ಪಾಲಿಕೆಯಿಂದ ಹಿರಿಯ ನಾಗರಿಕರ ಸಬಲೀಕರಣಕ್ಕೆ ವಿಶೇಷ ಸಹಕಾರ: ಮೇಯರ್ ಡಿ.ತ್ರಿವೇಣಿ

0
59

BP NEWS: ಬಳ್ಳಾರಿ: ಅಕ್ಟೋಬರ್.01:
ಮಹಾನಗರ ಪಾಲಿಕೆಯಡಿ ಬರುವ ಉದ್ಯಾನವನಗಳಲ್ಲಿ ಹಿರಿಯ ನಾಗರಿಕರಿಗಾಗಿ ವಾಕಿಂಗ್ ಪಾಥ್‍ವೇ ನಿರ್ಮಾಣ, ಓದಲು ಪತ್ರಿಕೆಗಳು ಹಾಗೂ ಗ್ರಂಥಾಲಯ ಸೇರಿದಂತೆ ಅವಶ್ಯಕ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು, ಇದಕ್ಕೆ ಪಾಲಿಕೆಯಿಂದ ಸಂಪೂರ್ಣ ಬೆಂಬಲವಿದೆ ಎಂದು ಮೇಯರ್ ಡಿ.ತ್ರಿವೇಣಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಪಾರ್ವತಿ ನಗರದ ಪೆÇಲೀಸ್ ಜಿಮ್‍ಖಾನ್‍ದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಚಿಕ್ಕವಳು; ನಿಮ್ಮ ಮೊಮ್ಮಗಳು ಇದ್ದಂತೆ, ನೀವು ಹಿರಿಯರು ನನಗೆ ಆಶೀರ್ವಧಿಸಬೇಕು. ನಿಮಗೆ ಯಾವುದೇ ಸಮಸ್ಯೆ ಅಥವಾ ಅಗತ್ಯ ಸಹಕಾರ ಬೇಕಾದಲ್ಲಿ ಪಾಲಿಕೆಯಿಂದ ಒದಗಿಸಲಾಗುವುದು ಎಂದು ಭಾವುಕರಾದರು.
ಮಹಾನಗರ ಉಪಮೇಯರ್ ಬಿ.ಜಾನಕಿ ಅವರು ಮಾತನಾಡಿ, ಪೋಷಕರು ಮಕ್ಕಳ ಮೇಲೆ ಅತಿಯಾದ ಕಾಳಜಿ ತೋರಿಸುವುದರಿಂದ, ಅವರು ತಂದೆ-ತಾಯಂದಿರನ್ನು ಕಡೆಗಣಿಸಿರುವ ಘಟನೆಗಳನ್ನು ಸಮಾಜದಲ್ಲಿ ಕಾಣುತ್ತೇವೆ; ಹಿರಿಯ ನಾಗರಿಕರಾದ ನಾವು, ಕಾಲ-ಕಾಲಕ್ಕೆ ತಕ್ಕಂತೆ ಬದಲಾಗೋಣ, ಇದರಿಂದ ಮಕ್ಕಳು, ಸೊಸೆಯಂದಿರ ಜೊತೆ ಸಾಮರಸ್ಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶತಾಯುಷಿಗಳಿಗೆ ಸನ್ಮಾನ ಮಾಡಲಾಯಿತು. ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸೋಮಶೇಖರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಮಕೃಷ್ಣ, ಹಿರಿಯ ಸಾಹಿತಿಗಳಾದ ಎಂ.ಡಿ.ವೆಂಕಮ್ಮ, ಸಿ.ಜಿ.ಹಂಪಣ್ಣ, ಜಿಲ್ಲಾ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ, ಹಿರಿಯರಾದ ಉಮಾಪತಿ ಗೌಡ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ ಸೇರಿದಂತೆ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here