BP NEWS: ಮಂಗಳೂರು: ಸೆಪ್ಟೆಂಬರ್.29
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ವಿದ್ಯೆಗೆ ಪ್ರಸಿದ್ಧರಾಗಿರುವ ದೇವಸ್ಥಾನ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಇದು ಸೂರತ್ಕಲ್ಲಿನಲ್ಲಿದೆ
ಪುರಾತನವಾದ ಈ ದೇವಸ್ಥಾನದ ಹಿಂದೆ ಬೃಹತ್ ಇತಿಹಾಸ ಅಡಗಿದೆ.
ಹಿಂದೆ ವಿದ್ಯಾಧರ ಋಷಿಗಳು ಇಲ್ಲಿ ಈಶ್ವರ ಲಿಂಗವನ್ನು ಸ್ಥಾಪಿಸಿದ್ದರಿಂದ ಈ ದೇವಸ್ಥಾನಕ್ಕೆ ಇಡ್ಯಾ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ
ದೇವಸ್ಥಾನವು ವಿದ್ಯೆಗೆ ಪ್ರಮುಖ ದೇವಸ್ಥಾನವಾಗಿದೆ.
ದೇವಸ್ಥಾನದ ಕೃಪೆಯಿಂದ ಇಂದು ವಿದ್ಯಾದಾಹಿನಿ ಶಾಲೆ, ಗೋವಿಂದ ದಾಸೋಹ ಕಾಲೇಜು, ಶ್ರೀ ಮಹಾ ಲಿಂಗೇಶ್ವರ ಕಾಲೇಜು ಈ ದೇವರ ನಾಮಾಂಕಿತದಿಂದ ನಡೆಯುತ್ತಿರುವುದು ವಿಶೇಷವಾಗಿದೆ.
ಬಹಳ ಸುಂದರವಾದ ಈ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುತ್ತಲೂ ಹಸಿರಿನಿಂದ ಹಾಗೂ ವೈಭವ ನೈಸರ್ಗಿಕ ಸಿರಿಯನ್ನು ಹೊಂದಿದೆ.
– ಶಿವಪುರಂ ನಾಗೇಶ ಶೆಟ್ಟಿ
ಬಿಪಿ ನ್ಯೂಸ್ ಮಂಗಳೂರು