BP News Karnataka Super Fast 05-09-2022

0
196

ಮಾರುತಿ ಪ್ರಸಾದ್ ಬುಡಾ ಅಧ್ಯಕ್ಷರಾಗಿ ನೇಮಕ


ಬಳ್ಳಾರಿ,ಸೆ.5-ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶರ್ವಶೆಟ್ಟಿ ಮಾರುತಿ ಪ್ರಸಾದ್ ನೇಮಕಗೊಂಡಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ., ಇವರು ಈ ಕುರಿತು ಆದೇಶ ಪತ್ರ ಹೊರಡಿಸಿದ್ದು ತಕ್ಷಣದಿಂದಲೇ ಮುಂದಿನ ಮೂರು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

——

ಜವಬ್ದಾರಿಯುತವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸಂಸದ ವೈ.ದೇವೇಂದ್ರಪ್ಪ ತಾಕೀತು


ಬಳ್ಳಾರಿ,ಸೆ.05-ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯನಿರ್ವಹಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು;ಅಂದಾಗ ಮಾತ್ರ ಸರಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಸಂಸದ ವೈ.ದೇವೇಂದ್ರಪ್ಪ ಅವರು ಹೇಳಿದರು.
ಬಳ್ಳಾರಿ ಜಿಪಂ ವತಿಯಿಂದ ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ದಿಶಾ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
——-
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ


ಬಳ್ಳಾರಿ,ಸೆ.5-*ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:2022-23ನೇ ಸಾಲಿನಡಿ 12ಜನರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಿ ಗೌರವಿಸಿದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಕಿರಿಯ ಪ್ರಾಥಮಿಕ ವಿಭಾಗ, ಪೂರ್ವ ತಾಲೂಕು, ಪಶ್ಚಿಮ ತಾಲೂಕಿನ ಕುರುಗೋಡು, ಹಿರಿಯ ಪ್ರಾಥಮಿಕ ವಿಭಾಗ: ಹಿರಿಯ ಪ್ರಾಥಮಿಕ ವಿಭಾಗಪ್ರೌಢ ಶಾಲಾ ವಿಭಾಗದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತ.
—–
ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು


ಬಳ್ಳಾರಿ,ಸೆ.05-ಒಂದು ದೇಶ ಪ್ರಗತಿ ಹೊಂದಬೇಕಾದರೆ ಅಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ದೇಶದ ನಿರ್ಮಾಣ ಹಾಗೂ ವಿನಾಶ ಮಾಡುವ ಎರಡೂ ಶಕ್ತಿ ಶಿಕ್ಷಕರಿಗೆ ಇದೆ. ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಗುರು ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
——-
ಕಾಂಗ್ರೆಸ್ ಪಕ್ಷದಿಂದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ


ಬಳ್ಳಾರಿ,ಸೆ.5-ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸÀರ್ವೆಪಲ್ಲಿ ರಾಧಾಕೃಷ್ಣರವರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಭಾರತದ ಮೊದಲ ಉಪರಾಷ್ಟ್ರಪತಿ, ಪ್ರಖ್ಯಾತ ಶಿಕ್ಷಣ ತಜ್ಞರು ಆದ ರಾಧಾಕೃಷ್ಣರವರು ದೇಶಕ್ಕೆ ನೀಡಿದಂತಹ ಕೊಡುಗೆ ಮತ್ತು ಅವರು ಶಿಕ್ಷಣ ಕ್ಷೇತ್ರದಲ್ಲಿ ಹೊಂದಿದ್ದ ಅಪಾರವಾದ ಜ್ಞಾನವನ್ನು ಸ್ಮರಿಸಿದರು.
——

ಲಲಿತಕಲೆಗಳು ದೇಶದ ಸಾಂಸ್ಕøತಿಕ ದ್ಯೋತಕಗಳು: ಡಾ.ರಾಜಪ್ಪ ದಳವಾಯಿ


ಬಳ್ಳಾರಿ,ಆ.6-ವಿದ್ಯಾರ್ಥಿಗಳು ಅಂಕಗಳನ್ನು ಗಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ನಮ್ಮ ನೆಲದ ಜೀವಂತ ಲಲಿತಕಲೆಗಳನ್ನು ಮೈಗೂಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆ. ಲಲಿತ ಕಲೆಗಳು ದೇಶದ ಸಾಂಸ್ಕøತಿಕ ದ್ಯೋತಕಗಳಾಗಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ರಾಜಪ್ಪ ದಳವಾ ಹೇಳಿದರು.
ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ “ವಿದ್ಯಾರ್ಥಿಗಳು ಮತ್ತು ಲಲಿತಕಲೆಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ ್ಯಅತಿಥಿಗಳಾಗಿ ಭಾಗವಹಿಸಿ ಮಾತನಾದರು.
—–
ವಿಭೂತಿ ಪುರುಷ ವಿದ್ಯಾರಣ್ಯ


ಬಳ್ಳಾರಿ,ಸೆ.5-ವಿದ್ಯಾರಣ್ಯರನ್ನು ಅರಿಯಲು ಅಪರೂದಪ ಗ್ರಂಥವೊಂದು ಐತಿಹಾಸಿಕ ಪ್ರಿಯರಿಗೆ ಲಭಿಸಿದೆ. ಶತಾವಧಾನಿ ಡಾ.ಆರ್.ಗಣೇಶ ಇವರು ಪುಸ್ತಕದ ಮೊದಲ ವಿಭೂತಿ ಪುರುಷ ವಿದ್ಯಾರಣ್ಯ ಆಳವಾದ ಅಧ್ಯಯನ, ಅಧಿಕೃತ ಆಕರ ಮಾಹಿತಿಗಳ ಸಂಗ್ರಹ, ತಾತ್ವಿಕ ಪ್ರಸ್ತುತಿ. ಗಟ್ಟಿ ನೆಲೆಗಟ್ಟಿನ ವಿಶ್ಲೇಷಣೆ, ವಿಮರ್ಶೆ ಮತ್ತು ಚಿಂತನೆಯ ಮೌಲಿಕ ಕೃತಿ ಇದಾಗಿದೆ. ವಿದ್ಯಾರಣ್ಯ ತೀರ್ಥರ ಸ್ಮೃತಿಯಲ್ಲಿ ಪುಸ್ತಕವನ್ನು ಕೊಂಡು ಓದಬಹುದು. ಪುಸ್ತಕ ಸಂಪರ್ಕ ವಾಸುಕಿ ಪುಸ್ತಕಾಲಯ, ಬಳ್ಳಾರಿ. ಮೊ.ನಂ: 9241288581.
—–

 

LEAVE A REPLY

Please enter your comment!
Please enter your name here