BP News Karnataka BP News Arun Bhupal BP News Ballari Raichur koppala kalburgi | BP News Karnataka BP News Arun Bhupal BP News | ArunBhupal Ballari Raichur koppala kalburgi https://bisiloorapost.com BP News Karnataka BP News Arun Bhupal BP News Ballari Raichur koppala kalburgi | BP News Karnataka BP News Arun Bhupal BP News | ArunBhupal Ballari Raichur koppala kalburgi Sun, 28 Apr 2024 05:27:09 +0000 en-US hourly 1 https://wordpress.org/?v=6.5.3 226901790 ಕರ್ನಾಟಕ ಪತ್ರಕರ್ತರ ಸಂಘದ ಕೊಟ್ಟೂರು ತಾಲೂಕ ಅಧ್ಯಕ್ಷರಾಗಿ ಕೆ ಕೊಟ್ರೇಶ ಆಯ್ಕೆ https://bisiloorapost.com/2024/04/28/kkotresh_selected_as_kotturu_taluka_karnataka_reporters_union_kotturu_ballari/ https://bisiloorapost.com/2024/04/28/kkotresh_selected_as_kotturu_taluka_karnataka_reporters_union_kotturu_ballari/#respond Sun, 28 Apr 2024 05:27:09 +0000 https://bisiloorapost.com/?p=20112 BP NEWS: ಕೊಟ್ಟೂರು: ಏಪ್ರಿಲ್.28:  ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೊರವರ ಕೊಟ್ರೇಶ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಬಿ ಎಚ್ ರಾಜು ,ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಧ್ಯಕ್ಷ ಎಚ್ ವಿಜಯ್ ಕುಮಾರ್, ಉಪಾಧ್ಯಕ್ಷರಾಗಿ ಶಿರಿಬಿ ಕೊಟ್ರೇಶ್,ಉಪಾಧ್ಯಕ್ಷರಾಗಿ ಎಂ ಶ್ರೀನಿವಾಸ್ ,ಪ್ರಧಾನ ಕಾರ್ಯದರ್ಶಿಯಾಗಿ ಡಿ. ಸಿದ್ದಪ್ಪ ,ಖಜಾಂಚಿಯಾಗಿ ತೆಗ್ಗಿನಕೇರಿ ಕೊಟ್ರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಪ್ರಕಾಶ್,ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಜಿ ಶಿವರಾಜ್ ಕನ್ನಡಿಗ, ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಸಂಘದ ಕಾರ್ಯಧ್ಯಕ್ಷ ಸೋಮಶೇಖರಯ್ಯ ಹಿರೇಮಠ್,  ಪ್ರಧಾನ ಕಾರ್ಯದರ್ಶಿ ಕಾಕುಬಾಳು ಪ್ರಕಾಶ್,,ಎಂ ಗೌಸ್ ಇವರ ಸಮ್ಮುಖದಲ್ಲಿ ಮತ್ತು ತಾಲೂಕು ಸದಸ್ಯರು ಹಿರಿಯ ಪತ್ರಕರ್ತರ ಕೆ.ಎಂ. ಚಂದ್ರಶೇಖರ, ಎಸ್ ಪರಶುರಾಮ್,ಬಂದಾತರ  ಕೊಟ್ರೇಶ, ಸುವೇಭ್ ವಲಿ ಕೆ, ವೈ. ಹರ್ಷವರ್ಧನ , ಎಚ್ ದಾದಪೀರ್, ಪೂಜಾರ್ ಗಣೇಶ್ ,ಮತ್ತಿತರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

]]>
https://bisiloorapost.com/2024/04/28/kkotresh_selected_as_kotturu_taluka_karnataka_reporters_union_kotturu_ballari/feed/ 0 20112
ಕರ್ನಾಟಕ ಪತ್ರಕರ್ತರ ಸಂಘದ ಕೊಟ್ಟೂರು ತಾಲೂಕ ಅಧ್ಯಕ್ಷರಾಗಿ ಕೆ ಕೊಟ್ರೇಶ ಆಯ್ಕೆ https://bisiloorapost.com/2024/04/28/kkotresh_selected_as_presidentof_karnataka_reporters_unuon_kottur_ballari/ https://bisiloorapost.com/2024/04/28/kkotresh_selected_as_presidentof_karnataka_reporters_unuon_kottur_ballari/#respond Sun, 28 Apr 2024 04:50:06 +0000 https://bisiloorapost.com/?p=20107 BP NEWS: ಕೊಟ್ಟೂರು: ಏಪ್ರಿಲ್.28:  ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೊರವರ ಕೊಟ್ರೇಶ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಬಿ ಎಚ್ ರಾಜು ,ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಧ್ಯಕ್ಷ ಎಚ್ ವಿಜಯ್ ಕುಮಾರ್, ಉಪಾಧ್ಯಕ್ಷರಾಗಿ ಶಿರಿಬಿ ಕೊಟ್ರೇಶ್,ಉಪಾಧ್ಯಕ್ಷರಾಗಿ ಎಂ ಶ್ರೀನಿವಾಸ್ ,ಪ್ರಧಾನ ಕಾರ್ಯದರ್ಶಿಯಾಗಿ ಡಿ. ಸಿದ್ದಪ್ಪ ,ಖಜಾಂಚಿಯಾಗಿ ತೆಗ್ಗಿನಕೇರಿ ಕೊಟ್ರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಪ್ರಕಾಶ್,ಜಂಟಿ ಸಂಘಟನಾ ಕಾರ್ಯದರ್ಶಿಯಾಗಿ ಜಿ ಶಿವರಾಜ್ ಕನ್ನಡಿಗ, ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಸಂಘದ ಕಾರ್ಯಧ್ಯಕ್ಷ ಸೋಮಶೇಖರಯ್ಯ ಹಿರೇಮಠ್,  ಪ್ರಧಾನ ಕಾರ್ಯದರ್ಶಿ ಕಾಕುಬಾಳು ಪ್ರಕಾಶ್,,ಎಂ ಗೌಸ್ ಇವರ ಸಮ್ಮುಖದಲ್ಲಿ ಮತ್ತು ತಾಲೂಕು ಸದಸ್ಯರು ಹಿರಿಯ ಪತ್ರಕರ್ತರ ಕೆ.ಎಂ. ಚಂದ್ರಶೇಖರ, ಎಸ್ ಪರಶುರಾಮ್,ಬಂದಾತರ  ಕೊಟ್ರೇಶ, ಸುವೇಭ್ ವಲಿ ಕೆ, ವೈ. ಹರ್ಷವರ್ಧನ , ಎಚ್ ದಾದಪೀರ್, ಪೂಜಾರ್ ಗಣೇಶ್ ,ಮತ್ತಿತರರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

]]>
https://bisiloorapost.com/2024/04/28/kkotresh_selected_as_presidentof_karnataka_reporters_unuon_kottur_ballari/feed/ 0 20107
ಕನ್ನಡ ಹಿರಿಯ ನಟ ನಿರ್ದೇಶಕ ದ್ವಾರಕೀಶ್‌ ನಿಧನ; ಕಳಚಿದ ಸ್ಯಾಂಡಲ್‌ವುಡ್‌ನ ಹಿರಿಯ ಕೊಂಡಿ https://bisiloorapost.com/2024/04/16/sandalwood_senior_artist_director_producer_dwarakeesh_isnomore_bangalore/ https://bisiloorapost.com/2024/04/16/sandalwood_senior_artist_director_producer_dwarakeesh_isnomore_bangalore/#respond Tue, 16 Apr 2024 06:41:55 +0000 https://bisiloorapost.com/?p=20100 BP NEWS: ಬೆಂಗಳೂರು: ಏಪ್ರಿಲ್.16: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಇವರು ಬಳಲುತ್ತಿದ್ದರು. ನಟ ದ್ವಾರಕೀಶ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಅವರ ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂದು ದ್ವಾರಕೀಶ್‌ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದ ಇವರು ಕನ್ನಡದ ಪ್ರತಿಭಾನ್ವಿತ ನಟರಾಗಿ ಹೆಸರುವಾಸಿಯಾಗಿದ್ದರು.

ಕನ್ನಡ ನಟ ದ್ವಾರಕೀಶ್‌ ಅವರು 1942ರ ಆಗಸ್ಟ್‌ 19ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಶಾರದಾ ವಿಲಾಸ್‌ ಮತ್ತು ಬಾನುಮಯ್ಯ ಸ್ಕೂಲ್‌ನಲ್ಲಿ ಪಡೆದರು. ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್‌ ಆರಂಭಿಸಿದರು. ಭಾರತ್‌ ಆಟೋ ಸ್ಪೇರ್‌ ಹೆಸರಿನ ಶಾಪ್‌ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು.

]]>
https://bisiloorapost.com/2024/04/16/sandalwood_senior_artist_director_producer_dwarakeesh_isnomore_bangalore/feed/ 0 20100
ಬಳ್ಳಾರಿ: ಏ.15 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ https://bisiloorapost.com/2024/04/13/sslc_answer_papers_evaluvation_from_april15_ballari/ https://bisiloorapost.com/2024/04/13/sslc_answer_papers_evaluvation_from_april15_ballari/#respond Sat, 13 Apr 2024 07:17:49 +0000 https://bisiloorapost.com/?p=20095 BP NEWS: ಬಳ್ಳಾರಿ: ಏಪ್ರಿಲ್.12: ನಗರದ ಒಟ್ಟು 06 ಕೇಂದ್ರಗಳಲ್ಲಿ ಏ.15 ರಿಂದ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ವತಿಯಿಂದ 2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ, ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯಲಿದ್ದು, ಮೌಲ್ಯಮಾಪನದಲ್ಲಿ ಅವ್ಯವಹಾರಗಳನ್ನು ತಡೆಗಟ್ಟಲು ಮೌಲ್ಯ ಮಾಪನ ಕೇಂದ್ರಗಳ ಸುತ್ತಲೂ 1973ರ ಕಲಂ 144ರಲ್ಲಿನ ಪ್ರದತ್ತವಾದ ಅಧಿಕಾರ ಚಲಾಯಿಸಿ 200 ಮೀಟರ್ ಆವರಣವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.

ಮೌಲ್ಯಮಾಪನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮೌಲ್ಯಮಾಪನ ಕೇಂದ್ರಗಳಿಗೆ ಬಾಹ್ಯ ಮತ್ತು ಅನ್ಯ ವ್ಯಕ್ತಿಗಳು ಮತ್ತು ಪ್ರಚಾರಕ್ಕಾಗಿ ಬರುವ ಜನಪ್ರತಿನಿಧಿಗಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಸಮಯವಾಗಿರುವುದರಿಂದ, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು, ಮೌಲ್ಯಮಾಪನ ಕೆಂದ್ರಕ್ಕೆ ಭೇಟಿ ನೀಡುವ ಸಂಭವವಿರುವುದರಿಂದ, ರಾಜಕೀಯ ವ್ಯಕ್ತಿಗಳು ಮೌಲ್ಯಮಾಪನ ಕೆಂದ್ರಕ್ಕೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಮೌಲ್ಯಮಾಪನ ಕೇಂದ್ರದ 200 ಮೀಟರ್ ಸುತ್ತ ನಿಷೇಧಿತ ಪ್ರದೇಶವಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷಕ್ಕಾಗಲಿ ಅಥವಾ ಯಾವುದೇ ಸಂಘಟನೆಯಲ್ಲಿನ ವ್ಯಕ್ತಿಗಳು ಅಥವಾ ಯಾವುದೇ ಅನ್ಯವ್ಯಕ್ತಿಗಳು ಮೌಲ್ಯಮಾಪನ ಕೇಂದ್ರವನ್ನು ಪ್ರವೇಶಿಸುವುದು ನಿಷೇಧಿಸಲಾಗಿದೆ.
*ಮೌಲ್ಯಮಾಪನ ಕೇಂದ್ರಗಳು:*
ಬಳ್ಳಾರಿಯ ವೈ.ನಾಗೇಶ ಶಾಸ್ತ್ರಿ ನಗರದ ಶೆಟ್ಟರ ಗುರುಶಾಂತಪ್ಪ ಪ್ರೌಢಶಾಲೆ, ಗಾಂಧಿನಗರದ ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಅನಂತಪುರ ರಸ್ತೆಯ ಶಾಂತಿನಿಕೇತನ ಇಂಗ್ಲೀಷ್ ಮಾಧ್ಯಮ ಶಾಲೆ, ಕೌಲ್‍ಬಜಾರ್‍ನ ಸೆಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ, ಕಂಟೋನ್‍ಮೆಂಟ್‍ನ ನಂದಿ ಪ್ರೌಢಶಾಲೆ ಮತ್ತು ಕೌಲ್‍ಬಜಾರ್‍ನ ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ.
ಈ ಆದೇಶವು ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಮೌಲ್ಯ ಮಾಪನ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರೆಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

]]>
https://bisiloorapost.com/2024/04/13/sslc_answer_papers_evaluvation_from_april15_ballari/feed/ 0 20095
ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆ; ನಾಮಪತ್ರ ಸಲ್ಲಿಕೆ ಆರಂಭ https://bisiloorapost.com/2024/04/12/lokasabha_election_nomination_filing_starts_ballari/ https://bisiloorapost.com/2024/04/12/lokasabha_election_nomination_filing_starts_ballari/#respond Fri, 12 Apr 2024 13:55:38 +0000 https://bisiloorapost.com/?p=20088 BP NEWS: ಬಳ್ಳಾರಿ: ಏಪ್ರಿಲ್.12:

09-ಬಳ್ಳಾರಿ (ಪ.ಪಂ) ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏ.12 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೊದಲ ದಿನ 4 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.


ಮೊದಲನೇ ದಿನವಾದ ಶುಕ್ರವಾರದಂದು, ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ ಅವರು 2 ನಾಮಪತ್ರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರು 3 ನಾಮಪತ್ರ, ಬಿಜೆಪಿ ಅಭ್ಯರ್ಥಿ ಶ್ರೀರಾಮಲು ಅವರು 3 ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿ ಭಾಗ್ಯಲಕ್ಷ್ಮಿ ಅವರು 2 ನಾಮಪತ್ರ ಸೇರಿ ಒಟ್ಟು ನಾಲ್ವರು ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿವೆ.


ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆ ದಿನವಾಗಿದ್ದು, ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

]]>
https://bisiloorapost.com/2024/04/12/lokasabha_election_nomination_filing_starts_ballari/feed/ 0 20088
ಅದ್ದೂರಿಯಾಗಿ ನಡೆದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ. https://bisiloorapost.com/2024/04/10/veerabhadreshwara_jatre_ubbalagundi_sandoor_ballari/ https://bisiloorapost.com/2024/04/10/veerabhadreshwara_jatre_ubbalagundi_sandoor_ballari/#respond Wed, 10 Apr 2024 15:43:21 +0000 https://bisiloorapost.com/?p=20084 BP NEWS: ಬಳ್ಳಾರಿ: ಏಪ್ರಿಲ್.10:  ಸಂಡೂರು ತಾಲೂಕಿನ ಬಳ್ಳಾರಿ ಜಿಲ್ಲೆಯಲ್ಲಿ ಬರುವ ಉಬ್ಬಲಗಂಡಿ ಗ್ರಾಮದಲ್ಲಿ ಇಂದು ಶ್ರೀ ಗಂಡಿ ವೀರಭದ್ರೇಶ್ವರ ದೇವರ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆದಿದ್ದು, ಜನ ಸಾಗರದ ಅಲೆಯಂತೆ ಹರಿದು ಬಂದಿದ್ದರು.
ಈ ರಥೋತ್ಸವವನ್ನು ಊರಿನ ಸರ್ವ ಭಕ್ತಾದಿಗಳು ಹಾಗೂ ಸುತ್ತ ಮುತ್ತಲಿನ ಊರಿನ ಭಕ್ತಾದಿಗಳು ಬಂದು ಸಂಭ್ರಮದಿಂದ ಆಚರಿಸಿ, ಸ್ವಾಮಿಯ ದರ್ಶನ ಭಾಗ್ಯ ಪಡೆದು, ಸ್ವಾಮಿಯ ಆಶೀರ್ವಾದಕ್ಕೆ ಪಾತ್ರರಾದರು.ಈ ರಥೋತ್ಸವವು ವರ್ಷಕ್ಕೊಮ್ಮೆ ನಡೆಯುತ್ತದೆ ಆದರೂ  ಪ್ರತಿದಿನವೂ ನೆನೆಸುವಂತಹ ಜಾತ್ರಾ ಮಹೋತ್ಸವವೂ ಇದಾಗಿರುತ್ತದೆ ಎಂದು ಊರಿನ ಜನ ಮನಪೂರ್ತಿಯಾಗಿ, ಖುಷಿಯಿಂದ ಜೊತೆಗೆ ಸ್ವಾಮಿಯ ಕೃಪೆ ಇಂದ ನಾವು ನೆಮ್ಮದಿಯಾಗಿ ಇದ್ದೇವೆ, ಜನರು ಸ್ವಾಮಿಯ ದರ್ಶನ್ ಭಾಗ್ಯದಿಂದ ಕೃತಾರ್ಥ ರಾಗಬೇಕೆಂದು ಬಿಪಿ ನ್ಯೂಸ್ ಮೂಲಕ ಮನವಿ ಮಾಡಿಕೊಂಡರು.

]]>
https://bisiloorapost.com/2024/04/10/veerabhadreshwara_jatre_ubbalagundi_sandoor_ballari/feed/ 0 20084
ಬಿಸಿಲಿನ ಶಾಖಾಘಾತ: ನಿರ್ಜನ ಪ್ರದೇಶದಲ್ಲಿ ಒಬ್ಬರೇ ಓಡಾಡುವುದು ತಪ್ಪಿಸಿ https://bisiloorapost.com/2024/04/10/safe_tkprecautions_avoid_heavy_sunny_in_ballari/ https://bisiloorapost.com/2024/04/10/safe_tkprecautions_avoid_heavy_sunny_in_ballari/#respond Wed, 10 Apr 2024 13:58:48 +0000 https://bisiloorapost.com/?p=20081 BP NEWS: ಬಳ್ಳಾರಿ: ಏಪ್ರಿಲ್.10:

ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಪ್ರಖರವಾಗಿ ಕಂಡುಬರುತ್ತಿದ್ದು, ಬಿಸಿಲಿನ ಶಾಖಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚಿದ್ದು, ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರು ಒಬ್ಬರೇ ಓಡಾಡುವುದನ್ನು ತಪ್ಪಿಸುವ ಮೂಲಕ ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವೈ.ರಮೇಶ ಬಾಬು ಕೋರಿದ್ದಾರೆ.
ಮಧ್ಯಾಹ್ನ 01 ರಿಂದ 04 ಗಂಟೆ ಅವಧಿಯಲ್ಲಿ ವಯೋವೃದ್ದರು, ಮಕ್ಕಳು, ಗರ್ಭಿಣಿ ಮತ್ತು ದೀರ್ಘಕಾಲಿನ ಖಾಯಿಲೆಗಳಿಗೆ ಔಷಧಿ ಸೇವಿಸುವ ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು. ಯಾರೂ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಗರಾಗಿ ಹೋಗದೇ ಸೂರ್ಯಾಘಾತದ ಅನಾಹುತದಿಂದ ತಪ್ಪಿಸಲು ಪ್ರತಿಯೊಬ್ಬರೂ ಆರೋಗ್ಯ ಇಲಾಖೆಗೆ ಕೈ ಜೋಡಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿರ್ಜಲೀಕರಣ ತಡೆಗಟ್ಟಲು ಓ.ಆರ್.ಎಸ್ ಜೀವಜಲ ಪುಡಿಯನ್ನು ಅಗತ್ಯವುಳ್ಳವರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ.
ಓ.ಆರ್.ಎಸ್. ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗಡೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜರುಗುತ್ತಿರುವ ಪ್ರಮುಖ ಜಾತ್ರೆಗಳಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆದು ಓಆರ್‍ಎಸ್ ಜೀವಜಲವನ್ನು ಸಿದ್ದಪಡಿಸಿ ಜನತೆಗೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ.
ಜಿಲ್ಲಾ ಕಾಲರಾ ತಂಡದಿಂದ ಕುಡಿಯುವ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷಿಸಿ ಕುಡಿಯಲು ಯೋಗ್ಯವೆಂದು ಖಚಿತಪಡಿಸಿದ ನಂತರವೇ ಜಾತ್ರೆಯಲ್ಲಿ ಯಾವುದೇ ವಾಂತಿ, ಬೇಧಿ ಪ್ರಕರಣಗಳು ವರದಿಯಾಗದಂತೆ ಕ್ರಮವಹಿಸಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ ಜಿಲ್ಲೆಯ ಗಡಿಭಾಗದಲ್ಲಿ ಹಾಗೂ ಇತರೆಡೆ ತೆರೆದಿರುವ 24 ಚೆಕ್‍ಪೋಸ್ಟ್ ಸಿಬ್ಬಂದಿಯವರಿಗೆ ಓಆರ್‍ಎಸ್ ಪೊಟ್ಟಣಗಳನ್ನು ಹಾಗೂ ತುರ್ತು ಚಿಕಿತ್ಸಾ ಔಷಧಿಗಳನ್ನು ವಿತರಿಸಲಾಗಿದೆ.
ಸಾರ್ವಜನಿಕರು ಮಧ್ಯಾಹ್ನದ ವೇಳೆ ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರಗಡೆ ಬರುವಾಗ ಕುಡಿಯುವ ಶುದ್ದವಾದ ನೀರು, ಹಾಗೂ ಛತ್ರಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ತಲೆಯ ಮೇಲೆ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

]]>
https://bisiloorapost.com/2024/04/10/safe_tkprecautions_avoid_heavy_sunny_in_ballari/feed/ 0 20081
ಬಳ್ಳಾರಿ: ಮತದಾನ ಪ್ರಮಾಣ ಹೆಚ್ಚಳಕ್ಕೆ ಸೈಕಲ್ ಜಾಥಾ https://bisiloorapost.com/2024/04/07/cyclepared_for_voting_awarness_ballari/ https://bisiloorapost.com/2024/04/07/cyclepared_for_voting_awarness_ballari/#respond Sun, 07 Apr 2024 08:25:22 +0000 https://bisiloorapost.com/?p=20071 BP NEWS: ಬಳ್ಳಾರಿ: ಏಪ್ರಿಲ್.07:
ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬರುವ ಮೇ. 07 ರಂದು ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ಮತ ಚಲಾಯಿಸಬೇಕು. ಮತದಾನ ಮಾಡುವುದು ಜವಾಬ್ದಾರಿಯುತ ನಾಗರಿಕರ ಆದ್ಯ ಕರ್ತವ್ಯವಾಗಿದೆ ಟಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾನ ಜಾಗೃತಿ ಅಂಗವಾಗಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಿಂದ ಭಾನುವಾರ ಆಯೋಜಿಸಿದ್ದ ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ಒಂದು ಮೂಲಭೂತ ಹಕ್ಕು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರು ಭಾಗವಹಿಸಿ ಮತ ಚಲಾವಣೆ ಮಾಡಿದಾಗ ಮಾತ್ರ ಪ್ರಜಾ ಪ್ರಭುತ್ವದಲ್ಲಿನ ನಮ್ಮ ಹಕ್ಕುಗಳ ಪರವಾಗಿ ಪ್ರಶ್ನಿಸಲು ಅರ್ಹರಾಗಿರುತ್ತೇವೆ ಎಂದರು.
ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಹೊಸದಾಗಿ ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಅನುವು ಮಾಡಿದೆ. ಹೆಸರಿಲ್ಲದವರು ಏ.09 ರ ಒಳಗಾಗಿ ತಮ್ಮ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಚುನಾವಣೆಗಳು ದೇಶದಲ್ಲಿ ಹಬ್ಬದ ಸಂಭ್ರಮವಾಗಿದ್ದು, ಸುಭದ್ರ ಪ್ರಜಾಪ್ರಭುತ್ವ ನಿರ್ಮಿಸಲು ಅರ್ಹ ಮತದಾರರು ತಪ್ಪದೇ ಮತ ಚಲಾವಣೆ ಮಾಡಬೇಕು ಎಂದರು.
ಜಿಲ್ಲಾಡಳಿತದ ಸಹಯೋಗದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಮತದಾನ ಮಹತ್ವ ಕುರಿತು ಮನವರಿಕೆ ಮಾಡಲಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡ ನೂರಕ್ಕೆ ನೂರರಷ್ಟು ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರು ಬಂಡಾರು ಅವರು ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ ಚಲಾವಣೆ ಮಾಡುವುದು ಮುಖ್ಯವಾಗಿದ್ದು, ದೇಶದ ಹಿತ ರಕ್ಷಣೆಗೆ ಪ್ರಜೆಗಳು ತಪ್ಪದೇ ಮತ ಚಲಾಯಿಸಿ ಎಂದು ಕಿವಿಮಾತು ಹೇಳಿದರು.
ಬಳಿಕ ಮತದಾನದ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸಾರ್ವಜನಿಕರಲ್ಲಿ ಮತದಾನ ಅರಿವು ಮೂಡಿಸುವ ಸಲುವಾಗಿ ‘ನಾನು ಹೆಮ್ಮೆಯ ಮತದಾರ’ ಎನ್ನುವ ಘೋಷಣೆಯ ಸೆಲ್ಫಿ ಬೂತ್ ಪಾಯಿಂಟ್ ಹಾಕಲಾಗಿತ್ತು.
ಇದೇ ವೇಳೆ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ‘ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ’ ಎಂದು ಎಲ್ಲಾ ಅಧಿಕಾರಿಗಳು, ಸಾರ್ವಜನಿಕರು ಸಹಿ ಹಾಕಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ಹೇಮಂತ್, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಬಳ್ಳಾರಿ ತಹಸೀಲ್ದಾರ್ ಗುರುರಾಜ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಬಿ.ಉಮಾದೇವಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಮತದಾನ ಜಾಗೃತಿ ಸೈಕಲ್ ಜಾಥಾವು ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ-ಹೆಚ್.ಆರ್.ಗವಿಯಪ್ಪ ವೃತ್ತ-ಕೋಟೆ ಪ್ರದೇಶ(ಶ್ರೀಮೇಧಾ ಕಾಲೇಜು ಮುಂಭಾಗ)-ಮೊದಲನೇ ರೈಲ್ವೇ ಗೇಟ್-ಸುಧಾ ಕ್ರಾಸ್-ಇನ್‍ಫ್ಯಾಂಟರಿ ರಸ್ತೆ-ಎಸ್‍ಪಿ ವೃತ್ತದ ಮೂಲಕ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ತಲುಪಿ ಕೊನೆಗೊಂಡಿತು.

]]>
https://bisiloorapost.com/2024/04/07/cyclepared_for_voting_awarness_ballari/feed/ 0 20071
ಸಂಡೂರು: ವಿಕಲಾಂಗ ಚೇತನರಿಂದ ಮತದಾನ ಜಾಗೃತಿ https://bisiloorapost.com/2024/04/06/voting_awarness_special_chetana_mens_sandoor/ https://bisiloorapost.com/2024/04/06/voting_awarness_special_chetana_mens_sandoor/#respond Sat, 06 Apr 2024 13:58:27 +0000 https://bisiloorapost.com/?p=20067 BP NEWS: ಬಳ್ಳಾರಿ: ಏಪ್ರಿಲ್.06:

ಮತದಾನ ಜಾಗೃತಿ ಮೂಡಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡಿರುವ ವಿಕಲಾಂಗ ಚೇತನರ ಕಾರ್ಯ ಶ್ಲಾಘನೀಯ ಎಂದು ಸಂಡೂರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಸತೀಶ್ ಅವರು ಹೇಳಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ತಾಲ್ಲೂಕು ಸ್ವಿಪ್ ಸಮಿತಿ, ತಾಲ್ಲೂಕು ಆಡಳಿತ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ (ಬೈಕ್) ಮತದಾನ ಜಾಗೃತಿ ಜಾಥಕ್ಕೆ ಹಸಿರು ಬಾವುಟ ಹಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸುಭದ್ರ ದೇಶದ ಭವಿಷ್ಯಕ್ಕಾಗಿ ಪ್ರಜೆಗಳೇ ಪ್ರಭುಗಳು ಆಗಿದ್ದು, ಪ್ರಜೆಗಳು ಯಾವುದೆ ಆಮೀಷಕ್ಕೆ ಒಳಗಾಗದೆ ಮತದಾನ ಮಾಡಿ ಎಂದು ಹೇಳಿದರು.
ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಷಡಕ್ಷರಯ್ಯ ಅವರು ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತಚಲಾಯಿಸಿ ಹಾಗೂ ವಿಕಲಚೇತನರು ಸಹ ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಲು ಸೌಕರ್ಯ ಕಲ್ಪಿಸಲಾಗಿದೆ ಎಂದರು.
ರ್ಯಾಂಪ್ಸ್, ರೈಲಿಂಗ್ ವ್ಹೀಲ್ ಚೇರ್, ಬೂತ್ ಕನ್ನಡಿ, ವಿಕಲಚೇತನರಿಗೆ ಸಾರಿಗೆ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು, ಮನೆಯಿಂದ ಬಂದು ಮತ ಹಾಕದೆ ಇರುವವರಿಗೆ 12 ಡಿ ನಮೂನೆ ವಿತರಿಸಿ ಮತಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು ಎಂದರು.
ಬಳಿಕ ಎಲ್ಲರೂ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆ ನಾಗಪ್ಪ, ಸಹಾಯಕ ನಿರ್ದೇಶಕ ವೆಂಕಟೇಶ್, ವಿಕಲಚೇತನರ ವಿಭಾಗದಿಂದ ಎಂಆರ್‍ಡಬ್ಲ್ಯೂ ಸಿ.ಕರಿಬಸಜ್ಜ ಹಾಗೂ ಎಲ್ಲಾ ವಿಆರ್‍ಡಬ್ಲ್ಯೂ ಮತ್ತು ಯುಆರ್‍ಡಬ್ಲ್ಯೂ ಕಾರ್ಯಕರ್ತರು ಭಾಗವಹಿಸಿದ್ದರು.
ಜಾಗೃತಿ ಜಾಥಾವು ತಾಲ್ಲೂಕು ಪಂಚಾಯಿತಿ ಆವರಣದಿಂದ ಆರಂಭವಾಗಿ ವಿಜಯ ಸರ್ಕಲ್, ಕೃಷ್ಣಾನಗರ ಗ್ರಾಮದ ಬಿಕೆಜಿ ಶಾಲೆ, ಪುರಸಭೆ, ಬಸ್ ನಿಲ್ದಾಣದ ಕೆಎಸ್‍ಆರ್‍ಟಿಸಿ ಬಸ್ ಡಿಪೆÇೀ ಮಾರ್ಗವಾಗಿ ಅರಣ್ಯ ಇಲಾಖೆ ಕಚೇರಿವರೆಗೆ ತಲುಪಿ ಮರಳಿ ಪುರಸಭೆ ಬಸ್ ನಿಲ್ದಾಣದಿಂದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಕೊನೆಗೊಂಡಿತು.

]]>
https://bisiloorapost.com/2024/04/06/voting_awarness_special_chetana_mens_sandoor/feed/ 0 20067
ಮೇಯರ್ ಚುನಾವಣೆ ಮತ್ತೆ ಮುಂದೂಡಿಕೆ..?? https://bisiloorapost.com/2024/03/27/mayor_election_postponed/ https://bisiloorapost.com/2024/03/27/mayor_election_postponed/#respond Wed, 27 Mar 2024 11:16:52 +0000 https://bisiloorapost.com/?p=20057 ಬಳ್ಳಾರಿ : ಕುತೂಹಲ‌ ಮೂಡಿಸಿದ್ದ  ಮಹಾನಗರ ಪಾಲಿಕೆ ಮೇಯರ್ ಚುನಾವಣೆಯನ್ನ ಕಾರಣಾಂತರಗಳಿಂದ ಮುಂದೂಡಲಾಗಿದೆ‌.

ಕರ್ನಾಟಕದಲ್ಲಿ ಚುಕ್ಕಾಣಿ ಹಿಡಿದ ಏಕೈಕ‌ ಪಾಲಿಕೆ ಬಳ್ಳಾರಿಯದ್ದಾಗಿದ್ದು, ಜನಾರ್ದನ ರೆಡ್ಡಿ ಬಿಜೆಪಿ‌ ಸೇರಿರುವುದರಿಂದ,  ಮತ್ತೆ ಕೈ ಚಳಕ‌ತೋರಿಸುತ್ತಾರಾ ಅನ್ನುವ ಆತಂಕದಲ್ಲಿ  ಮೇಯರ್ ಅಯ್ಕೆ ಬಳ್ಳಾರಿ ಉಸ್ತುವಾರಿ‌  ಸಚಿವರಾದ ಬಿ.ನಾಗೇಂದ್ರ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದ ಬಾರಿ ಮೇಯರ್ ಎಸ್ಸಿ ಮಹಿಳೆ‌ ಮೀಸಲಾತಿಯ ಸಂಧರ್ಭದಲ್ಲಿಯೂ ಕೂಡ ಚುನಾವಣೆಯನ್ನು ಒಂದು‌ ತಿಂಗಳ ಮುಂದೂಡಲಾಗಿತ್ತು.. ಈ ಬಾರಿಯೂ ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗುತ್ತಿರುವ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸದ್ಯ ಮುಲ್ಲಂಗಿ‌ ನಂದೀಶ್, ಪಿ.ಗಾದೆಪ್ಪ,  ಪ್ರಭಂಜನ್, ಪೇರಂ ವಿವೇಕ್, ರೇಸಿನಲ್ಲಿದ್ದು, ಮೇಯರ್ ಆಗಿ ಒಂದು ವರ್ಷ ಪ್ರಬುದ್ದ ಆಡಳಿತ ನಡೆಸಿದ ಶ್ರೀಮತಿ ರಾಜೇಶ್ವರಿ  ಸುಬ್ಬರಾಯುಡು ಅವರನ್ನ ಮತ್ತೊಮ್ಮೆ ಮೇಯರ್ ಮಾಡುವ ಬಗ್ಗೆನೂ ಹೈಕಮಾಂಡ್ ನಲ್ಲಿ ಚರ್ಚೆ ಮಾಡಲಾಗುತ್ತಿದೆ‌.

ಭರ್ಜರಿ ಜನಪ್ರಿಯತೆಯನ್ನ ಗಳಿಸಿದ್ದ ಮಹಮ್ಮದ್  ಅಸೀಫ್ ಕಣಕ್ಕಿಳಿಯುವುದಿಲ್ಲ ಅಂತ ಬಹಿರಂಗವಾಗಿಯೇ ಹೇಳಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಮೇ 10 ರ ನಂತರ ಮೇಯರ್ ಚುನಾವಣೆ ಮತ್ತೆ ಗರಿಗೆದರಿಲಿದೆ. ಆಗ ಇನ್ನು ಯರ್ಯಾರು ಅಖಾಡಕ್ಕಿ‌ಇಳಲಿದ್ದಾರೋ ಗೊತ್ತಿಲ್ಲ. ಜನಾರ್ಧನ ರೆಡ್ಡಿಯಂತು ಪಾಲಿಕೆಯ‌ಮೇಲೆ  ಕಣ್ಣಿಟ್ಟಿರುವುದು ಸತ್ಯ ಅನ್ನುತ್ತಿದೆ ಕಮಲದ ಮಂದಿ..!

ಪಾಲಿಕೆಗೆ ನೂತನ ಮೇಯರ್ ಆಯ್ಕೆಯಾಗಿ ಬಳ್ಳಾರಿಯ ಅಭಿವದ್ಧಿಯಾಗಲಿ ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

]]>
https://bisiloorapost.com/2024/03/27/mayor_election_postponed/feed/ 0 20057