ಬಳ್ಳಾರಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದ ಮೆಟ್ರಿಕಿ ಮುರಾರ್ಜಿ ದೇಸಾಯಿ ಶಾಲೆಯ ಮಕ್ಕಳು.

0
87

BP NEWS: ಬಳ್ಳಾರಿ: ಡಿಸೆಂಬರ್.03: 01/12/2022 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಳ್ಳಾರಿ 2022 -23 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು  ಬಳ್ಳಾರಿಯ ಎಸ್ ಕೆ ಮೋದಿ ಶಾಲೆಯ ಆವರಣದಲ್ಲಿ ನಡೆದವು.

5 ರಿಂದ 7ನೇ ತರಗತಿಯ ವೈಯಕ್ತಿಕ ವಿಭಾಗವಾದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜೇಂದ್ರ ಕುಮಾರ್. ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆ ಮೆಟ್ರಿಕಿ ಸಂಡೂರು ತಾಲೂಕು ಈ ವಿದ್ಯಾರ್ಥಿಯು ಜಿಲ್ಲಾ ಅಂತದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಂದರ್ಭದಲ್ಲಿ ಎಂ ಡಿ ಆರ್ ಎಸ್ ಶಾಲೆ ಮೆಟ್ರಿಕಿ ಶಾಲೆಯ ಪ್ರಾಂಶುಪಾಲರಾದ ಹನುಮಂತಪ್ಪ ಸರ್ ಹಾಗೂ ಇನ್ನೋರ್ವ ಪ್ರಾಂಶುಪಾಲರಾದ ಓಂಕಾರಪ್ಪ. ಎಲ್ಲಾ ಸಹ ಶಿಕ್ಷಕರು ಪ್ರಥಮ ಸ್ಥಾನ ಗಳಿಸಿದ ರಾಜೇಂದ್ರ ಕುಮಾರ್ ಹಾಗೂ ಚಿತ್ರಕಲಾ ಶಿಕ್ಷಕರಾದ ಡಿಜಿ ತಿರುಮಲ ಅವರನ್ನು ಬಿಪಿ ನ್ಯೂಸ್ ಮೂಲಕ ಅಭಿನಂದಿಸಿದರು. ಎಂ ಡಿ ಆರ್ ಎಸ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಹಂತದಲ್ಲಿ 5 ರಿಂದ7. ವೈಯಕ್ತಿಕ ವಿಭಾಗ ಕ್ಲೇ ಮಾಡ್ಲಿಂಗ್ ನಲ್ಲಿ ತೃತೀಯ ಸ್ಥಾನ.

ಇಂಗ್ಲಿಷ್ ಕಂಠಪಾಠ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೇ.8 ರಿಂದ12 ಸಾಮೂಹಿಕ ವಿಭಾಗದ ಸ್ಪರ್ಧೆಯಾದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ. ಸಂಡೂರು ತಾಲೂಕಿನ ಹೆಮ್ಮೆಯನ್ನು ಜಿಲ್ಲಾಮಟ್ಟದಲ್ಲಿ ಪಸರಿಸಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ

LEAVE A REPLY

Please enter your comment!
Please enter your name here