ಬುದ್ಧರ ಉಪದೇಶಗಳನ್ನು ಪ್ರಚಾರ ಮಾಡುವಲ್ಲಿ ಅಶೋಕ ಮಹಾರಾಜರ ಮಹತ್ವದ ಪಾತ್ರ: ತೇರೋ ಬಂತೇಜೀ

0
39

Bp News Karnataka, ಸಿರುಗುಪ್ಪ, Dec.07.2024:

  ಡಿಸೆಂಬರ್ 6ರಂದು ಅಂಬೇಡ್ಕರ್ ಅವರ ಪರಿನಿಬ್ಬಣ ದಿನ ಆಚರಣೆ ಅಂಗವಾಗಿ ಸಿರುಗುಪ್ಪ ತಾಲೂಕಿನ ಸಮೀಪದ ನಿಟ್ಟೂರ್ ಗ್ರಾಮದ ಹತ್ತಿರ ಇರುವ, ಅಶೋಕನ ಶಿಲಾಶಾಸನ ತಾಣದ ಹತ್ತಿರ ಆಗಮಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಬುದ್ಧನ ಉಪದೇಶಗಳನ್ನು ಪ್ರಚಾರ ಮಾಡುವಲ್ಲಿ ಅಶೋಕ ಮಹಾ ರಾಜರ ಮಹತ್ವ ಪಾತ್ರ ವಹಿಸಿದರು. ಮುಂದಿನ ಸಾವಿರಾರು ವರ್ಷಗಳಿಗೂ ಬುದ್ಧರ ಉಪದೇಶಗಳು, ದೇಶದ ಚರಿತ್ರೆ ಮಾಹಿತಿ ಅವಶ್ಯಕವಾಗಿ ಬೇಕು ಎನ್ನುವ ದೃಷ್ಟಿಯಿಂದ ಕೆಲವು ಉಪದೇಶಗಳನ್ನು ದೊಡ್ಡ ಕಲ್ಲುಬಂಡೆಗಳ ಮೇಲೆ ಪಾಳಿ ಭಾಷೆಯ ಕೆತ್ತುವ ಕೆಲಸ ಆಗಿದೆ. ಮಾನವರು ಕನಿಷ್ಠ ಪ್ರಾಣಹತ್ಯೆ, ಕಳ್ಳತನ, ವ್ಯಭಿಚಾರ, ಮಾಡಬಾರದು, ಸುಳ್ಳು ಹೇಳಬಾರದು ಮಧ್ಯ,ಮಾದಕ ವಸ್ತುಗಳ ಸೇವನೆ ಮಾಡಬಾರದು ಎನ್ನುವ ಪಂಚಶೀಲಗಳನ್ನು ಅಳವಡಿಸಿಕೊಂಡು ಹೋಗಬೇಕೆಂದು ಪಂಚರ್ ಪಂಚಶೀಲಗಳನ್ನು ತ್ರಿಸರಣವನ್ನು ಬಂತೇಜೀ ಅವರು ಬೋಧಿಸಿದರು.

   ಅಂಬೇಡ್ಕರ ಅಧ್ಯಕ್ಷರ ಡಾ. ಕೊಡ್ಲಿ ಮಲ್ಲಿಕಾರ್ಜುನ ಮಾತನಾಡಿ ಇಲ್ಲಿವರೆಗೂ ನಾವು ಬುದ್ಧರ ಉಪದೇಶಗಳನ್ನು ಪ್ರಜ್ಞೆ ಇಲ್ಲದೆ ಬಾಳಿಕೊಂಡು ಬಂದಿದ್ದೇವೆ ಪಂಚಶೀಲ ಪಾದಯಾತ್ರೆಯಿಂದ ನಮಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ನಾವು ಸಂಪೂರ್ಣ ಬುದ್ಧರ ಹಾದಿಯಲ್ಲಿ ನಡೆಯುವ ನಿಲುವು ಹೊಂದಬೇಕೆಂದು ತಿಳಿಸಿದರು. ಸಿರುಗುಪ್ಪ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಾಲಿಭಾಷೆ ಶಿಕ್ಷಕರಾದ ರಣಧೀರ್ ಹೊಸಮನಿ ಅವರು ಶಾಸನದಲ್ಲಿ ಕೆತ್ತನೆಯಾಗಿರುವ ವಿಷಯವನ್ನು ತಿಳಿಸಿದರು.