ಮಾಧ್ಯಮದಿಂದ ಜನಸಾಮಾನ್ಯರ ಕಲ್ಯಾಣವಾಗಬೇಕು: ಪಾಂಡುರಂಗ ಮಾಂಡ್ರೆ

0
222

BP NEWS: ಬಳ್ಳಾರಿ: ಡಿಸೆಂಬರ್.08: ಮನುಷ್ಯ ಸಂಘಜೀವಿ. ಎಲ್ಲರೊಂದಿಗೆ ಬೆರೆತು ಜೀವನ ಸಾಗಿಸುವಂತಹ ಸಂಸ್ಕೃತಿ ನಮ್ಮ ದೇಶದ್ದು ಆ ದೃಷ್ಟಿಯನ್ನು ಇಟ್ಟುಕೊಂಡು ಮಾಧ್ಯಮಗಳು ಜನಸಾಮಾನ್ಯರ ಕಲ್ಯಾಣವಾಗುವ ವಿಷಯಗಳನ್ನು ಪ್ರಕಟಿಸಬೇಕು ಮಾಧ್ಯಮದಿಂದ ಸಮಾಜದಲ್ಲಿ ಉತ್ತಮವಾದ ಬದಲಾವಣೆಗಳಾಗಿ ಅಭಿವೃದ್ಧಿ ಎತ್ತ ಸಾಗುವ ಹಾಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಬಿ ಪಿ ನ್ಯೂಜಿನ ಹಿರಿಯ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾದ ಪಾಂಡುರಂಗ ಮಾಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಬಳ್ಳಾರಿಯ ಬಿಸಿಲೂರು ಪೋಸ್ಟ್ ಪತ್ರಿಕೆ ಹಾಗೂ ಬಿಪಿ ನ್ಯೂಸ್ ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ನಡೆದ ಅಭಿವೃದ್ಧಿ ಸಭೆಯಲ್ಲಿ ಮಾತನಾಡಿದರು.
ಪತ್ರಿಕೆಗಳು ಕೇವಲ ಸುದ್ದಿಗಳನ್ನು ಪ್ರಕಟಿಸುವಾಗ ಅಷ್ಟೇ ಅಲ್ಲ ಜೊತೆಗೆ ಜನಸಾಮಾನ್ಯರ ಜೀವನ ಶೈಲಿ ಯನ್ನು ಬದಲಾವಣೆ ಅಭಿವೃದ್ಧಿಯತ್ತ ಸಾಗುವಂತೆ ಮಾಡುವುದು ಮುಖ್ಯ ಎಂದು ಉದ್ದೇಶಿಸಿ ಹೇಳಿದರು.

ಬಿಪಿ ನ್ಯೂಸ್ ಹಾಗೂ ಬಿಸಿಲೂರು ಪೋಸ್ಟ್ ಪತ್ರಿಕೆಗಳು ಜನಸಾಮಾನ್ಯರ ಮಧ್ಯೆ ಇದ್ದು ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರುವಂತೆ ನಾವೆಲ್ಲರೂ ಶ್ರಮಿಸಬೇಕೆಂದು ಹಿರಿಯ ಸಂಪಾದಕ ಹಾಗೂ ಸಂಸ್ಥಾಪಕರಾದ ಅರುಣ ಭೂಪಾಲ್ ಸಭೆಯಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಪ್ರಾರಂಭವಾದ ತಾಂತ್ರಿಕ ವಿಭಾಗದ ವಿವರಗಳನ್ನು ಬಗ್ಗೆ ಬಿಪಿ‌ನ್ಯೂಸ್ ಪ್ರಧಾನ ವ್ಯವಸ್ಥಾಪಕರಾದ ಗಣೇಶ್ ಮಾಂಡ್ರೆಯವರು ಮೆಚ್ಚುಗೆಯ ಮಾತುಗಳನ್ನಾಡಿದರು.
ಬಳ್ಳಾರಿಯ ಮೋಕ ಮಲ್ಲೇಶ್ವರ ಕೇಬಲ್ ನೆಟವರ್ಕ್ ನ ಉಮಾಶಂಕರ್, ರಾಮಾಂಜಿನಿ, ಟೆಕ್ ಸಾಫ್ಟ್ ನ ವಣಿಚಂದ್ರ, ಸಾಫ್ಟ್ ವೇರ್ ಇಂಜಿನಿಯರ್ ಚೈತ್ರ ಮಾಂಡ್ರೆ ಉಪಸ್ಥಿತರಿದ್ದರು.
ಸಭೆಯಲ್ಲಿ ನವೀನ್ ಕುಮಾರ್, ವಿಜಯ್ ಕುಮಾರ, ಸೋಮಪ್ಪ, ಪರಿಣಿತ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here