ಹಾಗೂ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಜೆಟ್ ದಿನವೇ ಬೆದರಿಕೆ ಸಂದೇಶಇಂದು ಬೆಳಿಗ್ಗೆ ಸುಮಾರು 7:28ರ ವೇಳೆಗೆ ವಿಧಾನಸಭೆಯ ಅಧಿಕೃತ ಇಮೇಲ್‌ಗೆ ಬೆದರಿಕೆ ಸಂದೇಶ ಬಂದಿದ್ದು, ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಪ್ರತ್ಯೇಕವಾಗಿ ಇಮೇಲ್ ಕಳುಹಿಸಿ ಸ್ಫೋಟದ ಎಚ್ಚರಿಕೆ ನೀಡಲಾಗಿದೆ. ಇಂದು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಬಜೆಟ್ ಮಂಡಿಸಬೇಕಿರುವುದರಿಂದ, ಭದ್ರತಾ ಸಂಸ್ಥೆಗಳು ಈ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಗಣ್ಯರ ಹೆಸರಿನ ಉಲ್ಲೇಖಬೆದರಿಕೆ ಇಮೇಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕ್ಯಾಬಿನೆಟ್ […] - [ಏ.1ರಿಂದ ಟೋಲ್ ದರ ಏರಿಕೆ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ದುಬಾರಿ!](https://bisiloorapost.com/toll-rates-to-increase-from-april-1-highway-travel-to-become-costlier/): ನವದೆಹಲಿ, ಮಾ.23: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಏರಿಕೆ ಜಾರಿಯಾಗಲಿದ್ದು, ವಾಹನ ಸವಾರರ ಮೇಲೆ ಹೆಚ್ಚುವರಿ ಭಾರ ಬೀಳಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, ಸುಮಾರು 4ರಿಂದ 5 ಶೇಕಡಾ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಹೆಚ್‌ಎಐ ತಿಳಿಸಿದೆ. ಕರ್ನಾಟಕದಲ್ಲಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ ಒಟ್ಟು 8 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ದರ ಏರಿಕೆಯ ಪರಿಣಾಮ ಕಾಣಿಸಿಕೊಳ್ಳಲಿದೆ. 2023ರ ಏಪ್ರಿಲ್ 1ರಿಂದ ಟೋಲ್ ಸಂಗ್ರಹ ಆರಂಭವಾದ ಬಳಿಕ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇದು ನಾಲ್ಕನೇ ಬಾರಿಗೆ ದರ ಹೆಚ್ಚಳವಾಗುತ್ತಿದೆ. ಹಿಂದೆ 2023ರ ಜೂನ್‌ನಲ್ಲಿ ಘೋಷಿಸಿದ್ದ 22% ಏರಿಕೆಯನ್ನು ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿತ್ತು. ಆದರೆ […] - [ಬಿಜೆಪಿ ಜೊತೆ ಮೈತ್ರಿ ಇಲ್ಲ: ನಟ ವಿಜಯ್ ಸ್ಪಷ್ಟನೆ](https://bisiloorapost.com/no-alliance-with-bjp-actor-vijay-clarifies/): ಚೆನ್ನೈ, ಮಾ.23: ಎಐಎಡಿಎಂಕೆ ಮತ್ತು ಬಿಜೆಪಿ ಜೊತೆ ಮೈತ್ರಿ ಸಾಧ್ಯತೆಗಳ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಹಾಗೂ ನಟ ದಳಪತಿ ವಿಜಯ್, ತಮ್ಮ ಪಕ್ಷವು ಸ್ವತಂತ್ರವಾಗಿ ಚುನಾವಣೆಗೆ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಾಮಲ್ಲಪುರಂನ ಪಂಚತಾರಾ ಹೋಟೆಲ್‌ನಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ವಿಜಯ್, “ನಮ್ಮ ಜಾತ್ಯತೀತ ಅಸ್ಮಿತೆಯೊಂದಿಗೆ ಯಾವುದೇ ರೀತಿಯ ರಾಜೀ ಇಲ್ಲ. ನಮ್ಮ ರಾಜಕೀಯ ಸಿದ್ಧಾಂತವನ್ನು ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಇರುತ್ತದೆ” ಎಂದು ತಿಳಿಸಿದ್ದಾರೆ. ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ವಿಜಯ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡುತ್ತಿದ್ದವು. ಆದರೆ ಈ ಮಾತುಕತೆಗಳನ್ನೆಲ್ಲ ವಿಜಯ್ ತಳ್ಳಿಹಾಕಿದ್ದಾರೆ. “ಪಕ್ಷವನ್ನು ಆರಂಭಿಸಿದ ಆರಂಭಿಕ ದಿನಗಳಲ್ಲಿ ನಮ್ಮನ್ನು ವಿವಿಧ ರಾಜಕೀಯ ತಂಡಗಳೊಂದಿಗೆ ಸಂಪರ್ಕಿಸುವ ಪ್ರಯತ್ನ ನಡೆಯಿತು. ಆದರೆ ಜನರಿಂದ ಸಿಕ್ಕ ಬೆಂಬಲವನ್ನು ಕಂಡ ನಂತರ, ನಮ್ಮೊಂದಿಗೆ ಮೈತ್ರಿ ಸಾಧ್ಯತೆಗಳ ಬಗ್ಗೆ ಅನಾವಶ್ಯಕ ಸುದ್ದಿಗಳನ್ನು ಹರಡಲಾಗುತ್ತಿದೆ” ಎಂದು […] - [ಅಂಚೆ ಇಲಾಖೆಯ ಮಹತ್ವದ ಹೆಜ್ಜೆ; 24 ಗಂಟೆ ಸ್ಪೀಡ್ ಪೋಸ್ಟ್ ಸೇವೆಗೆ ಚಾಲನೆ!](https://bisiloorapost.com/a-major-step-by-the-postal-department-24-hour-speed-post-service-launched/): ನವದೆಹಲಿ, ಮಾ.23: ಸಾರ್ವಜನಿಕ ಕ್ಷೇತ್ರಕ್ಕೆ ಖಾಸಗಿ ವಲಯದ ವೇಗವನ್ನು ತರಲು ಮೋದಿ ಸರ್ಕಾರ ಮುಂದಾಗಿದ್ದು, ಇದರ ಭಾಗವಾಗಿ ಭಾರತ ಅಂಚೆ ಇಲಾಖೆ 24 ಗಂಟೆ ಮತ್ತು 48 ಗಂಟೆಯ ಸಮಯಬದ್ಧ ಸ್ಪೀಡ್ ಪೋಸ್ಟ್ ಸೇವೆಗಳನ್ನು ಆರಂಭಿಸಿದೆ. ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಈ ಹೊಸ ಸೇವೆಗಳಿಗೆ ಚಾಲನೆ ನೀಡಿದರು. ಈ ಸೇವೆಗಳ ಮೂಲಕ ತುರ್ತು ಮತ್ತು ಸಮಯಸಂವೇದನಾಶೀಲ ಸಾಗಣೆಗಳನ್ನು ಮುಂದಿನ ದಿನವೇ (D+1) ಅಥವಾ ಎರಡನೇ ದಿನ (D+2) ವಿತರಿಸುವ ಭರವಸೆ ನೀಡಲಾಗಿದೆ. ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಆರು ಮಹಾನಗರಗಳಲ್ಲಿ ಪ್ರಾರಂಭವಾಗಿರುವ ಈ ಸೇವೆಗಳು ವಿಶೇಷ ಪ್ರಕ್ರಿಯೆ ಮತ್ತು ವಿಮಾನ ಸಾರಿಗೆ ಮೂಲಕ ಕಾರ್ಯನಿರ್ವಹಿಸಲಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಧಿಯಾ, “ಇದು ಭಾರತ ಅಂಚೆಯ ಪುನರುಜ್ಜೀವನದ ಸಂಕೇತ. ಇ-ಕಾಮರ್ಸ್ ಮಾರುಕಟ್ಟೆ 2030ರ ವೇಳೆಗೆ ₹30 ಲಕ್ಷ ಕೋಟಿ ತಲುಪಲಿದೆ” ಎಂದು ಹೇಳಿದರು. ಈ ಹೊಸ ಸೇವೆಗಳಲ್ಲಿ OTP ಆಧಾರಿತ ಸುರಕ್ಷಿತ ವಿತರಣೆ, SMS […] - [ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ; ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂ. ನಷ್ಟ!](https://bisiloorapost.com/stock-market-plunges-investors-lose-lakhs-of-crores-of-rupees/): ಮುಂಬೈ, ಮಾ.23: ಮಧ್ಯ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಆಘಾತ ತಂದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದನಾಶೀಲ ಸೂಚ್ಯಂಕ ಸೆನ್ಸೆಕ್ಸ್ ಸುಮಾರು 1,550 ಅಂಕಗಳಷ್ಟು ಕುಸಿದರೆ, ನಿಫ್ಟಿ 500 ಅಂಕಗಳಷ್ಟು ಇಳಿಕೆಯನ್ನು ದಾಖಲಿಸಿದೆ. ಮಾರುಕಟ್ಟೆ ತೆರೆಯುತ್ತಿದ್ದಂತೆಯೇ ಮಾರಾಟದ ಒತ್ತಡ ಹೆಚ್ಚಾಗಿ, ಸೆನ್ಸೆಕ್ಸ್ 72,977 ಮಟ್ಟಕ್ಕೆ ಜಾರಿದರೆ, ನಿಫ್ಟಿ 22,634 ಮಟ್ಟಕ್ಕೆ ಇಳಿದಿದೆ. ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು ಸುಮಾರು ₹8 ಲಕ್ಷ ಕೋಟಿ ಮೌಲ್ಯದ ಸಂಪತ್ತು ಕಳೆದುಕೊಂಡಿದ್ದಾರೆ. ಬಿಎಸ್ಇಯಲ್ಲಿ ಪಟ್ಟಿ ಹೊಂದಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹429 ಲಕ್ಷ ಕೋಟಿಯಿಂದ ₹421 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಈ ತೀವ್ರ ಕುಸಿತಕ್ಕೆ ಮಧ್ಯ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷವೇ ಪ್ರಮುಖ ಕಾರಣ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ತಿರುಗೇಟು ನೀಡಿದ್ದು, ಯುದ್ಧ ಭೀತಿ ಮತ್ತಷ್ಟು […] - [‘ಲವ್ ಮಾಕ್ಟೇಲ್-3’ ಚಿತ್ರದ ಮೇಲೆ ಕಥೆ ಕಳ್ಳತನದ ಆರೋಪ; ಡಾರ್ಲಿಂಗ್ ಕೃಷ್ಣ ವಿರುದ್ಧ ಆಕ್ರೋಶ!](https://bisiloorapost.com/allegations-of-story-theft-against-love-mocktail-3-outrage-against-darling-krishna/): ಬೆಂಗಳೂರು, ಮಾ.23: ಇತ್ತೀಚೆಗೆ ತೆರೆಗೆ ಬಂದಿರುವ ‘ಲವ್ ಮಾಕ್ಟೇಲ್-3’ ಸಿನಿಮಾ ಸಕ್ಸೆಸ್‌ನ ಹಾದಿಯಲ್ಲಿ ಸಾಗುತ್ತಿರುವಾಗಲೇ, ಚಿತ್ರದ ಮೇಲೆ ಕಥೆ ಕಳ್ಳತನದ ಗಂಭೀರ ಆರೋಪ ಕೇಳಿಬಂದಿದ್ದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಬರಹಗಾರ ರಾಘವೇಂದ್ರ ಎಂ. ನಾಯಕ್ ಸ್ಫೋಟಕ ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. “ನನ್ನ ಕಥೆಯ ದ್ವಿತೀಯಾರ್ಧವನ್ನು ಬಳಸಿಕೊಂಡು ಸಿನಿಮಾ ಮಾಡಿದ್ದಾರೆ” ಎಂದು ಆರೋಪಿಸಿರುವ ರಾಘವೇಂದ್ರ ನಾಯಕ್, ತಮ್ಮ ಕಥೆಯನ್ನು ಸೂಕ್ತ ದಾಖಲೆಗಳಿಲ್ಲದೆ ಹಂಚಿಕೊಂಡಿದ್ದರಿಂದ ತಮಗೆ ಅನ್ಯಾಯವಾಗಿದೆಯೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹೊಸ ಬರಹಗಾರರು ತಮ್ಮ ಕಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದಷ್ಟೇ ಅಲ್ಲದೆ, ಈ ಕಥೆಯ ನರೇಷನ್ ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ಮಾಪಕ ಗುರು ದೇಶಪಾಂಡೆ ಅವರ ಸಮ್ಮುಖದಲ್ಲೇ ನೀಡಲಾಗಿತ್ತು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. “ಚಿತ್ರದಲ್ಲಿ ಇಂಟರ್ವಲ್ ಬ್ಲಾಕ್, ಕ್ಲೈಮ್ಯಾಕ್ಸ್ ಸೇರಿದಂತೆ ಹಲವು ಭಾಗಗಳು ನಮ್ಮ ಕಥೆಯನ್ನು ಹೋಲುತ್ತವೆ” […] - [ಮಾ.26–29: ಪುಂಜಂಗೋಡು ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ](https://bisiloorapost.com/march-2629-re-consecration-brahmakalashotsava-at-punjangodu-sri-mannallamma-vishnumoorthi-daivasthana/): ಕಾಸರಗೋಡು,ಮಾ.22: ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದ ಪುಂಜಂಗೋಡು, ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 26ರಿಂದ 29ರವರೆಗೆ ಭಕ್ತಿಭಾವದೊಂದಿಗೆ ನಡೆಯಲಿದೆ.ಇದರ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಮಾರ್ಚ್ 26ರಂದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮಧ್ಯಾಹ್ನ 12.00ಕ್ಕೆ ಭಕ್ತಿಗಾನ ಸುಧಾ ಕಾರ್ಯಕ್ರಮವನ್ನು ಶ್ರೀ ವನದುರ್ಗ ಕರೋಕೆ ಗಾಯನಮೇಳ ಸಂಘ, ಮಲ್ಲ ತಂಡ ನಡೆಸಲಿದೆ. ಬಳಿಕ ಮಧ್ಯಾಹ್ನ 2.00ಕ್ಕೆ ಪ್ರಿಯಾಂಕ ಹರಿಪ್ರಸಾದ್ ಅವರಿಂದ ಭರತನಾಟ್ಯ ನಡೆಯಲಿದೆ. ಮಧ್ಯಾಹ್ನ 2.15ರಿಂದ 3.00ರವರೆಗೆ ಮುಂಡೋಲು ಕರಿಂಬುವಲಪ್ಪು ಭಜನಾ ಸಂಘದ ಭಜನೆ ಕಾರ್ಯಕ್ರಮ ಇರಲಿದೆ. ಮಧ್ಯಾಹ್ನ 3.00ರಿಂದ ಸಂಜೆ 5.00ರವರೆಗೆ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6.00ರಿಂದ 7.00ರವರೆಗೆ ಶ್ರೀ ದುರ್ಗಾಂಬ ಭಜನಾ ಸಂಘ, ಮಲ್ಲ ತಂಡದವರಿಂದ ಭಜನೆ ನಡೆಯಲಿದೆ. ಮಾರ್ಚ್ 27ರಂದು ಮಧ್ಯಾಹ್ನ 1.00ರಿಂದ 3.30ರವರೆಗೆ ‘ಜಾಂಬವತಿ ಕಲ್ಯಾಣʼ ವಿಷಯದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಧ್ಯಾಹ್ನ 3.30ರಿಂದ ಸಂಜೆ […] - [‘ಲವ್ ಮಾಕ್ಟೈಲ್-3’ ವಿರುದ್ಧ ನೆಗಟಿವ್ ಪ್ರಚಾರ?! ಮಾಧ್ಯಮ ವರದಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ ಡಾರ್ಲಿಂಗ್ ಕೃಷ್ಣ](https://bisiloorapost.com/negative-publicity-against-love-mocktail-3-darling-krishna-expresses-disappointment-after-sharing-a-media-report/): ಬೆಂಗಳೂರು, ಮಾ.21: ‘ಲವ್ ಮಾಕ್ಟೈಲ್-3’ ಚಿತ್ರದ ಕುರಿತು ಕೆಲವು ಮಾಧ್ಯಮಗಳಲ್ಲಿ ನಡೆಯುತ್ತಿರುವ ನೆಗಟಿವ್ ಪ್ರಚಾರದ ಬಗ್ಗೆ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಸುದ್ದಿ ವಾಹಿನಿ ಬಿಟಿವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಅನ್ನು ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಮರುಹಂಚಿಕೊಂಡಿರುವ ಅವರು, ಕನ್ನಡ ಚಿತ್ರಗಳಿಗೆ ದೊರೆಯುತ್ತಿರುವ ಬೆಂಬಲದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. “ಎಲ್ಲಾ ನಿಮ್ಮ ಆಶೀರ್ವಾದ 🙏 ‘ಧುರಂಧರ್’ನಲ್ಲಿ ಒಂದು ಡೈಲಾಗ್ ಇದೆ – ‘ಹಿಂದೂಸ್ತಾನ್ ಕಾ ಸಬ್ಸೇ ಬಡಾ ದುಶ್ಮನ್ ಏಕ್ ಹಿಂದೂಸ್ತಾನೀ ಹೀ ಹೈ’… ನಿಮ್ಮ ಸಪೋರ್ಟ್ ಕನ್ನಡ ಚಿತ್ರಗಳ ಮೇಲೆ ಹೀಗೆ ಇರಲಿ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಮೂಲಕ ಕನ್ನಡ ಸಿನಿಮಾಗಳಿಗೆ ನಕಾರಾತ್ಮಕ ವಾತಾವರಣ ಸೃಷ್ಟಿಸುವ ಪ್ರವೃತ್ತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಟಿವಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ‘ಲವ್ ಮಾಕ್ಟೈಲ್-3’ ಚಿತ್ರದ ಬಗ್ಗೆ ಟೀಕಾತ್ಮಕ ಶೀರ್ಷಿಕೆಗಳನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಅವರು ಆ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಚಿತ್ರಕ್ಕೆ […] - [ಪಾದಚಾರಿಗಳ ಸುರಕ್ಷತೆಗೆ ಒತ್ತು; ಬೆಂಗಳೂರಿನ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಬ್ರೇಕ್!](https://bisiloorapost.com/focus-on-pedestrian-safety-street-vending-banned-on-bengalurus-main-roads/): ಬೆಂಗಳೂರು, ಮಾ.21: ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಪಾದಚಾರಿ ಮಾರ್ಗಗಳಿಗೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ನೀತಿಯ ಪ್ರಕಾರ ಮುಖ್ಯರಸ್ತೆ ಮತ್ತು ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದರು. ವಿಧಾನಸೌಧದಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯ ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಕಾರ್ಯಕಾರಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರನ್ನು ಆಹ್ವಾನಿಸಿ ಬಜೆಟ್ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು ಎಂದು ಹೇಳಿದರು. ಐದು ಪಾಲಿಕೆಗಳು ತಮ್ಮದೇ ಪ್ರತ್ಯೇಕ ಬಜೆಟ್ ತಯಾರಿಸಿದ್ದು, ವಾರ್ಡ್‌ವಾರು ಅನುದಾನ ನೀಡುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ. ಪಾದಚಾರಿ ಮಾರ್ಗಗಳ ಮೇಲೆ ಬೀದಿ ವ್ಯಾಪಾರಿಗಳ ಒತ್ತುವರಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಅವರಿಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ ಪಾದಚಾರಿಗಳಿಗೆ ಸುಗಮವಾಗಿ […] - [ಬೆಂಗಳೂರು: ಎಲ್‌ಪಿಜಿ ಅಭಾವದ ಹೊಡೆತ – ಕರಾವಳಿ ಹೋಟೆಲ್‌ಗಳಲ್ಲಿ ಕುಚಲಕ್ಕಿ ಬಂದ್!](https://bisiloorapost.com/bengaluru-lpg-shortage-hits-hard-boiled-rice-off-the-menu-in-coastal-style-hotels/): ಬೆಂಗಳೂರು, ಮಾ.20: ನಗರದಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಶೈಲಿಯ ಊಟ ನೀಡುವ ಹಲವಾರು ಹೋಟೆಲ್‌ಗಳಲ್ಲಿ ಕುಚಲಕ್ಕಿ (boiled rice) ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಊಟಪ್ರಿಯರಿಗೆ ತೊಂದರೆ ಉಂಟಾಗಿದ್ದು, ಪರ್ಯಾಯವಾಗಿ ವೈಟ್ ರೈಸ್ ನೀಡಲಾಗುತ್ತಿದೆ. ಹೋಟೆಲ್ ಮಾಲೀಕರ ಪ್ರಕಾರ, ಕುಚಲಕ್ಕಿ ಬೇಯಿಸಲು ಹೆಚ್ಚಿನ ಸಮಯ ಹಾಗೂ ಗ್ಯಾಸ್ ಅಗತ್ಯವಿರುವುದರಿಂದ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಪೂರೈಸುವುದು ಕಷ್ಟಕರವಾಗಿದೆ. “ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಕಡಿಮೆ ಸಮಯದಲ್ಲಿ ಸಿದ್ಧವಾಗುವ ಪದಾರ್ಥಗಳತ್ತ ಮೊರೆ ಹೋಗಬೇಕಾಗಿದೆ” ಎಂದು ಕೆಲವು ಹೋಟೆಲ್ ನಿರ್ವಾಹಕರು ತಿಳಿಸಿದ್ದಾರೆ. ನಗರದ ಹಲವು ಸಣ್ಣ ಹೋಟೆಲ್‌ಗಳು ಗ್ಯಾಸ್ ಕೊರತೆಯಿಂದಾಗಿ ಈಗಾಗಲೇ ತಾತ್ಕಾಲಿಕವಾಗಿ ಬಂದ್ ಆಗಿದ್ದು, ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇನ್ನೊಂದೆಡೆ, ಕೆಲವು ಹೋಟೆಲ್‌ಗಳು ಇದೇ ಸಂದರ್ಭವನ್ನು ಬಳಸಿಕೊಂಡು ದರ ಏರಿಕೆ ಮಾಡುತ್ತಿರುವ ಆರೋಪವೂ ಕೇಳಿಬರುತ್ತಿದೆ. ಸಾಮಾನ್ಯವಾಗಿ ಚಪಾತಿ-ಸಾರು ಕೇಳಿದರೂ ಗ್ಯಾಸ್ ಅಭಾವದ ನೆಪ ನೀಡಲಾಗುತ್ತಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ಎಲ್‌ಪಿಜಿ ಕೊರತೆಯ ಪರಿಣಾಮವಾಗಿ ನಗರದ ಹೋಟೆಲ್ ಉದ್ಯಮ ಸಂಕಷ್ಟವನ್ನು […] - [‘ಧುರಂಧರ್-2’ಗೆ ಜನಮೆಚ್ಚುಗೆ; ರಮ್ಯಾ ಹೇಳಿಕೆ ಚರ್ಚೆಗೆ ಗ್ರಾಸ, ಪ್ರಕಾಶ್ ರಾಜ್ ಪ್ರತಿಕ್ರಿಯೆಗೆ ಕಾತರ!](https://bisiloorapost.com/dhurandhar-2-wins-audience-praise-ramyas-statement-sparks-debate-curiosity-over-prakash-rajs-response/): ಬೆಂಗಳೂರು, ಮಾ.20: ಬಿಡುಗಡೆಯಾದ ‘ಧುರಂಧರ್-2’ ಸಿನಿಮಾಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ನಟಿ ರಮ್ಯಾ ನೀಡಿದ ನೇರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ರಮ್ಯಾ, “ಚಿತ್ರವು ನಿರೀಕ್ಷೆ ತಲುಪಲಿಲ್ಲ, ಕೆಲ ಅಂಶಗಳು ನಿರಾಶೆ ಉಂಟುಮಾಡಿದವು” ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ಕೆಲವರು ಒಪ್ಪಿಗೆ ಸೂಚಿಸಿದರೆ, ಬಹುತೇಕರು ಸಿನಿಮಾವನ್ನು ಮೆಚ್ಚಿಕೊಂಡು ಸಕಾರಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೆ ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಕೆಲ ನೆಟಿಜನ್‌ಗಳು, ಇಂತಹ ಹೇಳಿಕೆಗಳಿಂದ ಥಿಯೇಟರ್‌ಗಳಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಯನ್ನು ತಡೆಯಲು ಪೊಲೀಸ್ ಬಂದೋಬಸ್ತ್ ಬೇಕಾಗಬಹುದು, ಸಿನಿಮಾಕ್ಕೆ ಮತ್ತಷ್ಟು ಪ್ರಚಾರ ಸಿಗುತ್ತಿವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ, ಎಡಪಂಥೀಯ ಧೋರಣೆಗೆ ಹೆಸರಾಗಿರುವ ನಟ ಪ್ರಕಾಶ್ ರಾಜ್ ಅವರು ಈ ವಿಷಯದ ಕುರಿತು ಯಾವ ರೀತಿಯ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ. ರಮ್ಯಾ ಹೇಳಿಕೆಯ ಬೆನ್ನಲ್ಲೇ ಅವರ […] - [ಜಾಲ್ಸೂರು–ಚೆರ್ಕಳ ರಸ್ತೆ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ](https://bisiloorapost.com/temporary-traffic-restriction-on-jallurcherkala-road/): ಜಾಲ್ಸೂರು, ಮಾ.20: ಜಾಲ್ಸೂರು–ಚೆರ್ಕಳ ರಸ್ತೆಯ ಮಧ್ಯೆ ಡಾಮರೀಕರಣ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ, ಈ ಮಾರ್ಗದ ನಿರ್ದಿಷ್ಟ ಭಾಗದಲ್ಲಿ ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಪಿಡಬ್ಲ್ಯೂಡಿ ರಸ್ತೆಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಚೆರ್ಕಳದಿಂದ ಜಾಲ್ಸೂರಿನತ್ತ ಬರುವ ವಾಹನಗಳು ಪಡಿಯತ್ತಡ್ಕ ಬಳಿ ಬಲಭಾಗಕ್ಕೆ ತಿರುಗಿ ಅಡೂರು ಹಾಗೂ ಕೊಟ್ಯಾಡಿ ಮೂಲಕ ಪರ್ಯಾಯ ಮಾರ್ಗವನ್ನು ಬಳಸಬೇಕು ಎಂದು ಸೂಚಿಸಲಾಗಿದೆ. ಅದೇ ರೀತಿ, ಜಾಲ್ಸೂರಿನಿಂದ ಚೆರ್ಕಳದತ್ತ ತೆರಳುವ ವಾಹನಗಳು ಕೊಟ್ಯಾಡಿ ಬಳಿ ಎಡಭಾಗಕ್ಕೆ ತಿರುಗಿ ಅಡೂರು ಮಾರ್ಗವಾಗಿ ಪಡಿಯತ್ತಡ್ಕ ತಲುಪಿ ನಂತರ ಚೆರ್ಕಳಕ್ಕೆ ಸಾಗಬೇಕು ಎಂದು ತಿಳಿಸಿದ್ದಾರೆ. ಪ್ರಯಾಣಿಕರು ಹಾಗೂ ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. - [ಬೆಂಗಳೂರು–ಮಂಗಳೂರು ವಾರಾಂತ್ಯ ಸಂಚಾರಕ್ಕೆ ವಿಶೇಷ ರೈಲು ಅಗತ್ಯ: ಕೇಂದ್ರಕ್ಕೆ ಬ್ರಿಜೇಶ್ ಚೌಟ ಮನವಿ](https://bisiloorapost.com/special-train-needed-for-weekend-travel-between-bengaluru-and-mangaluru-mp-brijesh-chowta-appeals-to-centre/): ಬೆಂಗಳೂರು, ಮಾ.20: ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಚಾರದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡದ ಹಿನ್ನೆಲೆಯಲ್ಲಿ, ವಾರಾಂತ್ಯ ವಿಶೇಷ ರೈಲು ಸೇವೆ ಆರಂಭಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ಕರಾವಳಿ ಕರ್ನಾಟಕದ ಅನೇಕ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಬೆಂಗಳೂರಿನಲ್ಲಿ ವಾಸವಿದ್ದು, ವಾರಾಂತ್ಯಗಳಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಪ್ರಸ್ತುತ ಬೆಂಗಳೂರು–ಮಂಗಳೂರು ನಡುವೆ ವಾರಾಂತ್ಯಕ್ಕೆ ವಿಶೇಷವಾಗಿ ಮೀಸಲಾದ ರೈಲು ಸೇವೆ ಇಲ್ಲದಿರುವುದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ರೈಲುಗಳಲ್ಲಿ ದೀರ್ಘ ನಿರೀಕ್ಷಾ ಪಟ್ಟಿ, ಗದ್ದಲ ಹಾಗೂ ಅಸೌಕರ್ಯ ಹೆಚ್ಚಾಗಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಪ್ರಯಾಣ ಸುಗಮಗೊಳಿಸಲು ವಿಶೇಷ ರೈಲು ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಡುವ ಮತ್ತು ಭಾನುವಾರ ಸಂಜೆ […] - [ಜಲ ಜೀವನ್ ಮಿಷನ್ ಪರಿಣಾಮಕಾರಿ ಅನುಷ್ಠಾನ; ರಾಜ್ಯದ ಇಬ್ಬರು ಮಹಿಳೆಯರಿಗೆ ರಾಷ್ಟ್ರಪತಿ ಶ್ಲಾಘನೆ!](https://bisiloorapost.com/effective-implementation-of-jal-jeevan-mission-two-women-from-the-state-praised-by-the-president/): ಬೆಂಗಳೂರು, ಮಾ.20: ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಗ್ರಾಮೀಣ ನೀರಿನ ಆಡಳಿತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಸಾಧನೆಗಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳ ಇಬ್ಬರು ಮಹಿಳೆಯರನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಮುದ್ದತನೂರು ಗ್ರಾಮದ ಅನಿತಾ ಹಾಗೂ ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದ ಚನ್ನಮ್ಮ ಅವರನ್ನು 2026ರ ಜಲ ಮಹೋತ್ಸವದಲ್ಲಿ ಸನ್ಮಾನಿಸಲಾಯಿತು. ಇವರ ಕೊಡುಗೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದರು. ಜಲಶಕ್ತಿ ಸಚಿವಾಲಯವು ಮಾರ್ಚ್ 8ರಿಂದ ಮಾರ್ಚ್ 22ರವರೆಗೆ ಜಲ ಮಹೋತ್ಸವ–2026 ಅನ್ನು ಆಯೋಜಿಸಿದೆ. ಮುದ್ದತನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 24/7 ನೀರು ಸರಬರಾಜು ಖಚಿತಪಡಿಸಲು ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಅನಿತಾ ಅವರನ್ನು ಗೌರವಿಸಲಾಗಿದ್ದು, ಸಾರವಾಡ ಗ್ರಾಮ ಪಂಚಾಯತ್‌ನ ಪ್ರತಿಯೊಂದು ಮನೆಗೂ ನಿರಂತರ ಪೈಪ್ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಶ್ರಮಿಸಿದ್ದಕ್ಕಾಗಿ ಚನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯೊಂದಿಗೆ ಕೈಜೋಡಿಸಿದ ಅನಿತಾ, ನೀರಿನ ಸಂಪರ್ಕವಿಲ್ಲದ ಮನೆಗಳನ್ನು ಗುರುತಿಸಿ, ಮನೆ ಮನೆಗೆ ಭೇಟಿ ನೀಡಿ […] - [ಬಾಗಲಕೋಟೆ–ದಾವಣಗೆರೆ ಉಪಚುನಾವಣೆ;ಯುಗಾದಿ ಹಬ್ಬದ ದಿನವೇ ಅಭ್ಯರ್ಥಿಗಳ ಘೋಷಣೆ!](https://bisiloorapost.com/bagalkotedavangere-by-elections-candidates-announced-on-ugadi-day-itself/): ಬೆಂಗಳೂರು, ಮಾ.19: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಯುಗಾದಿ ಹಬ್ಬ ದಿನದಂದು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಕಣವನ್ನು ರಂಗೇರಿಸಿದೆ. ಏಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಹಳೆಯ ಮುಖಕ್ಕೂ ಹೊಸ ನಾಯಕತ್ವಕ್ಕೂ ಸಮನಾಗಿ ಅವಕಾಶ ನೀಡಿರುವುದು ಗಮನಾರ್ಹವಾಗಿದೆ. ಬಾಗಲಕೋಟೆ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್ ಅವರನ್ನು ಮತ್ತೊಮ್ಮೆ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಟಿ. ಶ್ರೀನಿವಾಸ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದನ್ನು ಮನಗಂಡು ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನದ ನಂತರ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ರಾಜಕೀಯ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಇನ್ನೊಂದೆಡೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಬಿಜೆಪಿ ತಂತ್ರ ರೂಪಿಸಿದೆ. ಎಸ್‌ಟಿ ಸಮುದಾಯಕ್ಕೆ ಸೇರಿದ ಟಿ. ಶ್ರೀನಿವಾಸ ದಾಸ ಕರಿಯಪ್ಪ ಅವರಿಗೆ […] - [ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ: ‘ಇವ ನಮ್ಮವ’ ವಿಧೇಯಕ ವಿಧಾನಸಭೆಯಲ್ಲಿ ಮಂಡನೆ](https://bisiloorapost.com/protection-for-inter-caste-marriages-iv-nammava-bill-introduced-in-the-legislative-assembly/): ಮರ್ಯಾದೆ ಹತ್ಯೆ ಸೇರಿದಂತೆ ಜಾತಿ ಆಧಾರಿತ ಅಪರಾಧಗಳಿಗೆ ಕಟ್ಟುನಿಟ್ಟಿನ ನಿಷೇಧ; ತೆರಿಗೆ ತಿದ್ದುಪಡಿ ವಿಧೇಯಕವೂ ಮಂಡನೆ ಬೆಂಗಳೂರು, ಮಾ.19: 2026ನೇ ಸಾಲಿನ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿರುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (‘ಇವ ನಮ್ಮವ ಇವ ನಮ್ಮವ’) ವಿಧೇಯಕವನ್ನು ಮುಖ್ಯಮಂತ್ರಿ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ–ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು. ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯ ಮುಂದುವರಿದಿದ್ದು, ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಯುವಕರ ಮೇಲೆ ಮರ್ಯಾದೆ ಹತ್ಯೆ ಸೇರಿದಂತೆ ಕ್ರೂರ ಹಿಂಸಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವಿಧೇಯಕ ಅವಶ್ಯಕವಾಗಿದೆ ಎಂದು ಸಚಿವರು ವಿವರಿಸಿದರು. ಈ ವಿಧೇಯಕವು ವ್ಯಕ್ತಿಯ ಘನತೆ, ರಾಷ್ಟ್ರದ ಏಕತೆ ಹಾಗೂ ಭ್ರಾತೃತ್ವದ ತತ್ವವನ್ನು ಬಲಪಡಿಸುವುದರ ಜೊತೆಗೆ, ಜಾತಿ ಆಧಾರಿತ ತಾರತಮ್ಯ ನಿರ್ಮೂಲನೆ ಮತ್ತು ಅಂತರ್ಜಾತಿ ವಿವಾಹಗಳಿಗೆ ರಕ್ಷಣೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಜೊತೆಗೆ, ವಿವಾಹದಲ್ಲಿ ಆಯ್ಕೆಯ […] - [ಹಿಮಗ್ರಾಮವಾದ ಮಾಚಾಪುರ: ಧಾರವಾಡದಲ್ಲಿ ಭಾರೀ ಆಲಿಕಲ್ಲು ಮಳೆ!](https://bisiloorapost.com/machapur-turns-into-a-snow-village-heavy-hailstorm-in-dharwad/): ಧಾರವಾಡ, ಮಾ.18: ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಮಂಗಳವಾರ ಅಪರೂಪದ ಭಾರೀ ಆಲಿಕಲ್ಲು ಮಳೆ ಸುರಿದು, ಗ್ರಾಮವೆಲ್ಲ ಕ್ಷಣಾರ್ಧದಲ್ಲಿ ಬಿಳಿ ಹೊದಿಕೆಯಿಂದ ಆವೃತವಾಗಿ ‘ಕಾಶ್ಮೀರ’ದಂತಾಗಿ ಬದಲಾಗಿದ ಘಟನೆ ನಡೆದಿದೆ. ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆ ಮತ್ತು ಆಲಿಕಲ್ಲುಗಳಿಂದ ರಸ್ತೆಗಳಲ್ಲಿ ಹಾಗೂ ಮನೆಗಳ ಮೇಲ್ಚಾವಣಿಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದವು. ಮಳೆ ನಿಂತ ಬಳಿಕ ಗ್ರಾಮಸ್ಥರು ಮನೆಗಳಿಂದ ಹೊರಬಂದು ಈ ವಿಶಿಷ್ಟ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ರಸ್ತೆಗಳು ಹಿಮಪಾತವಾದಂತೆ ಕಂಗೊಳಿಸಿದ ದೃಶ್ಯ ಜನರನ್ನು ಆಶ್ಚರ್ಯಚಕಿತರನ್ನಾಗಿಸಿತು. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ಮಾತನಾಡಿ, “ಸ್ಥಳೀಯ ಮಟ್ಟದಲ್ಲಿ ಉಂಟಾದ ತೀವ್ರ ಗಾಳಿಚಲನೆ, ಉಷ್ಣತೆ ಮತ್ತು ತೇವಾಂಶದ ಸಂಯೋಜನೆಯಿಂದ ಈ ರೀತಿಯ ಆಲಿಕಲ್ಲು ಮಳೆ ಸಂಭವಿಸಿದೆ. ಮಾನ್ಸೂನ್ ಪೂರ್ವ ಅವಧಿಯಲ್ಲಿ ಇಂತಹ ಘಟನೆಗಳು ಸಾಮಾನ್ಯ,” ಎಂದು ತಿಳಿಸಿದ್ದಾರೆ. ಉತ್ತರ ಒಳನಾಡಿನಲ್ಲಿ ಗಾಳಿಯ ವ್ಯತ್ಯಾಸ ಹಾಗೂ ವಾಯುಭಾರ ಕುಸಿತವೂ ಈ ಮಳೆಯ ತೀವ್ರತೆಗೆ ಕಾರಣವಾಗಿದೆ […] - [ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; 8.65 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ!](https://bisiloorapost.com/sslc-exams-from-tomorrow-countdown-begins-for-the-future-of-8-65-lakh-students/): ಬೆಂಗಳೂರು, ಮಾ.17: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಂಗಳವಾರದಿಂದ ಆರಂಭವಾಗಲಿದ್ದು, ಏಪ್ರಿಲ್‌ 2ರವರೆಗೆ ನಡೆಯಲಿವೆ. ಪರೀಕ್ಷೆಯನ್ನು ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ರಾಜ್ಯದಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮೊದಲ ದಿನದ ಪರೀಕ್ಷೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿದೆ. ಪರೀಕ್ಷೆಯ ಸುಗಮ ನಿರ್ವಹಣೆಗೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸುಳ್ಳು ಮಾಹಿತಿ ಹರಡುವುದು ಅಥವಾ ನಕಲಿ ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯದಾದ್ಯಂತ ಉಚಿತ ಬಸ್‌ […] - [ಇಂಧನ ಕೊರತೆ ಸಂಕಷ್ಟ: ಶ್ರೀಲಂಕಾದಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ನಿಗದಿ](https://bisiloorapost.com/fuel-shortage-crisis-four-day-work-week-announced-in-sri-lanka/): ಕೊಲಂಬೋ, ಮಾ.17: ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ನೆರೆಯ ಶ್ರೀಲಂಕಾದಲ್ಲಿ ಇಂಧನ ಕೊರತೆಯ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ವಾರಕ್ಕೆ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಿದೆ. ಇಂಧನ ಕೊರತೆಯ ಹಿನ್ನೆಲೆ ತುರ್ತು ಕ್ರಮವಾಗಿ ಶ್ರೀಲಂಕಾ ಸರ್ಕಾರ ಸೋಮವಾರ ಈ ನಿರ್ಧಾರ ಪ್ರಕಟಿಸಿದ್ದು, ಪ್ರತಿ ಬುಧವಾರವನ್ನು ಸಾರ್ವಜನಿಕ ರಜೆಯಾಗಿ ಘೋಷಿಸಲಾಗಿದೆ. ಪ್ರಸ್ತುತ ದೇಶದಲ್ಲಿ ಐದು ದಿನಗಳ ಕೆಲಸದ ವಾರ ಅನುಸರಿಸಲಾಗುತ್ತಿದ್ದು, ಹೊಸ ವ್ಯವಸ್ಥೆ ಮಾರ್ಚ್ 18ರಿಂದ ಜಾರಿಗೆ ಬರಲಿದೆ. ಈ ಕುರಿತು ಅಗತ್ಯ ಸೇವೆಗಳ ಆಯುಕ್ತ ಜನರಲ್ ಪ್ರಭತ್ ಚಂದ್ರಕೀರ್ತಿ ಮಾತನಾಡಿ, “ಮಾರ್ಚ್ 18ರಿಂದ ಪ್ರತಿ ಬುಧವಾರವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗುತ್ತದೆ” ಎಂದು ತಿಳಿಸಿದ್ದಾರೆ. ಆದರೆ ಆರೋಗ್ಯ ಸೇವೆಗಳು, ಬಂದರುಗಳು, ನೀರು ಸರಬರಾಜು ಮತ್ತು ಕಸ್ಟಮ್ಸ್ ಇಲಾಖೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಶಾಲೆಗಳು, ವಿಶ್ವವಿದ್ಯಾಲಯಗಳು ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಈ ಕ್ರಮ ಅನ್ವಯವಾಗಲಿದ್ದು, ಖಾಸಗಿ ವಲಯವೂ ಇದೇ ಕ್ರಮವನ್ನು […] - [ಸಮಾಜಮುಖಿ ಸೇವೆಗೆ ಸಂದ ಗೌರವ: ‘ಹಂಸ ಸಮ್ಮಾನ್–2026’; ವಂದೇ ಭಾರತಂ ಫೌಂಡೇಶನ್ ಕಾರ್ಯಗಳ ಹಿನ್ನೋಟ](https://bisiloorapost.com/recognition-for-social-service-hamsa-samman2026-a-look-back-at-the-activities-of-vande-bharatam-foundation/): ಸಮಾಜಮುಖಿ ಕಾರ್ಯಗಳು, ರೈತರ ಕಲ್ಯಾಣ, ಪರಿಸರ ಸಂರಕ್ಷಣೆ ಹಾಗೂ ನಾಗರಿಕ ಸಹಭಾಗಿತ್ವದ ಮೂಲಕ ಜನಜೀವನದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಂದೇ ಭಾರತಂ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾದ ಬಿಜ್ಜವರ ಎಚ್. ಲೋಕೇಶ್ ಅವರಿಗೆ ಪ್ರತಿಷ್ಠಿತ ‘ಹಂಸ ಸಮ್ಮಾನ್–2026’ ಪ್ರಶಸ್ತಿ ಲಭಿಸಿದೆ. ಹಂಸಜ್ಯೋತಿ ಟ್ರಸ್ಟ್ (ರಿ) ವತಿಯಿಂದ ನಡೆದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನಗೊಂಡಿದೆ. ಈ ಪ್ರಶಸ್ತಿ ಲಭಿಸಿದ ಸಂದರ್ಭದಲ್ಲಿ, ಲೋಕೇಶ್ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಡೆಸಿರುವ ಕಾರ್ಯಗಳನ್ನು ಮೆಲುಕು ಹಾಕುವುದು ಸೂಕ್ತವಾಗಿದೆ. ಜನ ಶಾಸನ:ಸೂಕ್ಷ್ಮ ಆಡಳಿತಕ್ಕೆ ನಾಗರಿಕರ ಸಹಭಾಗಿತ್ವ ವಂದೇ ಭಾರತಂ ಫೌಂಡೇಶನ್ ಮೂಲಕ ಲೋಕೇಶ್ ಹಲವು ವರ್ಷಗಳಿಂದ ಸಾರ್ವಜನಿಕ ಹಿತದಾಯಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದಾರೆ. ನಗರ ಆಡಳಿತದಲ್ಲಿ ನಾಗರಿಕರ ನೇರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಪ್ರಜಾಡಳಿತ – ಜನ ಶಾಸನ’ ಎಂಬ ಕಾರ್ಯಕ್ರಮವನ್ನು ವಂದೇ ಭಾರತಂ ಫೌಂಡೇಶನ್ ರೂಪಿಸಿತ್ತು. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 198 ವಾರ್ಡ್‌ಗಳ ನಾಗರಿಕರು ಮತ್ತು ವಿವಿಧ ಕ್ಷೇತ್ರಗಳ ಹಿತಾಸಕ್ತಿದಾರರನ್ನು ಒಳಗೊಂಡಂತೆ […] - [ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ–ಉಪನ್ಯಾಸ ಕಾರ್ಯಕ್ರಮ](https://bisiloorapost.com/international-womens-day-state-level-poetry-meet-and-lecture-programme-held-in-chitradurga/): ಚಿತ್ರದುರ್ಗ,ಮಾ.17: ಕರ್ನಾಟಕ ಲೇಖಕಿಯರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಪತ್ರಕರ್ತರ ಭವನದ ಅಂಬೇಡ್ಕರ್ ಸಭಾಂಗಣದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ. ಕರಿಯಪ್ಪ ಮಾಳಗಿ ಮಾತನಾಡಿ, 21ನೇ ಶತಮಾನದಲ್ಲಿ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ ಎಂದು ಹೇಳಿದರು. “ಇಂದಿನ ಮಹಿಳೆಯರು ಹಳೆಯ ವಿಚಾರಗಳಲ್ಲೇ ಸೀಮಿತವಾಗಿರದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತಮ್ಮ ಅಸ್ತಿತ್ವವನ್ನು ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗಾಗಿ ಗರತಿ ಹಾಡುಗಳಿರುವುದೇ ಹೊರತು ಪುರುಷರಿಗಾಗಿ ಇಲ್ಲ. ಇಂತಹ ಕಾರ್ಯಕ್ರಮಗಳು ಸಮಾಜದ ಬಹುತ್ವವನ್ನು ಪ್ರತಿಪಾದಿಸುತ್ತವೆ. ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ನೀವು ಇದಕ್ಕೆ ಸಾಕ್ಷಿಯಾಗಿದ್ದೀರಿ,” ಎಂದರು. ಖ್ಯಾತ ವಿಮರ್ಶಕಿ ಹಾಗೂ ಕವಯತ್ರಿ ತಾರಿಣಿ ಶುಭದಾಯಿನಿ ಉಪನ್ಯಾಸ ನೀಡುತ್ತಾ, ಅನಾದಿ ಕಾಲದಿಂದ ಮಹಿಳೆ ಶೋಷಣೆಯನ್ನು ಅನುಭವಿಸುತ್ತಾ ಬಂದಿದ್ದಾಳೆ ಎಂದು ಅಭಿಪ್ರಾಯಪಟ್ಟರು. “ಮಹಿಳೆಯ ಭಾವನೆಗಳನ್ನು ವ್ಯಕ್ತಪಡಿಸಲು ಹಲವೇಳೆ ಪುರುಷನ ಒಪ್ಪಿಗೆಯೇ ಅಗತ್ಯವಾಗುತ್ತದೆ ಎಂಬ ಸ್ಥಿತಿ […] - [ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಬಿಜ್ಜವರ ಎಚ್. ಲೋಕೇಶ್ ಅವರಿಗೆ ‘ಹಂಸ ಸಮ್ಮಾನ್–2026’ ಪ್ರಶಸ್ತಿ ಪ್ರದಾನ](https://bisiloorapost.com/vande-bharat-foundation-founder-bijjavar-h-lokesh-conferred-with-the-hamsa-samman2026-award/): ಬೆಂಗಳೂರು, ಮಾ.16: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಂಸಜ್ಯೋತಿ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಹಂಸ ಸಮ್ಮಾನ್–2026’ ಪ್ರಶಸ್ತಿಯನ್ನು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಬಿಜ್ಜವರ ಎಚ್. ಲೋಕೇಶ್ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತರಾದ ನ್ಯಾ. ಸಂತೋಷ್ ಹೆಗ್ಡೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಸೇರಿದಂತೆ ವಿವಿಧ ಗಣ್ಯರು ಬಿಜ್ಜವರ ಎಚ್. ಲೋಕೇಶ್ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಲೋಕೇಶ್ ಅವರ ಸಮಾಜಮುಖಿ ಸಾಧನೆಯನ್ನು ಸ್ಮರಿಸಲಾಯಿತು. ರೈತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಲೋಕೇಶ್ ಅವರ ಕಾರ್ಯವನ್ನು ಶ್ಲಾಘಿಸಿ, ನೀರಿನ ಅಭಾವದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಕೆರೆ–ನದಿಗಳಂತಹ ನೀರಿನ ಮೂಲಗಳ ಉಳಿವಿಗಾಗಿ, ವಿಶೇಷವಾಗಿ ದಕ್ಷಿಣ ಪಿನಾಕಿನಿ ನದಿ ಸಂರಕ್ಷಣೆಗೆ ಅವರು ಕೈಗೊಂಡಿರುವ ಪ್ರಯತ್ನಗಳು ಗಮನಾರ್ಹವೆಂದು ವೇದಿಕೆಯಲ್ಲಿ ಪ್ರಶಂಸಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ‘ಹಂಸ ಸಾಂಸ್ಕೃತಿಕ […] - [ಡ್ರೋನ್ ದಾಳಿ ಆತಂಕ: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ!](https://bisiloorapost.com/drone-attack-scare-flight-operations-temporarily-suspended-at-dubai-international-airport/): ದುಬೈ, ಮಾ.16: ವಾಯುನೆಲೆಯ ಸಮೀಪ ನಡೆದ ಡ್ರೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ದಾಳಿಯಿಂದ ಇಂಧನ ಟ್ಯಾಂಕ್‌ಗಳಿಗೆ ಹಾನಿಯಾಗಿದ್ದು, ತುರ್ತು ಸೇವಾ ತಂಡಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಹಲವು ವಿಮಾನಗಳನ್ನು ವಿಮಾನ ನಿಲ್ದಾಣದ ಹೊರವಲಯದಲ್ಲಿ ಸುತ್ತುವಂತೆ ಮಾಡಲಾಗಿದ್ದು, ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ. ದುಬೈನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ಪ್ರಮುಖ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ಕೆಲವು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ದೃಢಪಡಿಸಿದೆ. ಇದೇ ವೇಳೆ, ಘಟನೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಂಧಿಸಲಾದ ೩೫ ಮಂದಿಯಲ್ಲಿ ೧೯ ಭಾರತೀಯರು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. […] - [ಕೇರಳ–ತಮಿಳುನಾಡು ಸೇರಿ ಐದು ರಾಜ್ಯಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟ; ಮಾದರಿ ನೀತಿ ಸಂಹಿತೆ ಜಾರಿ](https://bisiloorapost.com/election-schedule-announced-for-five-states-including-kerala-and-tamil-nadu-model-code-of-conduct-comes-into-force/): ನವದೆಹಲಿ, ಮಾ.15: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಇದರೊಂದಿಗೆ ಈ ಐದು ರಾಜ್ಯಗಳಲ್ಲೂ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಈ ಐದು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶವನ್ನು 2026ರ ಮೇ 4ರಂದು ಪ್ರಕಟಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ. ಎಲ್ಲ ವಿಧಾನಸಭೆಗಳ ಅವಧಿಯೂ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಹಿನ್ನೆಲೆ ಏಪ್ರಿಲ್–ಮೇ ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟವಾದ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. 2021ರಲ್ಲಿ ಇದೇ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಫೆಬ್ರವರಿ 26ರಂದು ಘೋಷಿಸಲಾಗಿತ್ತು. ಆಗ ಪಶ್ಚಿಮ ಬಂಗಾಳದಲ್ಲಿ […] - [ಲೈಂಗಿಕ ಕಿರುಕುಳ ಆರೋಪಗಳ ನಡುವೆಯೇ ವೈರಮುತ್ತುವಿಗೆ ಜ್ಞಾನಪೀಠ ಘೋಷಣೆ; ಸಾಹಿತ್ಯ ವಲಯದಲ್ಲಿ ಆಕ್ರೋಶ!](https://bisiloorapost.com/jnanpith-announced-for-vairamuthu-amid-sexual-harassment-allegations-outrage-in-literary-circles/): ಚೆನ್ನೈ, ಮಾ.15: ತಮಿಳಿನ ಖ್ಯಾತ ಗೀತರಚನೆಕಾರ ಹಾಗೂ ಬರಹಗಾರ ವೈರಮುತ್ತು ಅವರಿಗೆ ಈ ವರ್ಷದ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದರಿಂದ ತಮಿಳುನಾಡು ಸೇರಿದಂತೆ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತೀವ್ರ ವಿವಾದ ಉದ್ಭವಿಸಿದೆ. ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ. 2018ರಲ್ಲಿ ‘ಮೀ ಟೂ’ ಚಳವಳಿಯ ಸಂದರ್ಭದಲ್ಲಿ ತಮಿಳಿನ ಪ್ರಸಿದ್ಧ ಗಾಯಕಿ ಚಿನ್ಮಯಿ ಶ್ರೀಪಾದ್ ಸೇರಿದಂತೆ ಹಲವಾರು ಮಹಿಳೆಯರು ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಬಹಿರಂಗವಾಗಿ ಮಾಡಿದ್ದರು. ತಮ್ಮ ಮೇಲಾದ ಅನುಭವಗಳನ್ನು ವಿವರಿಸಿದ ಚಿನ್ಮಯಿ, 2005ರ ಅವಧಿಯಲ್ಲಿ ವೈರಮುತ್ತುವಿನಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೆ ನೀಡಿದ್ದರು. ಬಳಿಕ ಇನ್ನೂ ಹಲವು ಮಹಿಳೆಯರು ಸಹ ಇಂತಹ ಆರೋಪಗಳನ್ನು ಮುಂದಿಟ್ಟಿದ್ದರು. ಈ ಆರೋಪಗಳ ಕುರಿತು ಮಾತನಾಡಿದ್ದಕ್ಕಾಗಿ ತಮಗೆ ವೃತ್ತಿಜೀವನದಲ್ಲಿಯೂ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಚಿನ್ಮಯಿ ಹೇಳಿಕೊಂಡಿದ್ದು, ಈ ಕುರಿತು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಲಭ್ಯವಿವೆ. ಆರೋಪ ಮಾಡಿದವರಲ್ಲಿ ಕೆಲವು ಪತ್ರಕರ್ತೆಯರು ಮತ್ತು […] - [ಚಪ್ಪಲಿ ಧರಿಸಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ; ಬಾನು ಮುಷ್ತಾಕ್ ನಡೆಗೆ ವಿರೋಧ!](https://bisiloorapost.com/paid-floral-tribute-to-ambedkars-portrait-wearing-slippers-opposition-to-banu-mushtaqs-act/): ಮಂಡ್ಯ, ಮಾ.15: ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಾಹಿತಿ ಬಾನು ಮುಷ್ತಾಕ್ ಚಪ್ಪಲಿ ಧರಿಸಿಕೊಂಡೇ ಪುಷ್ಪನಮನ ಸಲ್ಲಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶ’ದಲ್ಲಿ ಈ ಘಟನೆ ನಡೆದಿದೆ. ಸಮಾವೇಶದ ಆರಂಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ವೇಳೆ ಬಾನು ಮುಷ್ತಾಕ್ ಮುಂದೆ ಬಂದಾಗ, ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದ್ದಾರೆ ಆದರೆ ಅದಕ್ಕೆ ಅವರು ಒಪ್ಪದೇ, ಚಪ್ಪಲಿ ಧರಿಸಿಕೊಂಡೇ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದರಿಂದ ಕೆಲವರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಘಟನೆ ವಿವಾದಕ್ಕೆ ತಿರುಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಬಾನು ಮುಷ್ತಾಕ್, ತಮ್ಮ ನಡೆಗೆ ಸಮರ್ಥನೆ ನೀಡಿದರು. “ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು. ಅದು ನಮ್ಮ ಅಸ್ಮಿತೆಯ ಸಂಕೇತ. ನಾವು ಚಪ್ಪಲಿ ಹೊಲಿಯುವವರು, ಆದ್ದರಿಂದ ಅದರ ಬಗ್ಗೆ ನಮಗೆ ಅಪಾರ ಗೌರವವಿದೆ,” ಎಂದು […] - [ರಾಜ್ಯದ ಕೆಲವೆಡೆ ಮಳೆ; ಬಿಸಿಲಿಗೆ ತತ್ತರಿಸಿದ ಜನತೆಗೆ ತಂಪೆರೆದ ವರುಣ](https://bisiloorapost.com/rain-in-parts-of-the-state-showers-bring-relief-to-people-reeling-under-the-heat/): ಬೆಂಗಳೂರು, ಮಾ.14: ಬಿಸಿನಿಲಿನ ತಾಪಕ್ಕೆ ಕಂಗೆಟ್ಟಿರುವ ಈ ಸಮಯದಲ್ಲಿ ರಾಜ್ಯದ ಕೆಲವು ಕಡೆ‌ ಮಳೆಯಾಗಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಶನಿವಾರ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಬಿಸಿಲಿನ ತೀವ್ರತೆಗೆ ಬಳಲುತ್ತಿದ್ದ ಜನತೆಗೆ ವರುಣ ತಂಪು ನೀಡಿದ್ದಾನೆ. ಧಾರವಾಡ ನಗರದ ವಿವಿಧ ಭಾಗಗಳಲ್ಲಿ ಸಂಜೆ ವೇಳೆ ಗುಡುಗು–ಸಿಡಿಲು ಸಹಿತ ಭಾರೀ ಮಳೆಯಾಗಿದೆ. ತೀವ್ರ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಈ ಮಳೆ ತುಸು ಸಮಾಧಾನ ತಂದರೂ, ಜೋರಾಗಿ ಬೀಸಿದ ಗಾಳಿಯಿಂದ ಮಾವಿನ ಬೆಳೆಗೆ ಹಾನಿಯಾಗುವ ಆತಂಕ ವ್ಯಕ್ತವಾಗಿದೆ. ನಗರದ ಕರ್ನಾಟಕ ಕಾಲೇಜು (ಕೆಸಿಡಿ) ಮೈದಾನದಲ್ಲಿ ಆಯೋಜಿಸಿದ್ದ ಸಂಸದ ಮಹೋತ್ಸವದ ಕುಸ್ತಿ ಟೂರ್ನಿ ಮಳೆಯಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡಿದೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಧರ್ಮಸ್ಥಳ ಪ್ರದೇಶಗಳಲ್ಲಿ ಕೂಡ ಸಂಜೆ ಉತ್ತಮ ಮಳೆಯಾಗಿದೆ. ಮಳೆಯ ಕಾರಣದಿಂದ ಕೆಲಕಾಲ ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು. ಗುರುವಾಯನಕೆರೆ ಪ್ರದೇಶದಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಬಳಿಕ ಮಳೆ ಸುರಿಯಿತು. […] - [ವರದಕ್ಷಿಣೆ ಕಿರುಕುಳಕ್ಕೆ ಬ್ರೇಕ್: ತಪ್ಪಿತಸ್ಥರ ಮನೆಗೆ ಎಲ್‌ಪಿಜಿ ಪೂರೈಕೆ ಸ್ಥಗಿತದ ಎಚ್ಚರಿಕೆ!](https://bisiloorapost.com/crackdown-on-dowry-harassment-warning-of-suspension-of-lpg-supply-to-offenders-homes/): ಜೈಪುರ, ಮಾ.14: ವರದಕ್ಷಿಣೆ ಆಸೆಗಾಗಿ ಸೊಸೆಯಂದಿರಿಗೆ ಕಿರುಕುಳ ನೀಡುವ ಕುಟುಂಬಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ರಾಜಸ್ಥಾನ ಪೊಲೀಸರು ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ತನಿಖೆಯಲ್ಲಿ ಕಿರುಕುಳ ಸಾಬೀತಾದಲ್ಲಿ, ಸಂಬಂಧಪಟ್ಟ ಕುಟುಂಬಕ್ಕೆ ಗ್ಯಾಸ್ ಸಿಲಿಂಡರ್ ಸೌಲಭ್ಯವನ್ನು ರದ್ದುಗೊಳಿಸಲಾಗುವುದು,” ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಪಿಡುಗಾದ ವರದಕ್ಷಿಣೆ ಕಿರುಕುಳವನ್ನು ನಿಯಂತ್ರಿಸಲು ಅಗತ್ಯ ಸೇವೆಗಳನ್ನೇ ಅಸ್ತ್ರವಾಗಿ ಬಳಸುವ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಲಾಗಿದೆ. ಈ ಹೊಸ ನಿಯಮವನ್ನು ಯಾವ ದಿನಾಂಕದಿಂದ ಜಾರಿಗೆ ತರಲಾಗುವುದು ಎಂಬುದನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಈಗಾಗಲೇ ವರದಕ್ಷಿಣೆ ಕಿರುಕುಳದ ದೂರು ದಾಖಲಾಗಿರುವ ಮನೆಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದು, ಶೀಘ್ರದಲ್ಲೇ ಈ ನಿಯಮವನ್ನು ಜಾರಿಗೆ ತರುವ […] - [ಎಐ ತಂತ್ರಜ್ಞಾನದಿಂದ ಅನುವಾದಗೊಂಡ ಮೊದಲ ಪುಸ್ತಕ ‘ನನ್ನ ಹೆಸರು ಗೌಹರ್ ಜಾನ್’ ಮಾ.15ಕ್ಕೆ ಬಿಡುಗಡೆ](https://bisiloorapost.com/my-name-is-gauhar-jaan-the-first-book-translated-using-ai-technology-to-be-released-on-march-15/): ಬೆಂಗಳೂರು, ಮಾ.14: ವಿವಿಧ ಭಾಷೆಗಳಲ್ಲಿರುವ ಪುಸ್ತಕಗಳು ಓದುಗರಿಗೆ ಅವರದೇ ಭಾಷೆಯಲ್ಲಿ ಲಭ್ಯವಾದಾಗ ಹೆಚ್ಚು ತೃಪ್ತಿ ನೀಡುತ್ತವೆ. ಜೊತೆಗೆ ಅನೇಕ ಭಾಷೆಗಳ ಅರಿವಿಲ್ಲದ ಓದುಗರಿಗೂ ವಿಷಯವನ್ನು ಸುಲಭವಾಗಿ ಮುಟ್ಟಿಸಲು ಅನುವಾದ ಪ್ರಮುಖ ಪಾತ್ರವಹಿಸುತ್ತದೆ. ಈ ಕಾರಣದಿಂದ ಅನೇಕ ಕೃತಿಗಳು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡು ಓದುಗರ ಮೆಚ್ಚುಗೆ ಪಡೆದಿವೆ. ಆದರೆ ಪುಸ್ತಕ ಅನುವಾದಿಸುವುದು ಸುಲಭದ ಕೆಲಸವಲ್ಲ. ಮೂಲ ಲೇಖಕರು ಹೇಳಿರುವ ಅರ್ಥವನ್ನು ಅನರ್ಥಗೊಳಿಸದೆ ಮತ್ತೊಂದು ಭಾಷೆಗೆ ಸರಿಯಾಗಿ ವರ್ಗಾಯಿಸುವುದು ಅನುವಾದಕರಿಗೆ ಸವಾಲಿನ ಕೆಲಸವಾಗಿದ್ದು, ಸಾಮಾನ್ಯವಾಗಿ ಒಂದು ಪುಸ್ತಕದ ಅನುವಾದಕ್ಕೆ ಮೂರುರಿಂದ ನಾಲ್ಕು ತಿಂಗಳುಗಳವರೆಗೆ ಸಮಯ ಬೇಕಾಗುತ್ತದೆ. ಇದೀಗ ಜಗತ್ತಿನ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಈ ಕ್ಷೇತ್ರದಲ್ಲಿಯೂ ಹೊಸ ಪ್ರಯೋಗಕ್ಕೆ ಕಾರಣವಾಗಿದೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಎಐ ಸಹಾಯದಿಂದ ಅನುವಾದಿಸಲಾದ ‘My Name is Gauhar Jaan’ ಪುಸ್ತಕದ ಕನ್ನಡ ಆವೃತ್ತಿಯಾದ ‘ನನ್ನ ಹೆಸರು ಗೌಹರ್ ಜಾನ್’ ಭಾನುವಾರ (ಮಾ.15) ಬಿಡುಗಡೆಯಾಗಲಿದೆ. ಈ ಮೂಲ ಕೃತಿಯನ್ನು ಲೇಖಕ ವಿಕ್ರಮ್ ಸಂಪತ್ […] - [ಹೊಸ ಪಕ್ಷದೊಂದಿಗೆ ತಮಿಳುನಾಡು ರಾಜಕೀಯಕ್ಕೆ ಶಶಿಕಲಾ ಪ್ರವೇಶ; ಮೈತ್ರಿಯೊಂದಿಗೆ ಚುನಾವಣೆಗೆ ಸ್ಪರ್ಧೆ](https://bisiloorapost.com/sasikala-enters-tamil-nadu-politics-with-a-new-party-to-contest-elections-with-alliances/): ಚೆನ್ನೈ, ಮಾ.14: ಎಐಎಡಿಎಂಕೆಯಿಂದ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ಇತ್ತೀಚೆಗೆ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದ ಹಿನ್ನೆಲೆಯಲ್ಲಿ, ಶುಕ್ರವಾರ ತಮ್ಮ ನೂತನ ಪಕ್ಷದ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪಕ್ಷಕ್ಕೆ ‘ಅಖಿಲ ಭಾರತ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ ಎಂದು ಹೆಸರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಫೆಬ್ರವರಿ 24ರಂದು ದಿವಂಗತ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರ 74ನೇ ಜನ್ಮ ದಿನಾಚರಣೆಯ ಅಂಗವಾಗಿ, ರಾಮನಾಥಪುರಂ ಜಿಲ್ಲೆಯ ಕಮುತಿ ಪಟ್ಟಣದಲ್ಲಿ ಶಶಿಕಲಾ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದರು. ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹೊಸ ಪಕ್ಷದ ಚಿಹ್ನೆ ‘ತೆಂಗಿನ ತೋಟ’ ಆಗಿರಲಿದೆ ಎಂದು ತಿಳಿಸಿದರು. ಇದು ಶ್ರಮಿಕ ವರ್ಗದ ಸಂಕೇತವನ್ನು ಪ್ರತಿನಿಧಿಸುತ್ತದೆ ಎಂದು ಶಶಿಕಲಾ ಹೇಳಿದ್ದಾರೆ. ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ಪಕ್ಷವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಲಿದೆ ಎಂದು ಸ್ಪಷ್ಟಪಡಿಸಿದರು. “ಕೆಲವರು ಏಕಾಂಗಿಯಾಗಿ ಸ್ಪರ್ಧಿಸಲು […] - [ಎಲ್‌ಪಿಜಿ ಕೊರತೆ ಆತಂಕ; ಇಂಡಕ್ಷನ್ ಕುಕ್‌ಟಾಪ್‌ಗಳಿಗೆ ಹೆಚ್ಚಿದ ಬೇಡಿಕೆ](https://bisiloorapost.com/lpg-shortage-fears-surge-in-demand-for-induction-cooktops/): ಬೆಂಗಳೂರು, ಮಾ.13: ಇರಾನ್–ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಇಂಡಕ್ಷನ್ ಕುಕ್‌ಟಾಪ್‌ಗಳು ಮತ್ತು ಇತರ ವಿದ್ಯುತ್ ಅಡುಗೆ ಉಪಕರಣಗಳ ಮಾರಾಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ಎಲೆಕ್ಟ್ರಿಕ್ ಕುಕ್‌ಟಾಪ್‌, ಇನ್‌ಫ್ರಾರೆಡ್ ಸ್ಟೌವ್ ಹಾಗೂ ಅವಕ್ಕೆ ಹೊಂದುವ ಪಾತ್ರೆಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ತಮ್ಮ ಮನೆಯ ಹತ್ತಿರದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಒಂದೇ ದಿನಕ್ಕೆ ಸುಮಾರು 70+ ಇಂಡಕ್ಷನ್ ಕುಕ್ಕರ್ ಮಾರಾಟವಾಗಿವೆ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ‌. ನಿನ್ನೆಯಿಂದ ಅಂಗಡಿಯಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಅಂಗಡಿಗೆ ಬರುವ ಸುಮಾರು 80 ಶೇಕಡಾ ಗ್ರಾಹಕರು ಇಂಡಕ್ಷನ್ ಕುಕ್‌ಟಾಪ್‌ಗಳು ಅಥವಾ ರೈಸ್ ಕುಕ್ಕರ್‌ಗಳಂತಹ ವಿದ್ಯುತ್ ಅಡುಗೆ ಉಪಕರಣಗಳನ್ನು ಖರೀದಿಸಲು ಬರುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ಎಲ್‌ಪಿಜಿ ಪೂರೈಕೆ ಕೊರತೆ ಮುಂದುವರಿದರೆ ವಿದ್ಯುತ್ ಅಡುಗೆ ಉಪಕರಣಗಳ ಬೇಡಿಕೆ ಇನ್ನಷ್ಟು […] - [ಬೆಂಗಳೂರು ಉಪನಗರ ರೈಲು ಯೋಜನೆ ಶೀಘ್ರ ಪೂರ್ಣಗೊಳಿಸಲು ನಗರ ಕಾರ್ಯಕರ್ತರಿಂದ ಒತ್ತಾಯ](https://bisiloorapost.com/city-activists-push-for-a-faster-deadline-for-the-airport-suburban-rail/): ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣ ಮಾರ್ಗಕ್ಕಾಗಿ ಮಾಡಿರುವ ಉಪನಗರ ರೈಲು ಯೋಜನೆಗೆ ನಿಗದಿಪಡಿಸಿರುವ 2030ರ ಮಾರ್ಚ್ ಗಡುವನ್ನು 2028ಕ್ಕೆ ಇಳಿಸಬೇಕು ಹಾಗೂ ಕಾಮಗಾರಿಗೆ ಆದ್ಯತೆ ನೀಡಿ ಶೀಘ್ರ ಪೂರ್ಣಗೊಳಿಸುವಂತೆ ಪರಿಸರವಾದಿಗಳು, ನಾಗರಿಕ ಹಕ್ಕು ಕಾರ್ಯಕರ್ತರು, ಸಂಚಾರ ತಜ್ಞರು ಸೇರಿದಂತೆ ಸುಮಾರು 40 ಮಂದಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ–ರೈಡ್)ಗೆ ಮನವಿ ಮಾಡಿದ್ದಾರೆ. ಮಾರ್ಚ್ 12ರಂದು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ, ವಿಮಾನ ನಿಲ್ದಾಣ ಸಂಪರ್ಕ ಹೊಂದಿರುವ ಕಾರಿಡಾರ್–1 ಕಾಮಗಾರಿಯನ್ನು ವೇಗಗೊಳಿಸಿ ಗಡುವನ್ನು 2028ರ ಮಾರ್ಚ್‌ಗೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತ ವಾಸಿಸುವ ಲಕ್ಷಾಂತರ ಜನರ ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಈ ಯೋಜನೆಯನ್ನು ತ್ವರಿತಗೊಳಿಸುವ ಅಗತ್ಯವಿದೆ ಎಂದು ನಗರ ಕಾರ್ಯಕರ್ತರು ತಿಳಿಸಿದ್ದಾರೆ. “ಅತ್ಯಂತ ಅಗತ್ಯವಾದ ಸಾರ್ವಜನಿಕ ಸಾರಿಗೆ ಯೋಜನೆಗೆ ವಿಳಂಬಕ್ಕೆ ಕಾರಣಗಳನ್ನು ನೀಡುವುದಕ್ಕಿಂತ ತಜ್ಞರಿಂದ ಸೂಕ್ತ ಕ್ರಮಗಳನ್ನು ನಿರೀಕ್ಷಿಸುತ್ತೇವೆ. ಎಲ್ಲಾ ಯೋಜನೆ ಮತ್ತು ಮಾರ್ಗ ಅನುಮತಿಗಳು […] - [ಪ್ರಧಾನಿ ಮೋದಿ ನಾಯಕತ್ವಕ್ಕೆ ಮೋಹನ್ ಲಾಲ್ ಪ್ರಶಂಸೆ](https://bisiloorapost.com/%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf-%e0%b2%ae%e0%b3%8b%e0%b2%a6%e0%b2%bf-%e0%b2%a8%e0%b2%be%e0%b2%af%e0%b2%95%e0%b2%a4%e0%b3%8d%e0%b2%b5%e0%b2%95%e0%b3%8d%e0%b2%95%e0%b3%86/): ಕೊಚ್ಚಿ, ಮಾ.13: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಕಲಾವಿದರು ಮತ್ತು ಸೃಜನಶೀಲರನ್ನು ಗೌರವಿಸುವ ನಿಜವಾದ ಮುತ್ಸದ್ದಿ ಹಾಗೂ ದೂರದೃಷ್ಟಿಯುಳ್ಳ ನಾಯಕರು ಎಂದು ಅವರು ಮೋದಿ ಅವರನ್ನು ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರದ ನಾಗರಿಕ ಸಂವಹನ ವೇದಿಕೆ ‘ಮೈಗೌಇಂಡಿಯಾ’ ವತಿಯಿಂದ ನಡೆಸುವ ಜಿಡಿಪಿ@ಮೈಗೌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋಹನ್ ಲಾಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿದ ಅವರು, ಪ್ರತಿ ಭೇಟಿಯಲ್ಲೂ ನಿಜವಾದ ಮುತ್ಸದ್ದಿ, ದೃಢ ಹಾಗೂ ದೂರದೃಷ್ಟಿಯುಳ್ಳ ನಾಯಕನನ್ನು ಭೇಟಿಯಾದ ಅನುಭವ ತಮಗಾಗಿದೆ ಎಂದು ತಿಳಿಸಿದ್ದಾರೆ. “ನಮ್ಮ ರಾಷ್ಟ್ರದ ಬಗ್ಗೆ ಅವರಿಗಿರುವ ಸಮರ್ಪಣಾ ಮನೋಭಾವ ನಿಜಕ್ಕೂ ಸ್ಫೂರ್ತಿದಾಯಕ. ಅವರ ಶಕ್ತಿ ಮತ್ತು ಸ್ಪಷ್ಟ ದೂರದೃಷ್ಟಿಯನ್ನು ನಾನು ಯಾವಾಗಲೂ ಪ್ರಶಂಸಿಸುತ್ತೇನೆ. ಭಾರತವನ್ನು ಮುನ್ನಡೆಸುವಲ್ಲಿ ಅವರ ವಿವೇಕ ಮತ್ತು ಸೌಜನ್ಯ ಶ್ಲಾಘನೀಯ,” ಎಂದು ಮೋಹನ್ ಲಾಲ್ ಹೇಳಿದ್ದಾರೆ. ಬಿಕ್ಕಟ್ಟು ಎದುರಾದಾಗ […] - [ಗುಳೇದಗುಡ್ಡ: ಮಾ. 16ರಂದು ʼವಚನ ಸಾಹಿತ್ಯದಲ್ಲಿ ಕಾಯಕ ತತ್ವʼ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ](https://bisiloorapost.com/guledagudda-a-state-level-seminar-on-the-principle-of-kayaka-work-in-vachana-literature-will-be-held-on-march-16/): ಗುಳೇದಗುಡ್ಡ ಮಾ.12: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಳೇದಗುಡ್ಡ, ಆಂತರಿಕ ಭರವಸೆ ಕೋಶ (ಐಕ್ಯೂಎಸಿ) ಮತ್ತು ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಗುಳೇದಗುಡ್ಡ ಇವರ ಸಂಯುಕ್ತ ಆಶ್ರಯದಲ್ಲಿ ʼವಚನ ಸಾಹಿತ್ಯದಲ್ಲಿ ಕಾಯಕ ತತ್ವʼ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಾ.16 ರಂದು ಗುಳೇದಗುಡ್ಡ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು  ಭೀಮಸೇನ ಬಿ.ಚಿಮ್ಮನಕಟ್ಟಿ, ಶಾಸಕರು, ಬಾದಾಮಿ ಮತ ಕ್ಷೇತ್ರ ಹಾಗೂ ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ, ಸ.ಪ್ರ.ದ. ಕಾಲೇಜು ಗುಳೇದಗುಡ್ಡ ಅವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೇವಣಸಿದ್ದಪ್ಪ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಳೇದಗುಡ್ಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಅರುಣಕುಮಾರ ಗಾಳಿ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವನಗರ ಬಾಗಲಕೋಟೆ ಹಾಗೂ ಡಾ. ಸಂಗಮೇಶ ಕಲ್ಯಾಣಿ, ಗೌರವಾಧ್ಯಕ್ಷರು, ರಾಷ್ಟ್ರೀಯ ಸಂಶೋಧನಾ ವೇದಿಕೆ ಗುಳೇದಗುಡ್ಡ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ.ಎಂ. […] - [ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!](https://bisiloorapost.com/rising-heat-intensity-in-the-state-yellow-alert-issued-for-coastal-districts/): ಮಂಗಳೂರು, ಮಾ.12: ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ. ರಾಜ್ಯದ ಹಲವಾರು ಜಿಲ್ಲೆಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕರಾವಳಿ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ಉಷ್ಣತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಮಾರ್ಚ್ 11ರಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಗೆ ಐಎಂಡಿ ಬಿಡುಗಡೆ ಮಾಡಿದ ಅಂಕಿ–ಅಂಶಗಳ ಪ್ರಕಾರ, ಕರ್ನಾಟಕದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 33°C ರಿಂದ 37°C ನಡುವಿನಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 37°C ತಾಪಮಾನ ದಾಖಲಾಗಿದ್ದು, ಉಡುಪಿಯಲ್ಲಿ 35.8°C ತಾಪಮಾನ ದಾಖಲಾಗಿದೆ. ತುಲನಾತ್ಮಕವಾಗಿ […] - [ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ; ಗ್ರಾಹಕರಿಗೆ ಸಂತಸ, ಕೋಳಿ ಸಾಕಾಣಿಕೆದಾರರಲ್ಲಿ ಆತಂಕ!](https://bisiloorapost.com/sharp-drop-in-egg-prices-joy-for-consumers-concern-among-poultry-farmers/): ಬೆಂಗಳೂರು, ಮಾ.12: ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಮೊಟ್ಟೆ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಇದು ಸಂತಸದ ಸಂಗತಿಯಾಗಿದ್ದರೆ ಕೋಳಿ ಸಾಕಾಣಿಕೆದಾರರಲ್ಲಿ ಆತಂಕ ಮೂಡಿಸಿದೆ. ಹಿಂದೆ ಒಂದು ಮೊಟ್ಟೆಯ ಬೆಲೆ ರೂ.7.06 ಇದ್ದು, ಇದೀಗ ಅದು ರೂ.4.60ಕ್ಕೆ ಇಳಿದಿದೆ. ರಫ್ತು ವ್ಯತ್ಯಯ, ಹಬ್ಬದ ಕಾಲದ ಬೇಡಿಕೆ ಕುಸಿತ ಹಾಗೂ ಬೇಸಿಗೆ ಪರಿಣಾಮದಿಂದ ಮೊಟ್ಟೆ ದರ ಇಳಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ. ಕಳೆದ ಸುಮಾರು 15 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ತಿಳಿಸಿದೆ. ಕರ್ನಾಟಕದಲ್ಲಿ ಪ್ರತಿದಿನ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಈ ಮೊಟ್ಟೆಗಳ ಒಂದು ಭಾಗವನ್ನು ತಮಿಳುನಾಡಿನ ನಾಮಕ್ಕಲ್ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ನಾಮಕ್ಕಲ್‌ನಿಂದ ದಿನಕ್ಕೆ ಸುಮಾರು 70 ಲಕ್ಷದಿಂದ 1 ಕೋಟಿ ಮೊಟ್ಟೆಗಳು ಗಲ್ಫ್ ದೇಶಗಳಿಗೆ ಸಾಗುತ್ತವೆ. ಆದರೆ, ಯುದ್ಧ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ರಫ್ತು […] - [ಜಮ್ಮು: ಮಾಜಿ‌ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ; ಕೂದಲೆಳೆ ಅಂತರದಲ್ಲಿ ಪಾರು!](https://bisiloorapost.com/jammu-former-chief-minister-farooq-abdullah-attacked-with-gunfire-escapes-by-a-whisker/): ಜಮ್ಮು, ಮಾ.12: ಜಮ್ಮುವಿನಲ್ಲಿ ನಡೆದ ವಿವಾಹ ಸಮಾರಂಭದ ವೇಳೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಆದರೆ ಭದ್ರತಾ ಸಿಬ್ಬಂದಿಯ ತ್ವರಿತ ಕ್ರಮದಿಂದ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ವಕೀಲರೊಬ್ಬರ ವಿವಾಹ ಸಮಾರಂಭದಲ್ಲಿ ಫಾರೂಕ್ ಅಬ್ದುಲ್ಲಾ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ. ಕಮಲ್ ಸಿಂಗ್ ಜಮ್ವಾಲ್ ಎಂಬಾತ ಗುಂಡಿನ ದಾಳಿ ನಡೆಸಲು ಯತ್ನಿಸಿದರೆಂದು ತಿಳಿದುಬಂದಿದ್ದು, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹಾಗೂ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಒಮರ್ ಅಬ್ದುಲ್ಲಾ, “ದೇವರು ಕರುಣಾಮಯಿ. ನನ್ನ ತಂದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ದಾಳಿ ನಡೆಸಿದ್ದೇಕೆ ಮತ್ತು ಯಾರು ಎಂಬ ಬಗ್ಗೆ […] - [ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ಸ್ಫೋಟ; ಭಾರತೀಯ ಸೇರಿ ನಾಲ್ಕು ಮಂದಿಗೆ ಗಾಯ!](https://bisiloorapost.com/drone-explosion-near-dubai-airport-four-injured-including-an-indian/): ದುಬೈ, ಮಾ.11: ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬುಧವಾರ ಸ್ಫೋಟ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆದರೂ ವಿಮಾನ ಸಂಚಾರ ಎಂದಿನಂತೆ ಮುಂದುವರೆದಿದೆ ಎಂದು ದುಬೈ ಸರ್ಕಾರ ತಿಳಿಸಿದೆ. ವಿಮಾನ ನಿಲ್ದಾಣದ ಸಮೀಪ ಎರಡು ಡ್ರೋನ್‌ಗಳು ಬಿದ್ದಿದ್ದು, ಘಟನೆಯಲ್ಲಿ ಘಾನಾದ ಇಬ್ಬರು ಪ್ರಜೆಗಳು ಹಾಗೂ ಒಬ್ಬ ಬಾಂಗ್ಲಾದೇಶಿ ಪ್ರಜೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ಭಾರತೀಯ ಪ್ರಜೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಘಟನೆ ನಡೆದಿದ್ದರೂ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಮತ್ತು ಕಾರ್ಯಾಚರಣೆಗಳು ಸಾಮಾನ್ಯ ರೀತಿಯಲ್ಲೇ ಮುಂದುವರಿದಿವೆ ಎಂದು ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೇ ತಮ್ಮ ಪ್ರಮುಖ ಗುರಿಗಳಾಗಿವೆ ಎಂದು ಇರಾನಿನ ಜಂಟಿ ಮಿಲಿಟರಿ ಕಮಾಂಡ್ ಬುಧವಾರ ಹೇಳಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಟೆಹ್ರಾನ್‌ನಲ್ಲಿರುವ ಬ್ಯಾಂಕಿನ ಸಿಬ್ಬಂದಿ ಸಾವನ್ನಪ್ಪಿದ್ದಾರೆ […] - [ಎಲ್ ಪಿಜಿ ಪೂರೈಕೆ ಕೊರತೆ, ಸಂಕಷ್ಟದಲ್ಲಿ ಹೋಟೆಲ್ ಉದ್ಯಮ!](https://bisiloorapost.com/lpg-supply-shortage-hotel-industry-in-crisis/): ಬೆಂಗಳೂರು, ಮಾ.11: ಪಶ್ಚಿಮ ಏಷ್ಯಾದಲ್ಲಿ ಇರಾನ್–ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವ ಪರಿಣಾಮ ಪೆಟ್ರೋಲ್ ಹಾಗೂ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಎಲ್‌ಪಿಜಿ ಪೂರೈಕೆ ವ್ಯತ್ಯಯದಿಂದ ಅನೇಕ ಹೋಟೆಲ್‌ಗಳು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೇ ಸ್ಥಿತಿ ಮುಂದುವರೆದರೆ ನಗರದಾದ್ಯಂತ ಹೋಟೆಲ್‌ಗಳನ್ನು ಬಂದ್‌ ಮಾಡುವ ಕುರಿತು ಬೆಂಗಳೂರು ಹೋಟೆಲ್‌ಗಳ ಸಂಘ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಸಿಲಿಂಡರ್ ಕೊರತೆ ಗಂಭೀರ ಕಳವಳಕಾರಿಯಾಗಿದೆ. ಈ ಸಮಸ್ಯೆಯನ್ನು ಸಂಸತ್ತಿನಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಕೊರತೆ ಸಂಭವನೀಯತೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ […] - [ಮಾರ್ಚ್ 29ರಂದು ಬೆಂಗಳೂರಿನಲ್ಲಿ ‘ಬೀಯಿಂಗ್ ಲೈಟ್’ ಕಾರ್ಯಕ್ರಮ](https://bisiloorapost.com/being-light-program-to-be-held-in-bengaluru-on-march-29/): ಬೆಂಗಳೂರು, ಮಾ.11: ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕಿ ಬಿಕೆ ಶಿವಾನಿ ಅವರ ನೇತೃತ್ವದಲ್ಲಿ ಬ್ರಹ್ಮಕುಮಾರಿ ಸಮಾಜವು ಮಾರ್ಚ್ 29ರಂದು “ಬೀಯಿಂಗ್ ಲೈಟ್… ಆಲಿಸಿ, ಅನುಭವಿಸಿ, ಪ್ರಕಾಶಮಾನರಾಗಿ” ಎಂಬ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ನಗರದ ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್ (ಗೇಟ್‌ 9)ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಆತ್ಮಾವಲೋಕನ ಮತ್ತು ಸ್ಫೂರ್ತಿಗೆ ವೇದಿಕೆಯಾಗಲಿದ್ದು, ಕುಟುಂಬ ಸಮೇತವಾಗಿ ಪಾಲ್ಗೊಳ್ಳಬಹುದಾದ ವಿಶಿಷ್ಟ ಅನುಭವವನ್ನು ನೀಡಲಿದೆ. ಇಂದಿನ ವೇಗದ ಬದುಕಿನಲ್ಲಿ ಒತ್ತಡ, ಅತಿಯಾದ ಮಾಹಿತಿಯ ಹರಿವು ಹಾಗೂ ಮಾನಸಿಕ ಆಯಾಸ ಸಾಮಾನ್ಯವಾಗಿರುವ ಹಿನ್ನೆಲೆ, ಆಂತರಿಕ ಶಾಂತಿ ಮತ್ತು ಸ್ಪಷ್ಟತೆಯನ್ನು ನೀಡುವ ಕಾರ್ಯಕ್ರಮಗಳ ಅಗತ್ಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗವಹಿಸುವವರಿಗೆ ದೈನಂದಿನ ಜಂಜಾಟಗಳಿಂದ ಸ್ವಲ್ಪ ವಿರಾಮ ನೀಡಿ, ತಮ್ಮೊಳಗಿನ ಶಕ್ತಿಯನ್ನು ಮರುಕಂಡುಕೊಳ್ಳಲು ಹಾಗೂ ಆತ್ಮಸಂಪರ್ಕ ಸಾಧಿಸಲು ಈ ಕಾರ್ಯಕ್ರಮ ಆಹ್ವಾನ ನೀಡುತ್ತಿದೆ. ಈ ಕುರಿತು ಮಾತನಾಡಿದ ಕೋರಮಂಗಲ ಬ್ರಹ್ಮಕುಮಾರಿ ಸಮಾಜದ ಬಿಕೆ ಸಿಸ್ಟರ್ ಗೀತಾ, “ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು […] - [ನಾಳೆಯಿಂದ ಸರಕಾರಿ ವೈದ್ಯರ ರಾಜ್ಯದಾದ್ಯಂತ ಮುಷ್ಕರ ಎಚ್ಚರಿಕೆ; ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ: ಸರಕಾರದ ಭರವಸೆ!](https://bisiloorapost.com/statewide-strike-warning-by-government-doctors-from-tomorrow-government-assures-swift-action-to-resolve-issues/): ಬೆಂಗಳೂರು, ಮಾ.10: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ಕೆಜಿಎಂಒಎ) ಹಾಗೂ ಆರೋಗ್ಯ ಇಲಾಖೆಯ ಇತರ ನೌಕರರ ಸಂಘಗಳು ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ರಾಜ್ಯಾದ್ಯಂತ ಹಂತ ಹಂತವಾಗಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮಾರ್ಚ್ 11ರಿಂದ ಎಲ್ಲಾ ಹೊರರೋಗಿ ವಿಭಾಗ (ಒಪಿಡಿ) ಸೇವೆಗಳನ್ನು ಬಂದ್ ಮಾಡುವುದಾಗಿ ವೈದ್ಯರು ಘೋಷಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 16ರಿಂದ ತುರ್ತು ಸೇವೆಗಳು ಸೇರಿದಂತೆ ಎಲ್ಲಾ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ನಾವು ಈಗಾಗಲೇ ಎರಡು ಬಾರಿ ಚರ್ಚೆ ನಡೆಸಿದ್ದೇವೆ. ನಿನ್ನೆ ನಮ್ಮ ಆಯುಕ್ತರ ಮೂಲಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅವರಿಗೆ ತಿಳಿಸಲಾಗಿದೆ” ಎಂದು ಹೇಳಿದರು. ವೈದ್ಯರು ಎತ್ತಿರುವ ಬೇಡಿಕೆಗಳಲ್ಲಿ ಹಲವು […] - [ಹಂಸ ಸಮ್ಮಾನ್–2026 ಪ್ರಶಸ್ತಿಗೆ ಬಿಜ್ಜವರ ಎಚ್. ಲೋಕೇಶ್ ಆಯ್ಕೆ](https://bisiloorapost.com/bijjwara-h-lokesh-selected-for-the-hamsa-samman2026-award/): ಬೆಂಗಳೂರು, ಮಾ.10: ನಾಡಿನ ಸಾಂಸ್ಕೃತಿಕ ಚಳುವಳಿಯ ಪ್ರಮುಖ ಸಂಸ್ಥೆಯಾದ ಹಂಸಜ್ಯೋತಿ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಹಂಸ ಸಮ್ಮಾನ್–2026’ ಪ್ರಶಸ್ತಿಗೆ ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಬಿಜ್ಜವರ ಎಚ್. ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 16, 2026ರಂದು ಸಂಜೆ 4.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆಯಲ್ಲಿ ನಡೆಯಲಿದೆ. ಹಂಸಜ್ಯೋತಿ ಟ್ರಸ್ಟ್‌ನ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ ‘ಹಂಸ ಸಾಂಸ್ಕೃತಿಕ ಸಂಭ್ರಮ’ ಹೆಸರಿನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕನ್ನಡದ ಹಳೆಯ ಚಲನಚಿತ್ರ ಗೀತೆಗಳ ಗಾಯನ, ಸಾಮೂಹಿಕ ಶಾಸ್ತ್ರೀಯ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ. ಇದೇ ವೇಳೆ ‘ಹಂಸ ಸಮ್ಮಾನ್–2026’ ಪ್ರಶಸ್ತಿಯನ್ನು ಬಿಜ್ಜವರ ಎಚ್. ಲೋಕೇಶ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡುತ್ತಿದೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು […] - [ಮಾಧ್ಯಮಗಳು ಶೋಷಿತ ಸಮುದಾಯದ ಧ್ವನಿಯಾಗಲಿ: ಎಚ್. ವಿಶ್ವನಾಥ್](https://bisiloorapost.com/let-the-media-be-the-voice-of-the-oppressed-community-h-vishwanath/): ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಬಿಡುಗಡೆ; ‘ದಿ ಫೈಲ್’ ಐದನೇ ವರ್ಷದ ಸಂಭ್ರಮ ಬೆಂಗಳೂರು, ಮಾ.10: ಮಾಧ್ಯಮಗಳು ಶೋಷಿತ ಸಮುದಾಯದ ಧ್ವನಿಯಾಗಬೇಕು ಹಾಗೂ ಆಡಳಿತದಲ್ಲಿ ನಡೆಯುವ ಅಕ್ರಮ–ಭ್ರಷ್ಟಾಚಾರಗಳನ್ನು ನಿರ್ಭೀತಿಯಾಗಿ ಬಯಲಿಗೆಳೆಯುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು. ನಗರದ ಹರೇ ಕೃಷ್ಣ ರಸ್ತೆ, ಶಿವಾನಂದ ಸರ್ಕಲ್ ಸಮೀಪದಲ್ಲಿರುವ ‘ದಿ ಫೈಲ್’ ಕಚೇರಿಯಲ್ಲಿ ಮಾರ್ಚ್ 9ರಂದು ಸಂಜೆ 6.30ಕ್ಕೆ ಪಾರದರ್ಶಕ ಮೀಡಿಯಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಬ್ಬ ನಾಯಕ ಬೆಳೆಯಲು ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿರುತ್ತದೆ, ಜನಾದೇಶಕ್ಕೆ ಪೂರಕವಾಗಿ ಕೆಲಸ ಮಾಡುವ ಶಕ್ತಿ ಮಾಧ್ಯಮಗಳಿಗೆ ಇದೆ. ಸರ್ಕಾರವನ್ನು ಕಟ್ಟಿದ ಮಾಧ್ಯಮಗಳೇ ಕೆಲ ಸಂದರ್ಭಗಳಲ್ಲಿ ಅದನ್ನು ಉರುಳಿಸಿದ ಉದಾಹರಣೆಗಳೂ ಇವೆ. ಹೀಗಾಗಿ ಮಾಧ್ಯಮಗಳು ಶಕ್ತಿಶಾಲಿ. ನಿರ್ಭೀತ ತನಿಖಾ ವರದಿಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ‘ದಿ ಫೈಲ್’ ಮಾಡುತ್ತಿದೆ,” ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸರ್ಕಾರದ ನೀತಿಗಳ ಬಗ್ಗೆ […] - [ಕೇರಳಕ್ಕೂ ಕಾಲಿಟ್ಟ ಗ್ಯಾರಂಟಿ ಯೋಜನೆ; ಪಂಚ ಗ್ಯಾರಂಟಿ ಭರವಸೆ ಘೋಷಿಸಿದ ಕಾಂಗ್ರೆಸ್!](https://bisiloorapost.com/guarantee-schemes-reach-kerala-congress-announces-five-guarantee-promises/): ತಿರುವನಂತಪುರಂ, ಮಾ.09: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಇದೀಗ ನೆರೆಯ ಕೇರಳದಲ್ಲೂ ಅದೇ ತಂತ್ರವನ್ನು ಪ್ರಯೋಗಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿ ಅಧಿಕಾರಕ್ಕೆ ಬಂದರೆ ಮಹಿಳೆಯರು, ವಿದ್ಯಾರ್ಥಿನಿಯರು, ವೃದ್ಧರು ಹಾಗೂ ಸಣ್ಣ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಭರವಸೆ ನೀಡಿದೆ. ಕೇರಳದಲ್ಲಿ ಯುಡಿಎಫ್‌ ಮೈತ್ರಿ ಕೂಟದ ಭಾಗವಾಗಿರುವ ಕಾಂಗ್ರೆಸ್‌ ಈ ಘೋಷಣೆಯನ್ನು ಶನಿವಾರ ತಿರುವನಂತಪುರಂನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾಡಿದೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ, ಗ್ಯಾರಂಟಿ ಯೋಜನೆಗಳ ಮೂಲಕ ಭರ್ಜರಿ ಮತಗಳನ್ನು ಪಡೆದು ಬಹುಮತದಿಂದ ಸರಕಾರ ನಡೆಸಿತ್ತು. ಇದೀಗ ಇದೇ ತಂತ್ರವನ್ನು‌ ಕೇರಳದಲ್ಲಿ ಹೂಡಲು ಚಿಂತನೆ ನಡೆಸಿದೆ. ಏನೇನು ಗ್ಯಾರಂಟಿ? ಈ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ವಿವಿಧ ವರ್ಗದ ಜನರಿಗೆ ನೆರವಾಗುವ ಉದ್ದೇಶ ಹೊಂದಿದ್ದೇವೆ ಎಂದು ಕಾಂಗ್ರೆಸ್‌ […] - [ಸಮಯದ ಬೆಲೆ](https://bisiloorapost.com/article-written-by-ganesh-ramachandra-mandre-13/): ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆಸಾಹಿತಿಗಳು, ಅರಿವು ಬೋಧಿ ಪ್ರಕಾಶನ ಒಂದು ಚಿಕ್ಕ ಹಳ್ಳಿಯಲ್ಲಿ ಚಿನ್ನು ಎಂಬ ಹುಡುಗ ಇದ್ದ. ಅವನು ತುಂಬಾ ಒಳ್ಳೆಯ ಮನಸ್ಸಿನವನು, ಆದರೆ ಒಂದು ದೊಡ್ಡ ದೋಷ ಇತ್ತು — ಅವನಿಗೆ ಸಮಯಪ್ರಜ್ಞೆ ಇರಲಿಲ್ಲ. ಎಲ್ಲ ಕೆಲಸವನ್ನೂ “ನಾಳೆ ಮಾಡ್ತೀನಿ” ಎಂದು ಮುಂದೂಡುತ್ತಿದ್ದ. ಒಂದು ದಿನ ಅವನ ಗುರು ಅವನಿಗೆ ಹೇಳಿದರು: “ಚಿನ್ನು, ಜೀವನದಲ್ಲಿ ಗೆಲ್ಲಬೇಕು ಅಂದ್ರೆ ಕಾಲದ ಜೊತೆ ಓಡಬೇಕು. ಇಲ್ಲದಿದ್ದರೆ ಕಾಲ ನಮ್ಮನ್ನು ಬಿಟ್ಟು ಹೋಗುತ್ತದೆ.” ಆದರೂ ಚಿನ್ನು ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಒಮ್ಮೆ ಶಾಲೆಯಲ್ಲಿ ದೊಡ್ಡ ಸ್ಪರ್ಧೆ ನಡೆಯಿತು. ಕಥೆ ಬರೆಯುವ ಸ್ಪರ್ಧೆ. ಚಿನ್ನು ಕೂಡ ಭಾಗವಹಿಸಲು ನಿರ್ಧರಿಸಿದ. ಆದರೆ ಅಭ್ಯಾಸ ಮಾಡುವ ಬದಲು ಆಟ ಆಡುತ್ತಾ ಸಮಯ ಕಳೆಯುತ್ತಿದ್ದ. “ಇನ್ನೂ ಸಮಯ ಇದೆ” ಎಂದುಕೊಂಡ. ಸ್ಪರ್ಧೆಯ ದಿನ ಬಂದಾಗ, ಚಿನ್ನು ಕಥೆ ಬರೆಯಲು ಕುಳಿತ. ಆದರೆ ಅವನಿಗೆ ಸರಿಯಾಗಿ ಏನೂ ಬರಲಿಲ್ಲ. ಅವನ ಸ್ನೇಹಿತರು ಎಲ್ಲರೂ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರು. ಅವರು […] - [ಸಾಮಾನ್ಯ ಮಹಿಳೆಯರಿಗೆ ಅವಕಾಶ ನೀಡುವುದು ಕೆಆರ್‌ಎಸ್ ಪಕ್ಷದ ಆದ್ಯತೆ: ರವಿ ಕೃಷ್ಣಾರೆಡ್ಡಿ](https://bisiloorapost.com/giving-opportunities-to-ordinary-women-is-the-priority-of-the-krs-party-ravi-krishnareddy/): ಬೆಂಗಳೂರು, ಮಾ.09: ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿ ಸ್ಥಾನಮಾನಗಳು ಹಾಗೂ ಮಾನ್ಯತೆಗಳು ರಾಜಕಾರಣಿಗಳ ಕುಟುಂಬದ ಸದಸ್ಯರು, ಸಿನಿಮಾ ನಟಿಯರು ಅಥವಾ ಜನಪ್ರಿಯ ವ್ಯಕ್ತಿಗಳಿಗೆ ಮಾತ್ರ ಸಿಗುತ್ತವೆ. ಆದರೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು ಸಾಮಾನ್ಯ ಜನರು ಹಾಗೂ ಹೋರಾಟ ಮನೋಭಾವದ ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು. ಯಲಹಂಕ ನ್ಯೂಟೌನ್‌ನ ಧ್ವಜಾರೋಹಣ ಮೈದಾನದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಮಾರುವ ಮಹದೇವಿ ಹಾಗೂ ಎಳನೀರು ಮಾರುವ ಅಂಜಲಿ ಅವರಂತಹ ಸಾಮಾನ್ಯ ಹಿನ್ನೆಲೆಯ ಮಹಿಳೆಯರಿಗೂ ಪಕ್ಷದಲ್ಲಿ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಹೋರಾಟ ಮನೋಭಾವದ ಮಹಿಳೆಯರಿಗೆ ವೇದಿಕೆ ಒದಗಿಸುವುದು ಕೆಆರ್‌ಎಸ್ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಮಾಜಿ ಶಾಸಕಿ ಮೋಟಮ್ಮ ಅವರ ಪುತ್ರಿ ಕಾಂಗ್ರೆಸ್ ಪಕ್ಷದಲ್ಲಿ ಅಂದವಾಗಿ ಶೃಂಗಾರಗೊಂಡು ಬಂದ ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂಬ ಹೇಳಿಕೆ ನೀಡಿರುವುದು […] - [ಗ್ರೇಟರ್ ಬೆಂಗಳೂರು: 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ](https://bisiloorapost.com/greater-bengaluru-final-reservation-list-for-369-wards-announced/): ಬೆಂಗಳೂರು, ಮಾ.09: ನಗರದ ಐದು ನಗರ ಪಾಲಿಕೆಗಳನ್ನು ಒಳಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 369 ವಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಶನಿವಾರ ರಾತ್ರಿ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ. ಈ ಹಿಂದೆ ಪ್ರಕಟಿಸಲಾಗಿದ್ದ ಕರಡು ಮೀಸಲಾತಿ ಪಟ್ಟಿಗೆ ಬಂದಿದ್ದ ನೂರಾರು ಆಕ್ಷೇಪಣೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಒಟ್ಟು 369 ವಾರ್ಡ್‌ಗಳ ಪೈಕಿ 176 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕರಡು ಪಟ್ಟಿಯಲ್ಲಿ ಕಂಡುಬಂದಿದ್ದ ಅಸಮತೋಲನವನ್ನು ಸರಿಪಡಿಸಿ ಮೀಸಲಾತಿಯನ್ನು ಸಮರ್ಪಕವಾಗಿ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮದಿಂದ ಬಹುಕಾಲದಿಂದ ಮುಂದೂಡಿಕೆಯಾಗಿದ್ದ ನಗರ ಪಾಲಿಕೆ ಚುನಾವಣೆ ನಡೆಸುವ ಪ್ರಕ್ರಿಯೆಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಮುಂದೆ ಜೂನ್‌ 30ರೊಳಗೆ ಮಹಾನಗರ ಪಾಲಿಕೆ ಚುನಾವಣೆಗಳನ್ನು ನಡೆಸುವುದಾಗಿ ಭರವಸೆ ನೀಡಿತ್ತು. ಅಂತಿಮ ಪಟ್ಟಿಯ ಪ್ರಕಾರ 198 ವಾರ್ಡ್‌ಗಳು ಸಾಮಾನ್ಯ […] - [ಟಿ20 ವಿಶ್ವಕಪ್ ಭಾರತದ ಮಡಿಲಿಗೆ; ಮೂರನೇ ಭಾರಿ ವಿಶ್ವ ಚಾಂಪಿಯನ್‌!](https://bisiloorapost.com/the-t20-world-cup-in-indias-lap-world-champion-for-the-third-time/): ಅಹಮದಾಬಾದ್, ಮಾ.08: ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಮೂರು ಸಲ ಟಿ20 ವಿಶ್ವಕಪ್ ತನ್ನದಾಗಿಸಿ ಕೊಂಡ ಮೊದಲ ದೇಶ ಭಾರತ ಎಂಬ ದಾಖಲೆ ಬರೆದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮಗ್ರ ಪ್ರದರ್ಶನ ನೀಡಿದ ಭಾರತ ತಂಡ ಫೈನಲ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿರ್ದಿಷ್ಟ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳ ಭಾರೀ ಮೊತ್ತ ಕಲೆಹಾಕಿತು. ತಂಡದ ಪರ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಜೊತೆಗೆ ಇಶಾನ್ ಕಿಶನ್ 54 ರನ್ ಹಾಗೂ ಅಭಿಷೇಕ್ ಶರ್ಮಾ 52 ರನ್ ಗಳಿಸಿ ತಂಡದ ಮೊತ್ತವನ್ನು ಗಟ್ಟಿಗೊಳಿಸಿದರು. 256 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ […] - [ಸಿಲಿಂಡರ್ ದರ ಮತ್ತೆ ಏರಿಕೆ; ಗೃಹ ಮತ್ತು ವಾಣಿಜ್ಯ ಬಳಕೆದಾರರಿಗೆ ಹೊರೆ!](https://bisiloorapost.com/cylinder-prices-rise-again-burden-on-domestic-and-commercial-consumers/): ಬೆಂಗಳೂರು, ಮಾ.07: ಗೃಹ ಬಳಕೆಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಂದು ಮಾರ್ಚ್ 7ರಿಂದ ಹೆಚ್ಚಿಸಲಾಗಿದೆ. 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ದೇಶಾದ್ಯಂತ ₹60 ಹೆಚ್ಚಳವಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಭಾರವಾಗಲಿದೆ. ಇದರ ಜೊತೆಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯೂ ₹115 ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಹೋಟೆಲ್‌, ರೆಸ್ಟೋರೆಂಟ್‌ಗಳು ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹853ರಿಂದ ₹913ಕ್ಕೆ ಏರಿಕೆಯಾಗಿದೆ. ಮುಂಬೈಯಲ್ಲಿ ₹852.50ರಿಂದ ₹912.50ಕ್ಕೆ, ಕೊಲ್ಕತ್ತಾದಲ್ಲಿ ₹879ರಿಂದ ₹930ಕ್ಕೆ ಹಾಗೂ ಚೆನ್ನೈಯಲ್ಲಿ ₹868.50ರಿಂದ ₹928.50ಕ್ಕೆ ಹೆಚ್ಚಳವಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಇದೇ ವೇಳೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯೂ ಏರಿಕೆಯಾಗಿದೆ. ದೆಹಲಿಯಲ್ಲಿ ಇದರ ಬೆಲೆ ₹1768.50ರಿಂದ ₹1883ಕ್ಕೆ, ಮುಂಬೈಯಲ್ಲಿ ₹1720.50ರಿಂದ ₹1835ಕ್ಕೆ, ಕೊಲ್ಕತ್ತಾದಲ್ಲಿ ₹1875.50ರಿಂದ ₹1990ಕ್ಕೆ ಹಾಗೂ ಚೆನ್ನೈಯಲ್ಲಿ […] - [5ನೇ ವರ್ಷದ ಸಂಭ್ರಮದಲ್ಲಿ ‘ದಿ ಫೈಲ್’: ಮಾರ್ಚ್ 9ರಂದು ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಬಿಡುಗಡೆ](https://bisiloorapost.com/the-file-celebrates-its-5th-anniversary-the-book-bhoo-kabalike-siddhanta-to-be-released-on-march-9/): ಬೆಂಗಳೂರು, ಮಾ.07: ಪಾರದರ್ಶಕ ಮೀಡಿಯಾ ಫೌಂಡೇಶನ್ ವತಿಯಿಂದ ‘ಭೂ ಕಬಳಿಕೆ ಸಿದ್ಧಾಂತ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮಾರ್ಚ್‌ 9ರಂದು ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಹರೇ ಕೃಷ್ಣ ರಸ್ತೆ, ಶಿವಾನಂದ ಸರ್ಕಲ್ ಸಮೀಪದಲ್ಲಿರುವ ‘ದಿ ಫೈಲ್’ ಕಚೇರಿಯಲ್ಲಿ ಸಂಜೆ 6:30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಡಾ. ಆರ್. ಪೂರ್ಣಿಮಾ, ಹಿರಿಯ ಪತ್ರಕರ್ತರು ಮತ್ತು ಟಿ.ಕೆ. ತ್ಯಾಗರಾಜ್, ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಾರದರ್ಶಕ ಮೀಡಿಯಾ ಫೌಂಡೇಶನ್ ನ ನಿರ್ದೇಶಕರಾದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಹಾಗೂ ‘ ದಿ ಫೈಲ್’ ನ ಜಿ. ಮಹಾಂತೇಶ್ ಅವರ ಗೌರವ ಉಪಸ್ಥಿತಿ ಇರಲಿದೆ. ‘ದಿ ಫೈಲ್’ ಐದು ವರ್ಷಗಳನ್ನು ಪೂರ್ಣಗೊಳಿಸಿ ಆರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಸ್ಮರಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ‘ದಿ ಫೈಲ್’ ಸರಣಿ ರೂಪದಲ್ಲಿ ಪ್ರಕಟಿಸಿರುವ ವರದಿಗಳ ಸಂಕಲನವೇ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಆಗಿದ್ದು, ಇದನ್ನು […] - [ಮದ್ಯ ಪ್ರಿಯರಿಗೆ ಬಜೆಟ್ ಶಾಕ್; ಆಲ್ಕೋಹಾಲ್ ಅಂಶ ಆಧಾರಿತ ತೆರಿಗೆ ವ್ಯವಸ್ಥೆ ಜಾರಿ!](https://bisiloorapost.com/budget-shock-for-liquor-lovers-tax-system-based-on-alcohol-content-to-be-implemented/): ಬೆಂಗಳೂರು, ಮಾ.06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದ್ದು, ಮದ್ಯ ಪ್ರಿಯರಿಗೆ ಸುಂಕದ ಶಾಕ್ ನೀಡಿದ್ದಾರೆ. ಮದ್ಯದ ಮೇಲೆ ವಿಧಿಸುವ ತೆರಿಗೆ ಸ್ವರೂಪವನ್ನು ಬದಲಾಯಿಸಿ ರಾಜ್ಯದ ರಾಜಸ್ವ ಸಂಗ್ರಹವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಅಂಶವನ್ನು ಆಧಾರವಾಗಿಟ್ಟುಕೊಂಡು ತೆರಿಗೆ ವಿಧಿಸಲಾಗುವುದು. ಎಕ್ಸ್-ಫ್ಯಾಕ್ಟರಿ ದರಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಮದ್ಯದ ಬೆಲೆಯನ್ನು ಒಂದೇ ಬಾರಿ ಏರಿಸುವ ಬದಲು ಹಂತ ಹಂತವಾಗಿ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. 2026–27ರ ವೇಳೆಗೆ ಮದ್ಯದಿಂದ 45,000 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಮದ್ಯಪಾನದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ Alcohol-in-Beverage (AIB) ಆಧಾರಿತ ತೆರಿಗೆ ಪದ್ಧತಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಹೊಸ ಅಬಕಾರಿ ಸುಂಕ ವ್ಯವಸ್ಥೆಯನ್ನು ಏಪ್ರಿಲ್ 2026ರಿಂದ ಜಾರಿಗೆ ತರಲಾಗುವುದು. ಮುಂದಿನ ಮೂರುರಿಂದ ನಾಲ್ಕು ವರ್ಷಗಳಲ್ಲಿ ಎಲ್ಲಾ ಪಾನೀಯಗಳ ಮೇಲೂ ಪ್ರತಿ ಲೀಟರ್‌ನಲ್ಲಿರುವ ಆಲ್ಕೋಹಾಲ್ ಅಂಶವನ್ನು ಆಧಾರವಾಗಿಟ್ಟುಕೊಂಡು ಏಕರೂಪ […] ## Pages - [Advertise with us](https://bisiloorapost.com/advertise-with-us/): Email: bpnews371@gmail.com WhatsApp Us: 9900846371 - [Live](https://bisiloorapost.com/live/) - [Contact Us](https://bisiloorapost.com/contact-us/): Visit us: Royal Circle, Shop No: 112, Kolachalam Compound, Near Danamma Hospital, opp. Old Bus-stand, Ballari, Karnataka 583101 Whatsapp Us: 9900846371 - [About Us](https://bisiloorapost.com/about-us/): BP News Karnataka is a trusted news channel based in Karnataka, delivering the latest breaking news, political updates, current affairs, sports, business, cinema highlights, and in depth analysis of key issues shaping our society. We report stories from Karnataka, India, and across the globe. Founded by Arun Bhupal(M.A Journalism ) Advocate and the visionary behind BP News Karnataka 24/7 Live Cable Channel & Bisiloora Post Kannada Daily News Paper is driven by a passion for truthful and impactful reporting. Our mission is to keep you informed with accurate, timely news while staying committed to “Upholding the Truth” for the benefit […] - [Home](https://bisiloorapost.com/) - [Privacy Policy](https://bisiloorapost.com/privacy-policy/): Last updated: September 05, 2025 This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You. We use Your Personal data to provide and improve the Service. By using the Service, You agree to the collection and use of information in accordance with this Privacy Policy. Interpretation and Definitions Interpretation The words of which the initial letter is capitalized have meanings defined under the following conditions. The following definitions shall have the same meaning regardless of […] [comment]: # (Generated by Hostinger Tools Plugin)